ಹುಬ್ಬಳ್ಳಿ: ಕೆಎಲ್‌ಇ ಸಂಸ್ಥೆಗೆ ದಾನ ಕೊಟ್ಟ ಜಾಗವನ್ನು ಯಾವುದೇ ಕಾರಣಕ್ಕೂ ಮರಳಿ ಕೊಡುವುದಿಲ್ಲ. ಒಂದೂವರೆ ವರ್ಷದ ನಂತರ ಆ ಜಾಗದಲ್ಲಿ ಆಸ್ಪತ್ರೆ ನಿರ್ಮಾಣವಾಗಲಿದೆ ಎಂದು ಕೆಎಲ್‌ಇ ಸಂಸ್ಥೆಯ ಚೇರ್ಮನ್ ಡಾ.ಪ್ರಭಾಕರ ಕೋರೆ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರುಸಾವಿರ ಮಠದ ಹಿಂದಿನ ಸ್ವಾಮಿಗಳು ಒಳ್ಳೆಯ ಉದ್ದೇಶಕ್ಕೆ ಜಾಗ ನೀಡಿದ್ದಾರೆ. ಜಾಗ ಕೊಟ್ಟು ೧೭ ವರ್ಷಗಳೇ ಕಳೆದಿವೆ. ಈಗ ಅಲ್ಲಿ ಆಸ್ಪತ್ರೆ ನಿರ್ಮಾನದ ವಿಷಯ ಬಂದಾಗ ಅನಗತ್ಯ ವಿವಾದ ಸೃಷ್ಟಿಸಲಾಗುತ್ತಿದೆ ಎಂದು ಹೇಳಿದರು.
ದಿಂಗಾಲೇಶ್ವರ ಶ್ರೀಗಳು ಯಾರೂ ಎಂಬುದೇ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಮೂರುಸಾವಿರ ಮಠದ ಉತ್ತರಾಧಿಕಾರಿ ಆಗುವ ವಿಷಯದಲ್ಲಿ ಅನೇಕ ವರ್ಷಗಳಿಂದ ಗೊಂದಲ ನಡೆಯುತ್ತಿದೆ. ಈ ಗೊಂದಲದಲ್ಲಿ ಈಗ ಕೆಎಲ್ಇ ಸಂಸ್ಥೆಯ ಹೆಸರನ್ನ ಮುನ್ನೆಲೆಗೆ ತಂದು ಹೆಸರು ಕೆಡಿಸಲಾಗುತ್ತಿದೆ ಎಂದು ಅವರು ಅಸಮಾದಾನ ವ್ಯಕ್ತಪಡಿಸಿದರು.
೧೭ ವರ್ಷಗಳ ಹಿಂದೆ ಗದಗ ತೊಂಟದಾರ್ಯ ಸ್ವಾಮಿಗಳ ಬಳಿ ಹೋದಾಗ, ಅವರು ಮೂರುಸಾವಿರ ಮಠದವರಿಗೆ ತಿಳಿಸಿ, ಅಲ್ಲಿ ವೈದ್ಯಕೀಯ ಕಾಲೇಜ್ ಮಾಡಲು ಮುಂದಾಗುವುದು ಒಳಿತು ಎಂದರು. ಹಾಗಾಗಿಯೇ ನಾವೂ ಮೂರುಸಾವಿರ ಮಠದ ಹಿಂದಿನ ಸ್ವಾಮೀಜಿಗಳನ್ನ (ಮೂಜಗಂ) ಭೇಟಿಯಾದೆವು. ಆಗ ಅವರು ಒಂದು ವ್ಯಾಜ್ಯವಿದ್ದ ಭೂಮಿಯಿದೆ. ಅದನ್ನ ಸರಿ ಮಾಡಿಸಿಕೊಂಡು ನೀವೇ ಕಾಲೇಜು ಮಾಡಿಕೊಳ್ಳಿ ಎಂದು ಹೇಳಿದರೆ. ಅದರಂತೆ ಈಗ ಕಾಲ ಕೂಡಿ ಬಂದಿದೆ. ಆ ಜಾಗದಲ್ಲಿ ಆಸ್ಪತ್ರೆ ನಿರ್ಮಾಣ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ನನಗೆ ದಿಂಗಾಲೇಶ್ವರ ಶ್ರೀಗಳು ಯಾರೆಂದು ಗೊತ್ತಿಲ್ಲ. ಕೆಎಲ್ಇ ಸಂಸ್ಥೆಗೆ ಜಾಗ ದಾನ ಮಾಡಿ 17 ವರ್ಷಗಳು ಕಳೆದಿದೆ. ಇಷ್ಟು ದಿನ ಆ ಸ್ವಾಮಿಗಳು ಎಲ್ಲಿಗೆ ಹೋಗಿದ್ದರು? ಕೆಎಲ್ಇ ಸಂಸ್ಥೆಗೆ ಜಾಗವನ್ನ ಕೊಟ್ಟಿರುವುದು ಯಾರಿಗೋ ವೈಯಕ್ತಿಕವಾಗಿ ಅಲ್ಲ. ಕೆಎಲ್ಇ ಸಂಸ್ಥೆ ಕೂಡ ಸಮಾಜದ ಆಸ್ತಿ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕೆಎಲ್ಇ ನಿರ್ದೇಶಕರಾದ ವಿಧಾನ ಪರಿಷತ್ ಮುಖ್ಯಸಚೇತಕ ಮಹಾಂತೇಶ ಕವಗಿಮಠ ಹಾಗೂ ಕೆಎಲ್‌ಇ ನಿರ್ದೇಶಕ ಶಂಕರಣ್ಣ ಮುನವಳ್ಳಿ ಇದ್ದರು.
ನಿಮ್ಮ ಕಾಮೆಂಟ್ ಬರೆಯಿರಿ