ಪ್ರಧಾನಿ ನರೇಂದ್ರ ಮೋದಿ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದ ಸಂದರ್ಭಗಳಲ್ಲಿ ಹಲವು ಯೋಜನೆಗಳನ್ನು ನೀಡಿದ್ದಾರೆ ಆದರೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಜ್ಯಕ್ಕೆ ಪ್ರಧಾನಿ ಭೇಟಿಯನ್ನು ಆಕ್ಷೇಪಿಸುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದರು.
ದ್ವಿತಿಯ ಹಂತದ ಪರಿವರ್ತನ ಯಾತ್ರೆಗೆ ಚಾಲನೆ ನೀಡಿದ ನಡ್ಡಾ, ಮಮತಾ ಪ್ರಧಾನಿ ಹಾಗೂ ಗೃಹಸಚಿವರ ರಾಜ್ಯದ ಭೇಟಿಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತಾರೆ. ಫೆ.೭ರಂದು ರಾಜ್ಯಕ್ಕೆ ಬಂದ ಪ್ರಧಾನಿ ೪೭೦೦ ಕೋಟಿ ರೂ. ವೆಚ್ಚದ ಸಂಸ್ಕರಣಾಗಾರ ಉದ್ಘಾಟಿಸಿದರು. ಅವರೆಂದಿಗೂ ರಾಜ್ಯಕ್ಕೆ ಖಾಲಿ ಕೈಯಲ್ಲಿ ಬಂದಿಲ್ಲ. ಹಲವು ಯೋಜನೆಗಳೊಂದಿಗೆ ಬರುತ್ತಾರೆ ಎಂದರು. ಸಿಎಂ ಮುಖ್ಯಮಂತ್ರಿ ಚುನಾವಣಾ ಭಾಷಣದ ಸಂದರ್ಭದಲ್ಲಿ ಪ್ರಧಾನಿ ಮೋದಿ ರಾಜ್ಯವನ್ನು ಕಡೆಗಣಿಸಿದ್ದಾರೆ. ಅವರು ರಾಜ್ಯಕ್ಕೆ ಯಾವುದೇ ಕೊಡುಗೆ ನೀಡಿಲ್ಲ ಎಂದು ಹೇಳಿಕೆ ನೀಡಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ