ತಪೋವನ: ಜನರ ರಕ್ಷಣೆಗೆ ಮುಂದುವರಿದ ಪ್ರಯತ್ನ

ಹಿಮಬಂಡೆ ಕುಸಿದಿದ್ದರಿಂದ ಉತ್ತರಾಖಂಡದ ಚಮೋಲಿ ಜಿಲ್ಲೆಯ ತಪೋವನ ಹೈಡ್ರಲ್‌ ಪ್ರಾಜೆಕ್ಟ್‌ ಸುರಂಗದಲ್ಲಿ ಸಿಲುಕಿದ ಜನರನ್ನು ಹೊರತೆಗೆಯುವ ಕಾರ್ಯಾಚರಣೆ ಮುಂದುವರೆದಿದ್ದು, ರಾತ್ರಿಯಿಡಿ ಸರಕು ಅವಶೇಷಗಳನ್ನು ತೆಗೆಯಲಾಗಿದೆ.
೨.೫ ಕಿ.ಮೀ. ಉದ್ದದ ಸುರಂಗದಲ್ಲಿ ಸುಮಾರು ೩೫ ಕಾರ್ಮಿಕರು ಸಿಲುಕಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.
ಚಮೋಲಿಯ ಸುರಂಗದಲ್ಲಿ ಕಾರ್ಯಾಚರಣೆ ನಡೆಯುತ್ತಿದೆ, ಮಂಗಳವಾರ ದಾರಿ ತೆರವುಗೊಳಿಸಲು ಸಾಧ್ಯವಾಗಬಹುದು ಎಂದು ಉತ್ತರಾಖಂಡ ಪೊಲೀಸ್ ಮಹಾನಿರ್ದೇಶಕ ಅಶೋಕ್ ಕುಮಾರ್ ಹೇಳಿದರು.
ನಂದಾದೇವಿ ನದಿ ಪ್ರವಾಹದಲ್ಲಿ ಸಾವನ್ನಪ್ಪಿದವರ ಸಂಖ್ಯೆ 26 ಕ್ಕೆ ಏರಿದ್ದು, ಇನ್ನೂ 171 ಜನರು ಕಾಣೆಯಾಗಿದ್ದಾರೆ. ಶವಗಳು ವಿವಿಧ ಸ್ಥಳಗಳಲ್ಲಿ ಪತ್ತೆಯಾಗಿವೆ. ಮಂಗಳವಾರ ಬೆಳಿಗ್ಗೆ ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದರು.

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   ವೀಡಿಯೊ...| ಸೈಕಲ್ ಮೇಲಿದ್ದ 5 ವರ್ಷದ ಬಾಲಕನ ಮೇಲೆ ಓಡಿದ ಕಾರು ; ಪವಾಡ ಸದೃಶರೀತಿಯಲ್ಲಿ ಪಾರಾದ ಬಾಲಕ...!

ನಿಮ್ಮ ಕಾಮೆಂಟ್ ಬರೆಯಿರಿ

advertisement