ನಿರ್ಭಯಾ ನಿಧಿ ಸಮರ್ಪಕವಾಗಿ ಬಳಕೆಯಾಗಿಲ್ಲ: ಆಕ್ಸ್‌ಫ್ಯಾಮ್‌ ವರದಿ

ನವದೆಹಲಿ: ಕೇಂದ್ರ ಸರಕಾರ ೮ ವರ್ಷಗಳ ಹಿಂದೆ ಘೋಷಿಸಿದ ನಿರ್ಭಯಾ ನಿಧಿ ಮಹಿಳೆಯರಿಗೆ ನೆರವು ನೀಡುವಲ್ಲಿ ವಿಫಲವಾಗಿದೆ ಎಂದು ಸ್ವಯಂ ಸೇವಾ ಸಂಸ್ಥೆ ಎಕ್ಸ್‌ಫ್ಯಾಮ್‌ ವರದಿ ಮಾಡಿದೆ.
೨೦೧೨ರಲ್ಲಿ ನಿರ್ಭಯಾ ಸಾಮೂಹಿಕ ಅತ್ಯಾಚಾರ ಘಟನೆ ನಂತರ ಅಂದಿನ ಹಣಕಾಸು ಸಚಿವ ಪಿ.ಚಿದಂಬರಂ ಮಹಿಳೆಯರ ಮೇಲಿನ ದೌರ್ಜನ್ಯ ಕಡಿಮೆ ಮಾಡಲು ೧೦೦೦ ಕೋಟಿ ರೂ. ಮೊತ್ತದ ನಿರ್ಭಯಾ ನಿಧಿ ಘೋಷಣೆ ಮಾಡಿದ್ದರು.
ರಾಜ್ಯ ಸರ್ಕಾರಿ ಇಲಾಖೆಗಳು ನಿರ್ಭಯಾ ನಿಧಿಯನ್ನು ಅದರ ಗೊತ್ತುಪಡಿಸಿದ ಉದ್ದೇಶಕ್ಕಾಗಿ ಬಳಸಿಲ್ಲ. ನಿಧಿಗೆ ವರ್ಷದಿಂದ ವರ್ಷಕ್ಕೆ ಹಣ ಸೇರ್ಪಡೆಗೊಂಡಿದೆಯೇ ಹೊರತು ನಿರೀಕ್ಷಿತ ಪ್ರಮಾಣದಲ್ಲಿ ಬಳಕೆಯಾಗಿಲ್ಲ ಎಂದು ವರದಿ ತಿಳಿಸಿದೆ.
2019-20ರಲ್ಲಿ ಹಣಕಾಸು ಸಚಿವಾಲಯವು ನಿರ್ಭಯಾ ನಿಧಿಯಡಿ 4357.62 ಕೋಟಿ ರೂಪಾಯಿಗಳನ್ನು ನೀಡಿದೆ ಎಂದು ಅದು ಹೇಳಿದೆ, ಆದರೆ ತಾಂತ್ರಿಕ ವ್ಯವಸ್ಥೆಯಲ್ಲಿ ಸ್ಪಷ್ಟತೆಯ ಕೊರತೆಯಿಂದಾಗಿ ಈ ನಿಧಿ ಎರಡು ವರ್ಷಗಳಿಂದ ಬಳಕೆಯಾಗಿಲ್ಲ ಎಂದು ಇತ್ತೀಚಿಗೆ ಪ್ರಕಟಗೊಂಡ ವರದಿ ತಿಳಿಸಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement