ಪಿಯುಸಿ  ದಾಖಲಾತಿ ಅವಧಿ ಫೆ.೨೦ರ ವರೆಗೆ ವಿಸ್ತರಣೆ

ಬೆಂಗಳೂರು: ಪ್ರಥಮ ಮತ್ತು ದ್ವಿತೀಯ ಪಿಯುಸಿ ತರಗತಿಗಳಿಗೆ ದಾಖಲಾತಿ ಹಾಗೂ ಕಾಲೇಜು ಬದಲಾವಣೆಗೆ ಫೆಬ್ರವರಿ 20ರ ವರೆಗೂ ಕಾಲಾವಕಾಶ ನೀಡಿ ಪದವಿ ಪೂರ್ವ ಶಿಕ್ಷಣ ಇಲಾಖೆ ದಾಖಲಾತಿ ಹಾಗೂ ಕಾಲೇಜು ಬದಲಾವಣೆ ದಿನಾಂಕವನ್ನು ವಿಸ್ತರಿಸಿ ಆದೇಶ ಹೊರಡಿಸಿದೆ.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್‍ಕುಮಾರ್ ಅವರು ಪದವಿ ಪೂರ್ವ ಕಾಲೇಜುಗಳ ದಾಖಲಾತಿ ದಿನಾಂಕವನ್ನು ವಿಸ್ತರಿಸುವಂತೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಪ್ರಥಮ ಮತ್ತು ದ್ವಿತೀಯ ಪಿಯುಸಿ ತರಗತಿಗಳ ದಾಖಲಾತಿ ಹಾಗೂ ಕಾಲೇಜು ಬದಲಾವಣೆಗೆ ಫೆಬ್ರವರಿ 20ರ ವರೆಗೂ ಕಾಲಾವಕಾಶ ನೀಡಿ ವಿಸ್ತರಣೆಗೆ ಆದೇಶ ಮಾಡಲಾಗಿದೆ.
ದಾಖಲಾತಿ ಶುಲ್ಕವನ್ನು ಪಡೆದ ಮಾರನೆ ದಿನ ಖಜಾನೆಗೆ ಕಡ್ಡಾಯವಾಗಿ ಪಾವತಿಸಲು ಕ್ರಮ ಕೈಗೊಳ್ಳಬೇಕು. ಎಲ್ಲ ಪ್ರಾಂಶುಪಾಲರು ತಮ್ಮ ಕಾಲೇಜು ಸೂಚನಾ ಫಲಕದಲ್ಲಿ ಈ ಮಾಹಿತಿಯನ್ನು ಕಡ್ಡಾಯವಾಗಿ ಪ್ರಕಟಿಸಿ ವಿದ್ಯಾರ್ಥಿಗಳ ಗಮನಕ್ಕೆ ಸೂಕ್ತ ವಿಧಾನದಿಂದ ತಿಳಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.2020-21ನೆ ಶೈಕ್ಷಣಿಕ ಸಾಲಿಗೆ ಪ್ರಥಮ ಪಿಯುಸಿಗೆ ಮಾತ್ರ ದಾಖಲಾತಿ ದಿನಾಂಕವನ್ನು ಫೆ.13ರ ವರೆಗೆ ವಿಸ್ತರಿಸಲಾಗಿತ್ತು. ಇದನ್ನು ಪ್ರಥಮ ಮತ್ತು ದ್ವಿತೀಯ ಪಿಯುಸಿಗೂ ವಿಸ್ತರಣೆ ಮಾಡಲು ಸಚಿವರು ಸೂಚಿಸಿದ ಹಿನ್ನೆಲೆಯಲ್ಲಿ ಫೆ.20ರ ವರೆಗೂ ಕಾಲಾವಕಾಶ ನೀಡಲಾಗಿದೆ.

ಪ್ರಮುಖ ಸುದ್ದಿ :-   ಬೆಂಗಳೂರು ಸೇರಿ ಕರ್ನಾಟಕದ 15ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ : ಯೆಲ್ಲೋ ಅಲರ್ಟ್​ ಘೋಷಣೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement