ಕೆಂಪುಕೋಟೆ ಹಿಂಸಾಚಾರ: ಕೊನೆಗೂ ದೀಪ್‌‌ಸಿಧು ಸೆರೆ, ೭ ದಿನ ಪೊಲೀಸ್‌ ಕಸ್ಟಡಿಗೆ

ನವ ದೆಹಲಿ: ಗಣರಾಜ್ಯೋತ್ಸವದಂದು ರೈತರ ಪ್ರತಿಭಟನೆ ವೇಳೆ ದೆಹಲಿಯಲ್ಲಿ ನಡೆದ ಹಿಂಸಾಚಾರ ಪ್ರಕರಣದ ಆರೋಪಿ ಎಂದು ಹೆಸರಿಸಲಾಗಿರುವ ಪಂಜಾಬಿ ನಟ-ಸಾಮಾಜಿಕ ಕಾರ್ಯಕರ್ತ ದೀಪ್ ಸಿಧು ಅವರನ್ನು ದೆಹಲಿ ಪೊಲೀಸ್ ವಿಶೇಷ ಕೋಶವು ಮಂಗಳವಾರ ಬೆಳಿಗ್ಗೆ ಬಂಧಿಸಿದೆ.

ಅವರನ್ನು  ದೆಹಲಿ ಮೆಟ್ರೊಪಅಲಿಟಿನ್‌ ನ್ಯಯಾಲಯಕ್ಕೆ ಹಾಜರುಪಡಿಸಲಾಗಿದ್ದ ಅವರನ್ನು ಕೋರ್ಟ್‌  ಏಳು ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಿದೆ.

ಕೆಂಪು ಕೋಟೆಯಲ್ಲಿ ನಡೆದ ಹಿಂಸಾಚಾರಕ್ಕೆ ಮುಖ್ಯ ಪ್ರಚೋದಕರಲ್ಲಿ ಒಬ್ಬರು ಎಂದು ಪೊಲೀಸರು ಆರೋಪಿಸಿದ ನಂತರ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಪ್ರಿಗ್ಯಾ ಗುಪ್ತಾ ಸಿಧು ಅವರನ್ನು ಪೊಲೀಸ್ ಕಸ್ಟಡಿಗೆ ಕಳುಹಿಸಿದ್ದಾರೆ.

ಟ್ರ್ಯಾಕ್ಟರ್ ಪೆರೇಡ್ ಸಮಯದಲ್ಲಿ ಗಣರಾಜ್ಯೋತ್ಸವದಂದು ಕೆಂಪು ಕೋಟೆಬಳಿ ಬಂದ ರೈತರ ಗುಂಪನ್ನು ಪ್ರಚೋದಿಸಿದ ಆರೋಪ ಸಿಧು ಅವರ ಮೇಲಿದೆ. ಪೊಲೀಸರು ಎಫ್‌ಐಆರ್‌ನಲ್ಲಿ ಈತನನ್ನು ಹೆಸರಿಸಿದ್ದಾರೆ.ಪೊಲೀಸರು ಕೆಲದಿನಗಳ ಹಿಂದೆ ಸಿಂಧು ಮತ್ತು ಅವರ ಇಬ್ಬರು ಸಹಚರರ ಮಾಹಿತಿ ನೀಡಿದವರಿಗೆ 1 ಲಕ್ಷ ರೂ.ಗಳ ನಗದು ಬಹುಮಾನ ಘೋಷಿಸಿದ್ದರು.
ಜನವರಿ 26 ರಂದು ನಡೆದ ಟ್ರ್ಯಾಕ್ಟರ್ ಪ್ರದರ್ಶನದ ನಂತರ, ಪ್ರತಿಭಟನಾಕಾರರು ಕೆಂಪು ಕೋಟೆಯಲ್ಲಿ ಧಾರ್ಮಿಕ ಧ್ವಜ ಹಾರಿಸಿರುವುದರ ಬಗ್ಗೆ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಘಟನೆಯ ಸಂದರ್ಭದಲ್ಲಿ ಹಾಜರಿದ್ದ ಸಿಧು, ಅವರು ರಾಷ್ಟ್ರೀಯ ಧ್ವಜವನ್ನು ತೆಗೆಯಲಿಲ್ಲ ಮತ್ತು ಸಾಂಕೇತಿಕ ಪ್ರತಿಭಟನೆಯಾಗಿ ‘ನಿಶಾನ್ ಸಾಹಿಬ್’ ಹಾರಿಸಿದ್ದಾಗ ತಮ್ಮ ಕ್ರಮ ಸಮರ್ಥಿಸಿಕೊಂಡಿದ್ದರು.
36 ವರ್ಷದ ಸಿಧು ತನ್ನ ಫೇಸ್‌ಬುಕ್ ಪುಟದಲ್ಲಿ ಎರಡು ವೀಡಿಯೊಗಳನ್ನು ಅಪ್‌ಲೋಡ್ ಮಾಡಿದ್ದು, ಜನವರಿ 26ರಂದು ದೆಹಲಿಯ ಎಲ್ಲ ಗಡಿಗಳಿಂದ ಜನರು “ಸ್ವತಃ ಕೆಂಪು ಕೋಟೆಯತ್ತ ಸಾಗಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ರೈತ ಮುಖಂಡರು ನಿರ್ಧರಿಸಿದ ಮಾರ್ಗವನ್ನು ಹೆಚ್ಚು ಜನರು ಅನುಸರಿಸಿಲ್ಲ ಯಅಕೆಂದರೆ ಈ ರೈತ ಮುಖಂಡರು ಘಮಂಡಿಗಳಾಗಿದ್ದು, ತಾವು ತೆಗೆದುಕೊಳ್ಳುವ ಯಾವುದೇ ನಿರ್ಧಾರಗಳನ್ನು ಎಲ್ಲರೂ ಒಪ್ಪಿಕೊಳ್ಳಬೇಕು ಎಂದು ಹೇಳುತ್ತಾರೆ ಎಂದು ಹೇಳಿದ್ದರು.
ಸಿಖ್ಸ್ ಫಾರ್ ಜಸ್ಟೀಸ್ ವಿರುದ್ಧ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ತಿಂಗಳ ಆರಂಭದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಕರೆಸಿಕೊಂಡವರಲ್ಲಿ ಸಿಧು ಮತ್ತು ಅವರ ಸಹೋದರ ಮಂದೀಪ್ ಸಿಂಗ್ ಅವರ ಮೇಲೆ ಪ್ರಕರಣ ದಾಖಲಿಸಿದ್ದರು.

ಪ್ರಮುಖ ಸುದ್ದಿ :-   ಸುಪ್ರೀಂ ಕೋರ್ಟ್ ತರಾಟೆ ನಂತರ ದೊಡ್ಡದಾಗಿ ಕ್ಷಮೆಯಾಚನೆ ಪ್ರಕಟಿಸಿದ ಪತಂಜಲಿ ಸಂಸ್ಥೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement