ಹುಬ್ಬಳ್ಳಿಗೆ ಬರಲಿದೆ ಏಮ್ಸ್‌ ಆಸ್ಪತ್ರೆ

ಹುಬ್ಬಳ್ಳಿ: ಸ್ಥಾಪಿಸಲು ಉದ್ದೇಶಿಸಿದ್ದ ಪ್ರತಿಷ್ಠಿತ ಆಲ್ ಇಂಡಿಯಾ ಇನ್​ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಏಮ್ಸ್‌) ಈಗ ಅಲ್ಲಿಂದ ಸ್ಥಳಾಂತರಗೊಳ್ಳಿದ್ದು, ಈಗ ಹುಬ್ಬಳ್ಳಿ- ಧಾರವಾಡ ಅವಳಿ ನಗರದಲ್ಲಿ ಜಾಗ ಗುರುತಿಸಲು ರಾಜ್ಯ ಸರ್ಕಾರ ಮುಂದಾಗಿದೆ.
ಹೀಗಾಗಿ ಇದುವರೆಗೂ ಶೈಕ್ಷಣಿಕ ಹಾಗೂ ವ್ಯಾಪಾರ ಕ್ಷೇತ್ರದಲ್ಲಿ ಉತ್ತರ ಕರ್ನಾಟಕದ ಹೆಬ್ಬಾಗಿಲಾಗಿದ್ದ ಹುಬ್ಬಳ್ಳಿ-ಧಾರವಾಡ ಈಗ ಆರೋಗ್ಯ ಕ್ಷೇತ್ರದಲ್ಲಿಯೂ ಈಗ ಉತ್ತರ ಕರ್ನಾಟಕದ ಕೇಂದ್ರವಾಗಲಿದೆ.
ಕಲಬುರಗಿ ಸೇಡಂ ರಸ್ತೆಯ ಸುಸಜ್ಜಿತ ಇಎಸ್​ಐಸಿ ಆಸ್ಪತ್ರೆಯನ್ನು ಆಲ್ ಇಂಡಿಯಾ ಇನ್​ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಎಐಐಎಂಎಸ್) ಆಗಿ ಮೇಲ್ದರ್ಜೆಗೇರಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಮುಂದಾಗಿದ್ದರು. ಆದರೆ ರಾಜ್ಯ ಸರ್ಕಾರ ತನ್ನ ನಿಲುವು ಬದಲಾವಣೆ ಮಾಡಿದೆ ಎನ್ನಲಾಗಿದ್ದು, ಹುಬ್ಬಳ್ಳಿ-ಧಾರವಾಡದಲ್ಲಿ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸಲು ಸರ್ಕಾರ ಮುಂದಾಗಿದೆ ಎನ್ನಲಾಗಿದೆ.ಹುಬ್ಬಳ್ಳಿ-ಧಾರವಾಡದಲ್ಲಿ ಏಮ್ಸ್​ಗೆ ಜಮೀನು ಗುರುತಿಸಿರುವ ಕುರಿತಂತೆ ಲೋಕಸಭೆಯಲ್ಲಿ ಸರ್ಕಾರ ಲಿಖಿತ ಉತ್ತರವನ್ನೂ ನೀಡಿದೆ ಎಂದು ಹೇಳಲಾಗಿದೆ. ತಾರಿಹಾಳ, ಮುಮ್ಮಿಗಟ್ಟಿ, ತಡಸಿನಕೊಪ್ಪ ಪ್ರದೇಶದಲ್ಲಿ ದೆಹಲಿಯ ಏಮ್ಸ್‌ ತಂಡ ಜಾಗ ಪರಿಶೀಲನೆ ನಡೆಸಿತ್ತು

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement