ನಿತೀಶ್‌ ಸಂಪುಟ ವಿಸ್ತರಣೆ, ಶಾನವಾಜ್‌ ಹುಸೇನ್ ಸ್ಥಾನ

ಬಿಹಾರ: ಮುಖ್ಯಮಂತ್ರಿ ನಿತೀಶ್‌ ಕುಮಾರ ಸಚಿವ ಸಂಪುಟ ವಿಸ್ತರಣೆಯಾಗಿದ್ದು, ೧೭ಹೊಸ ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಅಧಿಕಾರಕ್ಕೆ ಬಂದು ಮೂರು ತಿಂಗಳ ನಂತರ ಸಿಎಂ ನಿತೀಶ್‌ಕುಮಾರ ಸಚಿವ ಸಂಪುಟ ವಿಸ್ತರಣೆ ಮಾಡಿದ್ದು, ಚಿತ್ರನಟ ಸುಶಾಂತ ಸಿಂಗ್‌ ರಜಪೂತ್‌ರ ಸೋದರ ಸಂಬಂಧಿ ನೀರಜ್‌ ಸಿಂಗ್‌ ಬಾಬ್ಲು, ಅಜಯ ರಾಜ್‌, ಮಾಜಿ ಕೇಂದ್ರ ಸಚಿವ ಶಾನವಾಜ್‌ ಹುಸೇನ್‌ ಸಂಪುಟ ಸೇರಿದವರಲ್ಲಿ ಪ್ರಮುಖರು.
ಚಕೈನಿಂದ ಸ್ವತಂತ್ರ ಅಭ್ಯರ್ಥಿಯಾಗಿ ವಿಜೇತರಾದ ಸುಮಿತ್‌ ಕುಮಾರ ಸಿಂಗ್‌ ಸಚಿವರಾದರು. ಅವರ ತಂದೆ ನರೇಂದ್ರ ಸಿಂಗ್‌ ನಿತೀಶ್‌ ಕುಮಾರ ಸಚಿವ ಸಂಪುಟದಲ್ಲಿ ಸಚಿವರಾಗಿದ್ದರೆ, ಅವರ ಅಜ್ಜ ಕೃಷ್ಣ ಸಿಂಗ್‌ ಕಾರ್ಪೂರಿ ಠಾಕೂಡ ಸಂಪುಟದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಮಾಜಿ ಪೊಲೀಸ್ ಮಹಾನಿರ್ದೇಶಕ ಮತ್ತು ಜೆಡಿಯು ಶಾಸಕ ಸುನೀಲ್ ಕುಮಾರ್ ಅವರನ್ನು ಇಂದು ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ.

0 / 5. 0

ಪ್ರಮುಖ ಸುದ್ದಿ :-   ಕಾಂಗ್ರೆಸ್‌ಗೆ ಶಾಕ್‌ ನೀಡಿದ ʼಹಿಂದಿ ಬೆಲ್ಟ್‌; ಮೂರು ರಾಜ್ಯಗಳಲ್ಲಿ ಬಿಜೆಪಿಗೆ ಗೆಲುವು, ತೆಲಂಗಾಣ ಕಾಂಗ್ರೆಸ್‌ ತೆಕ್ಕೆಗೆ, ಇಂಡಿಯಾ ಮೈತ್ರಿಕೂಟದಲ್ಲಿ ಕಾಂಗ್ರೆಸ್‌ ವರ್ಚಸ್ಸಿಗೆ ಧಕ್ಕೆ

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement