ಕೊರೊನಾ ರೋಗಿಗಳ ಪತ್ತೆಗೆ ಚಿಪ್ಪಿಪಾರೈ ತಳಿ ನಾಯಿಗಳ ಬಳಕೆ

ನವ ದೆಹಲಿ: ಕೊರೊನಾ ಸೋಂಕಿತರನ್ನು ಪತ್ತೆ ಮಾಡುವ ನಿಟ್ಟಿನಲ್ಲಿ ಭಾರತೀಯ ಸೇನೆ ತಮಿಳುನಾಡಿನ ಚಿಪ್ಪಿಪಾರೈ ತಳಿಯ ನಾಯಿಗಳಿಗೆ ತರಬೇತಿ ನೀಡುತ್ತಿದೆ.
ಮಿಲಿಟರಿ ಶ್ವಾನ ಪಡೆಯಲ್ಲಿ ಜಯ ಹಾಗೂ ಮಣಿ ಎಂಬ ನಾಯಿಗಳು ಸೇರ್ಪಡೆಗೊಂಡಿವೆ. ವ್ಯಕ್ತಿಗಳ ಮೂತ್ರ ಹಾಗೂ ಬೆವರಿನ ವಾಸನೆ ಮೂಲಕ ಸೋಂಕಿತರನ್ನು ಪತ್ತೆ ಮಾಡಲು ನಾಯಿಗಳಿಗೆ ತರಬೇತಿ ನೀಡಲಾಗುತ್ತಿದೆ.
ಚಿಪ್ಪಿಪಾರೈ ತಳಿ ನಾಯಿಗಳು ತೆಳ್ಳನೇಯ ದೇಹ ಹಾಗೂ ಉದ್ದ ಕಾಲುಗಳನ್ನು ಹೊಂದಿವೆ.
ಕೋವಿಡ್ -19 ರೋಗಿಗಳ ಮೂತ್ರ ಮತ್ತು ಬೆವರಿನ ಮಾದರಿಗಳಿಂದ ಹೊರಹೊಮ್ಮುವ ನಿರ್ದಿಷ್ಟ ಬಯೋಮಾರ್ಕರ್‌ಗಳ ಕುರಿತು ನಾಯಿಗಳಿಗೆ ತರಬೇತಿ ನೀಡಲಾಗುತ್ತಿದೆ. ಇನ್ನೂ ಏಳು ನಾಯಿಗಳಿಗೆ ಸೇನೆಯಿಂದ ತರಬೇತಿ ನೀಡಲಾಗುವುದು. ತರಬೇತಿ ಪೂರ್ಣಗೊಂಡ ನಂತರ ಎಲ್ಲಾ ನಾಯಿಗಳನ್ನು ಶಿಬಿರಗಳಲ್ಲಿ ನಿಯೋಜಿಸಲಾಗುವುದು.
ವಿಶ್ವದ ವಿವಿಧೆಡೆ ಕ್ಯಾನ್ಸರ್, ಮಲೇರಿಯಾ, ಮಧುಮೇಹ ಮುಂತಾದ ರೋಗಗಳ ಪತ್ತೆಗಾಗಿ ಅನೇಕ ದೇಶಗಳು ನಾಯಿಗಳನ್ನು ಬಳಸುತ್ತವೆ. ಫ್ರಾನ್ಸ್, ಜರ್ಮನಿ, ಯುಎಇ, ಯುಕೆ, ರಷ್ಯಾ, ಫಿನಲ್ಯಾಂಡ್, ಲೆಬನಾನ್, ಆಸ್ಟ್ರೇಲಿಯಾ, ಅರ್ಜೆಂಟೀನಾ, ಬೆಲ್ಜಿಯಂ ಮತ್ತು ಚಿಲಿಯಂತಹ ಹಲವಾರು ದೇಶಗಳು ಕೋವಿಡ್ -19 ಪತ್ತೆಗಾಗಿ ನಾಯಿಗಳಿಗೆ ತರಬೇತಿ ನೀಡಲು ಮುಂದಾಗಿವೆ. ವಿಶೇಷವಾಗಿ ವಿಮಾನ ನಿಲ್ದಾಣಗಳು ಮತ್ತು ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರನ್ನು ಪರೀಕ್ಷಿಸಲು ನಾಯಿಗಳನ್ನು ಬಳಕೆ ಮಾಡಲಾಗುತ್ತದೆ.

ಪ್ರಮುಖ ಸುದ್ದಿ :-   10ನೇ ಬಾರಿಗೆ ರೆಪೋ ದರ ಯಥಾಸ್ಥಿತಿಯಲ್ಲಿ ಇರಿಸಿದ ಆರ್‌ ಬಿಐ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement