ಕಾಂಗ್ರೆಸ್‌-ಎಡ ಪಕ್ಷಗಳ ಬಗ್ಗೆ ಮಮತಾ ಮೌನ

ರಾಜ್ಯದಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯೇ ತಮಗೆ ನೇರ ಎದುರಾಳಿ ಎಂಬುದನ್ನು ಮನಗಂಡ ತೃಣಮೂಲ ಕಾಂಗ್ರೆಸ್‌ ಮುಖ್ಯಸ್ಥೆ ಹಾಗೂ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಾಂಗ್ರೆಸ್‌ ಹಾಗೂ ಎಡ ಪಕ್ಷಗಳ ಬಗ್ಗೆ ಮೌನವಹಿಸಿದ್ದಾರೆ.
ಇತ್ತೀಚಿನ ಚುನಾವಣಾ ಭಾಷಣಗಳಲ್ಲಿ ಅವರು ಕೇವಲ ಬಿಜೆಪಿಯನ್ನು ಮಾತ್ರ ಗುರಿಯಾಗಿಸಿ ಟೀಕೆ ಮಾಡುತ್ತಿದ್ದಾರೆ. ಚುನಾವಣೆಯಲ್ಲಿ ಕಾಂಗ್ರೆಸ್‌-ಎಡ ಪಕ್ಷಗಳು ಉತ್ತಮ ಪ್ರದರ್ಶನ ನೀಡಿದರೆ ಅದರಿಂದ ಬಿಜೆಪಿಗೆ ಧಕ್ಕೆಯಾಗಲಿದೆ ಎಂದೇ ತಿಳಿದು ಕಾಂಗ್ರೆಸ್‌ ಹಾಗೂ ಎರಡ ಪಕ್ಷಗಳ ಮೈತ್ರಿ ಬಗ್ಗೆ ಮಮತಾ ಏನೂ ಮಾತನಾಡುತ್ತಿಲ್ಲ. ವಿಧಾನಸಭೆ ಚುನಾವಣೆ ಫಲಿತಾಂಶ ಅತಂತ್ರವಾದರೆ ಕಾಂಗ್ರೆಸ್‌ನಿಂದ ಬೆಂಬಲ ಸಿಗಬಹುದು ಎಂಬುದು ಮಮತಾ ನಿರೀಕ್ಷೆಯಾಗಿದೆ.
ಬಹ್ರಾಮ್‌ಪುರದಲ್ಲಿ ಮಾಡಿದ ಭಾಷಣದಲ್ಲಿ ಮಮತಾ ಕೇಂದ್ರ ಸರಕಾರದ ಯೋಜನೆಗಳನ್ನು ಟೀಕಿಸಿದರಲ್ಲದೇ ಪ್ರಧಾನಿ ಮೋದಿ ಅವರು ರಾಜ್ಯವನ್ನು ಕಡೆಗಣಿಸುತ್ತಿದ್ದಾರೆ ಎಂದು ದೂರಿದರು. ಟಿಎಂಸಿಯಿಂದ ಬಿಜೆಪಿ ಸೇರಿದ ಸುವೆಂದು ಅಧಿಕಾರಿಯನ್ನು ಆಧುನಿಕ ಮೀರ್‌ ಜಾಫರ್‌ ಎಂದು ಮಮತಾ ಜರೆದರು.

ಪ್ರಮುಖ ಸುದ್ದಿ :-   ವೀಡಿಯೊ..: ಮುಸ್ಲಿಂ ಮೀಸಲಾತಿ ಬಗ್ಗೆ ಕಾಂಗ್ರೆಸ್‌ ವಿರುದ್ಧ ಮತ್ತೊಮ್ಮೆ ವಾಗ್ದಾಳಿ ನಡೆಸಿದ ಮೋದಿ : ರಾಹುಲ್ ಗಾಂಧಿ ವೈರಲ್ ವೀಡಿಯೊ ಉಲ್ಲೇಖ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement