ಅಧಿಕಾರ ಬದಲಾವಣೆ ನಮ್ಮ ಗುರಿಯಲ್ಲ,ನಮ್ಮ ಸಮಸ್ಯೆಗಳಿಗೆ ಪರಿಹಾರ ಬೇಕು ಅಷ್ಟೆ 

ನವ ದೆಹಲಿ: ಆಂದೋಲನ ನಡೆಸುತ್ತಿರುವ ರೈತರು ಕೇಂದ್ರದಲ್ಲಿ ಯಾವುದೇ ಅಧಿಕಾರ ಬದಲಾವಣೆಯ ಗುರಿ ಹೊಂದಿಲ್ಲ, ಆದರೆ ನಮ್ಮ ಸಮಸ್ಯೆಗಳಿಗೆ ಪರಿಹಾರ ಬೇಕಿದೆ ಎಂದು ಬಿಕೆಯು ಮುಖಂಡ ರಾಕೇಶ್ ಟಿಕಾಯಿತ್‌ ಬುಧವಾರ ಪ್ರತಿಪಾದಿಸಿದರು.
ಅನೇಕ ರೈತ ನಾಯಕರು ಆಂದೋಲನವನ್ನು ವಿಸ್ತರಿಸಲು ದೇಶದ ವಿವಿಧ ಭಾಗಗಳಲ್ಲಿ ಪ್ರವಾಸ ಮಾಡುತ್ತಾರೆ ಎಂದರು.
ಗಣರಾಜ್ಯೋತ್ಸವದಂದು ಟ್ರ್ಯಾಕ್ಟರ್ ಪ್ರದರ್ಶನದ ಸಂದರ್ಭದಲ್ಲಿ ಕೆಂಪು ಕೋಟೆಯಲ್ಲಿ ಧ್ವಜ ಹಾರಿಸಿದ್ದು ದೇಶದ್ರೋಹದ ಕೃತ್ಯವಲ್ಲ ಎಂದು ಸಮರ್ಥಿಸಿಕೊಂಡರು.
ಸಿಂಗು ಗಡಿಯಲ್ಲಿ ಪ್ರತಿಭಟನಾ ನಿರತ ರೈತರನ್ನುದ್ದೇಶಿಸಿ ಮಾತನಾಡಿದ ಅವರು, ಕೇಂದ್ರವು ತಮ್ಮ ಸಮಸ್ಯೆಗಳನ್ನು ಬಗೆಹರಿಸುವವರೆಗೆ ಕೃಷಿ ಕಾನೂನುಗಳ ವಿರುದ್ಧದ ಆಂದೋಲನ ನಡೆಯುತ್ತದೆ.
ಅಧಿಕಾರದ ಬದಲಾವಣೆ ನಮ್ಮ ಗುರಿಯಲ್ಲ. ಸರ್ಕಾರ ತನ್ನ ಕೆಲಸವನ್ನು ಮಾಡಬೇಕು. ಕೃಷಿ ಕಾನೂನುಗಳನ್ನು ರದ್ದುಪಡಿಸಬೇಕು ಮತ್ತು ಕನಿಷ್ಠ ಬೆಂಬಲ ಬೆಲೆ ಮೇಲಿನ ಕಾನೂನನ್ನು ಜಾರಿಗೆ ತರಬೇಕು ಎಂದು ನಾವು ಬಯಸುತ್ತೇವೆ “ಎಂದು ಹೇಳಿದರು.
ರೈತ ಮುಖಂಡರೊಂದಿಗೆ ಸರ್ಕಾರ ಮಾತುಕತೆ ಪ್ರಾರಂಭಿಸುವವರೆಗೂ ಆಂದೋಲನವನ್ನು ದೀರ್ಘಕಾಲ ಎಳೆಯಲಾಗುವುದು ಎಂದರು.
ಸಂಯುಕ್ತ ಕಿಸಾನ್ ಮೋರ್ಚಾ ವಿಭಜನೆಯಾಗುತ್ತದೆ ಎಂದು ಯಾರು ಹೇಳುತ್ತಾರೆ? ಸಂಘಟನೆಯೂ ವಿಭಜನೆಯಾಗುವುದಿಲ್ಲ ಮೋರ್ಚಾವೂ ವಿಭಜನೆಯಾಗುವುದಿಲ್ಲ ಎಂದು ಅವರು ಹೇಳಿದರು.
ದೇಶಾದ್ಯಂತ ದೊಡ್ಡ ಸಭೆಗಳನ್ನು ನಡೆಸುವುದು ಮತ್ತು 40 ಲಕ್ಷ ಟ್ರ್ಯಾಕ್ಟರುಗಳನ್ನು ಸಂಯೋಜಿಸುವುದರೊಂದಿಗೆ ಆಂದೋಲನ ವಿಸ್ತರಿಸಲಿದೆ ಎಂದು ಅವರು ಹೇಳಿದರು, ರೈತ ಮುಖಂಡರು ವಿವಿಧ ರಾಜ್ಯಗಳಲ್ಲಿ ಪ್ರವಾಸ ಕೈಗೊಂಡು ಆಂದೋಲನವನ್ನು ವಿಸ್ತರಿಸುತ್ತಾರೆ. ನಾವು ಗೆಲ್ಲುತ್ತೇವೆ. ನಾವು ದೇಶದ ಪ್ರತಿ ಹಳ್ಳಿಗೆ ಭೇಟಿ ನೀಡುತ್ತೇವೆ, ದೊಡ್ಡ ಸಭೆ ನಡೆಸುತ್ತೇವೆ ಮತ್ತು 40 ಲಕ್ಷ ಟ್ರ್ಯಾಕ್ಟರುಗಳನ್ನು ಆಂದೋಲನದೊಂದಿಗೆ ಸಂಯೋಜಿಸುತ್ತೇವೆ” ಎಂದು ಅವರು ಹೇಳಿದರು.
ಕೃಷಿ ಕಾನೂನುಗಳು ರೈತ ಮತ್ತು ಕೃಷಿಯನ್ನು ನಾಶಪಡಿಸುವುದಲ್ಲದೆ, ಇದು ದೇಶದ ಸಣ್ಣ ವ್ಯಾಪಾರಿಗಳನ್ನು ಮತ್ತು ಸಾಮಾನ್ಯ ಜನರನ್ನು ಬಲಹೀನರನ್ನಾಗಿ ಮಾಡುತ್ತದೆ.ಆಂದೋಲನವು ಸಂಪೂರ್ಣವಾಗಿ “ರಾಜಕೀಯೇತರ” ಮತ್ತು ಯಾವುದೇ ರಾಜಕಾರಣಿಗಳಿಗೆ ಪಟ್ಟಭದ್ರ ಹಿತಾಸಕ್ತಿ ಹೆಚ್ಚಿಸಲು ಅವಕಾಶ ನೀಡುವುದಿಲ್ಲ ಎಂದು ಅವರು ಪುನರುಚ್ಚರಿಸಿದರು.

ಪ್ರಮುಖ ಸುದ್ದಿ :-   ʼಒಂದು ರಾಷ್ಟ್ರ ಒಂದು ಚುನಾವಣೆʼ ; ರಾಮನಾಥ ಕೋವಿಂದ ಸಮಿತಿ ವರದಿಗೆ ಮೋದಿ ಸಂಪುಟ ಅನುಮೋದನೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement