ಸಚಿನ್‌ ತೆಂಡುಲ್ಕರ್‌ ಮನೆ ಎದುರು ಪ್ರತಿಭಟನೆ

ಕೇರಳದ ಕೊಚ್ಚಿಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಸಚಿನ್ ತೆಂಡೂಲ್ಕರ್ ಅವರ ಕಟೌಟ್ ಮೇಲೆ ಕಪ್ಪುಮಸಿ ಸುರಿದ ೨ ದಿನಗಳಲ್ಲೇ ಸ್ವಾಭಿಮಾನಿ ಶೇತಕರಿ ಸಕ್ತಾನಾದ ಕಾರ್ಯಕರ್ತರು ಸೋಮವಾರ ಮುಂಬೈನ ಕ್ರಿಕೆಟಿಂಗ್ ದಂತಕಥೆ ಸಚಿನ್‌ ನಿವಾಸದ ಎದುರು ಪ್ರತಿಭಟನೆ ನಡೆಸಿದರು.
“ಸಚಿನ್‌ ನಮ್ಮ ತಂದೆಗಾಗಿ ನೀವು ಯಾವಾಗ ಟ್ವೀಟ್‌ ಮಾಡುತ್ತೀರಿʼ ಎಂದು ಬರೆದ ಪೋಸ್ಟರ್‌ ಹಿಡಿದುಕೊಂಡು ಪ್ರತಿಭಟನೆ ನಡೆಸಿದರು.
ಕೇಂದ್ರದ ವಿವಾದಾತ್ಮಕ ಮೂರು ಕೃಷಿ ಕಾನೂನುಗಳ ವಿರುದ್ಧ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ಹಾಲಿವುಡ್‌ ಸೆಲೆಬ್ರಿಟಿಗಳು ಹಾಗೂ ವಿದೇಶಗಳ ಕೆಲ ಗಣ್ಯರು ಹೇಳಿಕೆ ನೀಡಿದ್ದನ್ನು ಖಂಡಿಸಿ ಸಚಿನ್ ಟ್ವೀಟ್ ಮಾಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆದಿದೆ.
“ಭಾರತದ ಸಾರ್ವಭೌಮತ್ವವನ್ನು ರಾಜಿ ಮಾಡಲು ಸಾಧ್ಯವಿಲ್ಲ. ಬಾಹ್ಯ ಶಕ್ತಿಗಳು ಪ್ರೇಕ್ಷಕರಾಗಬಹುದು ಆದರೆ ಭಾಗವಹಿಸುವವರಲ್ಲ. ಭಾರತೀಯರು ಭಾರತವನ್ನು ಬಲ್ಲರು. ಒಂದು ರಾಷ್ಟ್ರವಾಗಿ ಒಗ್ಗಟ್ಟಾಗಿ ಉಳಿಯೋಣʼ ಎಂದು ಸಚಿನ್‌ ಟ್ವೀಟ್‌ ಮಾಡಿದ್ದರು.

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ಟೆಲಿಗ್ರಾಮ್ ಚಾನೆಲ್ ಸೇರಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

advertisement

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

/ 5. ಒಟ್ಟು ವೋಟುಗಳು

ಓದಿರಿ :-   ಮೂಡ್ ಆಫ್ ನೇಷನ್ ಸಮೀಕ್ಷೆ: 2024ರಲ್ಲಿಯೂ ಮೋದಿಯೇ ಪ್ರಧಾನಿಯಾಗಬೇಕೆಂದು ಅರ್ಧಕ್ಕಿಂತ ಹೆಚ್ಚು ಜನರ ಒಲವು; ಸಿಎಂಗಳಲ್ಲಿ ನವೀನ್‌ ಪಟ್ನಾಯಕ್‌ ಬೆಸ್ಟ್‌

ನಿಮ್ಮ ಕಾಮೆಂಟ್ ಬರೆಯಿರಿ

advertisement