ರಾಕೇಶ ಅಸ್ತಾನೆಗೆ ಸಿಬಿಐ ಕ್ಲೀನ್‌ಚಿಟ್‌

ನವ ದೆಹಲಿ: ಸ್ಟರ್ಲಿಂಗ್ ಬಯೋಟೆಕ್ ಲಂಚ ಪ್ರಕರಣದಲ್ಲಿ ಕೇಂದ್ರ ತನಿಖಾ ದಳ (ಸಿಬಿಐ) ಗುಜರಾತ್ ಕೇಡರ್ ಐಪಿಎಸ್ ಅಧಿಕಾರಿ ಮತ್ತು ಪ್ರಸ್ತುತ ಎನ್‌ಸಿಬಿ ಮುಖ್ಯಸ್ಥ ರಾಕೇಶ್ ಅಸ್ತಾನಾಗೆ ಕ್ಲೀನ್ ಚಿಟ್ ನೀಡಿದೆ.

ಸಿಬಿಐ ಮುಖ್ಯಸ್ಥ ಹುದ್ದೆಗೆ ಮುಂಚೂಣಿಯಲ್ಲಿರುವ ಶ್ರೀ ಅಸ್ತಾನಾ, ಸಂದೇಸರ ಸಹೋದರರು ನಿರ್ವಹಿಸುತ್ತಿರುವ ಸ್ಟರ್ಲಿಂಗ್‌ ಬಯೋಟೆಕ್‌ ಅವ್ಯವಹಾರದಲ್ಲಿ ಹಣ ಪಡೆದುಕೊಂಡಿದ್ದಾರೆಂಬ ಆರೋಪ ಎದುರಿಸುತ್ತಿದ್ದಾರೆ. ಕೈಬರಹದ ಡೈರಿಗಳಲ್ಲಿ, ಅಧಿಕಾರಿಯೊಬ್ಬರಿಗೆ ಹಣ ಪಾವತಿಸಲಾಗಿದೆ ಎಂದು ಹಲವು ಬಾರಿ ಉಲ್ಲೇಖಿಸಲಾಗಿದೆ. ಈ ಹಿಂದೆ ವಡೋದರ ಪೊಲೀಸ್ ಕಮಿಷನರ್ ಆಗಿ ರಾಕೇಶ ಕೆಲಸ ಮಾಡಿದ್ದರಿಂದ ಮತ್ತು ಸಂದೇಸರ ಸಹೋದರರೊಂದಿಗೆ ನಿಕಟ ಸಂಬಂಧವನ್ನು ಹೊಂದಿದ್ದರಿಂದ ಹಣ ಪಡೆದುಕೊಂಡಿರುವುದು ರಾಕೇಶ್‌ ಎಂದೇ  ಶಂಕಿಸಲಾಗಿದೆ.

ಸಂದೇಸರ ಸಹೋದರರು ಮತ್ತು ಆಸ್ತಾನಾ ನಡುವಿನ ವಹಿವಾಟಿನ ತನಿಖೆಗಾಗಿ ಪ್ರಾರಂಭಿಸಲಾದ ವಿಚಾರಣೆಯನ್ನು ಸಿಬಿಐ ಈಗ ಬಂದ್‌ ಮಾಡಿದೆ.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement