ನವದೆಹಲಿ: ಕೇಂದ್ರ ಸರ್ಕಾರ ಕಳೆದ 5 ವರ್ಷಗಳಲ್ಲಿ 6,76,074 ಮಂದಿಗೆ ಭಾರತೀಯ ಪೌರತ್ವವನ್ನು ನೀಡಿದೆ ಎಂದು ಕೇಂದ್ರ ಗೃಹ ಇಲಾಖೆಯ ರಾಜ್ಯ ಸಚಿವ ನಿತ್ಯಾನಂದ ರೈ ಹೇಳಿದ್ದಾರೆ.
ಸಂಸದ ಕಾರ್ತಿ ಚಿದಂಬರಂ ಅವರ ಪ್ರಶ್ನೆಗೆ ಲೋಕಸಭೆಯಲ್ಲಿ ಉತ್ತರ ನೀಡಿರುವ ಅವರು 2015- 19ರ ನಡುವೆ ನೀಡಲಾಗಿರುವ ಭಾರತೀಯ ಪೌರತ್ವದ ಬಗ್ಗೆ ಮಾಹಿತಿ ನೀಡಿದ್ದಾರೆ.
ವಿದೇಶದಲ್ಲಿ ನೆಲೆಸುತ್ತಿರುವವರಿಗೆ ಭಾರತೀಯ ಪೌರತ್ವ ನೀಡುವ ಪದ್ಧತಿ ಮೊದಲಿನಿಂದಲೂ ನಡೆಯುತ್ತ ಬಂದಿದೆ. ಅಮೆರಿಕ ಹಾಗೂ ಇತರ ದೇಶಗಳಂತೆ ದ್ವಿಪೌರತ್ವ ನೀತಿಯನ್ನು ಜಾರಿಗೆ ತರುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
2005 ರಿಂದ 2020ರವರೆಗೂ 36,99,476 ಮಂದಿಗೆ ಅನಿವಾಸಿ ಭಾರತೀಯ ಪೌರತ್ವ ಕಾರ್ಡ್ (ಒಸಿಐ)ಗಳನ್ನು ನೀಡಲಾಗಿದೆ ಎಂದು ಹೇಳಿದರು. ಒಟ್ಟು 1,24,99,395 ಮಂದಿ ಭಾರತೀಯ ಪ್ರಜೆಗಳು ವಿದೇಶಗಳಲ್ಲಿ ನೆಲೆಸಿದ್ದಾರೆ ಎಂದು ತಿಳಿಸಿದರು.
ನಿಮ್ಮ ಕಾಮೆಂಟ್ ಬರೆಯಿರಿ