ಕಲಬುರಗಿ: ಕೇಂದ್ರದ ಮಾಜಿ ಸಚಿವ ಹಾಗೂ ರಾಜ್ಯ ಸಭಾ ಸದಸ್ಯರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ ಅವರ ಪುತ್ರ ಮಾಜಿ ಸಚಿವ ಹಾಗೂ ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಅವರು ವಿಛಿದ್ರಕಾರಕ ಶಕ್ತಿಗಳಿಗೆ ಟ್ವಿಟ್ ಮೂಲಕ ದಿಟ್ಟತನದ ಉತ್ತರ ನೀಡಿದ್ದಾರೆ.
ನಾವು ಸತ್ಯ ಹೇಳುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ನಾವು ಬುದ್ದ ಬಸವ ಹಾಗೂ ಅಂಬೇಡ್ಕರರ ತತ್ವ ಸಿದ್ದಾಂತವನ್ನು ಬಲವಾಗಿ ನಂಬಿದ್ದೇವೆ. ನಾವು ಯಾವಾಗಲೂ ಸಂವಿಧಾನದ ಪರವಾಗಿದ್ದೇವೆ. ಯಾರಿಂದಲೂ ನಮ್ಮನ್ನು ಹೆದರಿಸಲು ಸಾಧ್ಯವಿಲ್ಲ. ಬೆದರಿಕೆ ಕರೆಗಳು ನಮ್ಮ ವಿಚಾರಗಳ ಮೌಲ್ಯವನ್ನು ಇನ್ನಷ್ಟು ಗಟ್ಟಿಗೊಳಿಸುತ್ತವೆ” ಎಂದು ಅವರು ಟ್ವಿಟ್ ಮಾಡಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ