ಶೀಘ್ರದಲ್ಲೇ ಹೊಸ ಮರಳು ನೀತಿ ಜಾರಿ

ಬೆಂಗಳೂರು: ಶೀಘ್ರದಲ್ಲೇ ಹೊಸ ಮರಳು ನೀತಿ ಜಾರಿ ಮಾಡಲಾಗುತ್ತದೆ ಎಂದು ಗಣಿ ಮತ್ತ ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಕರಾವಳಿ ಹಾಗೂ ಉತ್ತರ ಕರ್ನಾಟಕದಲ್ಲಿ ಪ್ರತ್ಯೇಕ ಮರಳು ನೀತಿ ಜಾರಿಯಲ್ಲಿದ್ದು , ಇವೆಲ್ಲವನ್ನೂ ಒಳಗೊಂಡಂತೆ ಒಂದು ನೂತನ ನೀತಿಯನ್ನು ಜಾರಿಗೊಳಿಸಲಾಗುವುದು ಎಂದರು.
ಮರಳು ಗಣಿಗಾರಿಕೆ ವಿಚಾರದಲ್ಲಿ ನಿಯಮಗಳನ್ನ ಸರಳಗೊಳಿಸಿದ್ದೇವೆ. ಮರಳು ಸುಲಭವಾಗಿ ಸಿಗುವಂತೆ ಕ್ರಮಕೈಗೊಳ್ಳುವ ನಟ್ಟಿನಲ್ಲಿ 2021ರ ನೂತನ ಗಣಿ ನೀತಿ ತರಲು ಚಿಂತನೆ ನಡೆಸಲಾಗಿದೆ. ಈ ಕುರಿತು ಮೂರು ಕಮಿಟಿ ರಚಿಸಿದ್ದೇವೆ. ಆಂಧ್ರಕ್ಕೆ ಒಂದು ಕಮಿಟಿ ಹೋಗಿದೆ. ಅಲ್ಲಿನ ನೀತಿಯ ಬಗ್ಗೆ ಅಧ್ಯಯನ ಮಾಡಲಿದೆ. ನಂತರ ಅಲ್ಲಿನ ನೀತಿಯ ಬಗ್ಗೆ ವರದಿ ನೀಡಲಿದೆ. ವಿಭಾಗವಾರು ಕಮಿಟಿ ಸಹ ರಚನೆಯಾಗಿದೆಎಂದರು.
ಗಣಿಗಾರಿಕೆಯಿಂದ ಸರ್ಕಾರಕ್ಕೆ 3700 ಕೋಟಿ ರೂ.ಗಳಷ್ಟು ರಾಯಲ್ಟಿ ಬರುತ್ತಿದೆ. ಮತ್ತಷ್ಟು ಹೆಚ್ಚಿಸುವ ಬಗ್ಗೆ ನಿರ್ಧರಿಸಲಅಗಿದೆ. ಜೊತೆಗೆ ಕಡಿಮೆ ದರದಲ್ಲಿ ಎಲ್ಲರಿಗೂ ಮರಳು ಲಭ್ಯವಾಗುವಂತೆ ಮಾಡುತ್ತೇವೆ.
ನೈಸರ್ಗಿಕವಾಗಿಯೂ ಅಪಾಯ ಆಗಬಾರದು, ತಾಂತ್ರಿಕವಾಗಿ ಹೇಗೆ ಇದನ್ನು ನಿರ್ವಹಿಸಬಹುದು ಎಂಬ ಬಗ್ಗೆ ಚಿಂತನೆ ನಡೆದಿದ್ದು, ವೈಜ್ಞಾನಿಕವಾಗಿ ಮರಳು ತೆಗೆಯುವ ಬಗ್ಗೆ ಈ ನೀತಿಯಲ್ಲಿ ನಿಯಮವಿರಲಿದೆ. ಮರಳನ್ನ ಮಾತ್ರ ತೆಗೆಯಲು ಅವಕಾಶ ಸಿಗಲಿದೆ ಎಂಬುದು ತಿಳಿಯಲಿದೆ ಎಂದರು.
ಗಣಿ ಸಮಸ್ಯೆಗೆ ಸಂಬಂಧಿಸಿದ ಸಮಸ್ಯೆ ಪರಿಹರಿಸುತ್ತೇವೆ. ಗಣಿ ಇಲಾಖೆಯಲ್ಲಿ ಸಾವಿರಾರು ಪ್ರಕರಣಗಳಿವೆ. ಎಲ್ಲವನ್ನೂ ಅಧ್ಯಯನ ಮಾಡಿ ಕ್ಲಿಯರ್ ಮಾಡುವ ಬಗ್ಗೆ ಮೈನಿಂಗ್ ಅದಾಲತ್ ಜಾರಿಗೆ ತರಲಾಗುವುದು ಎಂದರು.
ಜಾರ್ಖಂಡ್ ನ ದರ್ಬಾಂಗ್ ನಲ್ಲಿ ಒಂದು ಯೂನಿವರ್ಸಿಟಿ ಇದೆ, ಅದೇ ರೀತಿ ರಾಜ್ಯದಲ್ಲೂ ಒಂದು ವಿವಿ ತೆರೆಯಲಿದ್ದೇವೆ ಎಂದರು.
ಶಿವಮೊಗ್ಗ ಸ್ಫೋಟ ಪ್ರಕರಣ ತನಿಖೆ ಮುಂದುವರಿದಿದೆ. ನಾಲ್ಕು ಪ್ರಕರಣ ದಾಖಲಿಸಲಾಗಿದೆ. ಜಿಲೆಟಿನ್ ಪೂರೈಸಿದವರ ಮೇಲೂ ಎಫ್‍ಐಆರ್ ಆಗಿದೆ. ಅಕ್ರಮಕ್ಕೆ ಅವಕಾಶ ಕೊಟ್ಟ ಅಧಿಕಾರಿಗಳ ಮೇಲೂ ತನಿಖೆ ಮುಂದುವರಿದಿದೆ. ತಪ್ಪು ಮಾಡಿದ್ದರೆ ಕ್ರಮ ಆಗಲಿದೆ ಎಂದು ಹೇಳಿದರು.

ಪ್ರಮುಖ ಸುದ್ದಿ :-   ದೇವರಾಜ ಅರಸು ಟ್ರಕ್‌ ಟರ್ಮಿನಲ್‌ ಹಗರಣ: ಬಿಜೆಪಿ ಮಾಜಿ ಶಾಸಕ ಡಿ.ಎಸ್. ವೀರಯ್ಯ ಬಂಧನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement