ಕರ್ನಾಟಕದಲ್ಲಿ ಅಂಗನವಾಡಿ ಆರಂಭಕ್ಕೆ ಆದೇಶ, ನಿಯಮ ಪಾಲನೆ ಕಡ್ಡಾಯ

posted in: ರಾಜ್ಯ | 0

ಮೈಸೂರು: ರಾಜ್ಯದಲ್ಲಿ ಅಂಗನವಾಡಿಗಳನ್ನು ಶೀಘ್ರವಾಗಿ ಆರಂಭಿಸಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜಿಲ್ಲಾಡಳಿತಗಳಿಗೆ ಸೂಚಿಸಿದೆ.
ಆದರೆ ಅಂಗನವಾಡಿಗಳನ್ನು ಆರಂಭಿಸುವ ಮುನ್ನ ೧೬ ನಿಯಮಗಳನ್ನು ವಿಧಿಸಿದೆ. ಪಾಲಕರ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಅಂಗನವಾಡಿ ಸಿಬ್ಬಂದಿ ೩ ರಿಂದ ೬ ವರ್ಷದವರೆಗಿನ ಮಕ್ಕಳಿಗೆ ಚಟುವಟಿಕೆಗಳನ್ನು ಕೈಗೊಳ್ಳಬೇಕು. ಚಟುವಟಿಕೆಗಳು ಬೆಳಗ್ಗೆ ೯ ಗಂಟೆಯಿಂದ ಮಧ್ಯಾಹ್ನ ೧೨ ರವರೆಗೆ ನಡೆಯಬೇಕು.
ಪ್ರತಿ ಅಂಗನವಾಡಿಯಲ್ಲಿ ೫ ಮಕ್ಕಳಿಗೆ ಮಾತ್ರ ಅವಕಾಶ ನೀಡಬೇಕಲ್ಲದೇ ಸಾಮಾಜಿಕ ಅಂತರ ಕಾಪಾಡುವುದು ಅವಶ್ಯಕವಾಗಿದೆ. ಒಂದು ವೇಳೆ ಅಂಗನವಾಡಿಯ ಮಕ್ಕಳ ಸಂಖ್ಯೆ ೨೦ ಇದ್ದರೆ, ಮಕ್ಕಳು ನಾಲ್ಕು ದಿನಗಳಿಗೊಮ್ಮೆ ಅಂಗನವಾಡಿಗೆ ಹಾಜರಾಗಬೇಕು. ಹಾಲುಣಿಸುವ ತಾಯಂದಿರು, ಮೂರು ವರ್ಷದೊಳಗಿನ ಮಕ್ಕಳು ಹಾಗೂ ಗರ್ಭಿಣಿಯರಿಗೆ ಅಂಗನವಾಡಿಗೆ ಪ್ರವೇಶವಿಲ್ಲ. ಎಲ್ಲ ಸಿಬ್ಬಂದಿಗೆ ಆರ್‌ಟಿ-ಪಿಸಿಆರ್‌ ಪರೀಕ್ಷೆಯ ನೆಗೆಟಿವ್‌ ವರದಿ ಕಡ್ಡಾಯವಾಗಿದೆ. ಎಲ್ಲರೂ ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು.
ಸರಕಾರ ಎಲ್ಲ ಸೌಕರ್ಯಗಳನ್ನು ನೀಡಿದರೆ ನಾವು ಅಂಗನವಾಡಿಗಳನ್ನು ಮತ್ತೆ ಆರಂಭಿಸಲು ಸಿದ್ಧರಾಗಿದ್ದೇವೆ. ಪಾಲಕರಿಂದ ಅನುಮತಿ ಪಡೆದುಕೊಳ್ಳಬೇಕು. ಆದರೆ ಪಾಲಕರು ಎಲ್ಲದಕ್ಕೂ ನಮ್ಮನ್ನೇ ದೂಷಿಸುವುದರಿಂದ ಅನುಮತಿ ಪತ್ರ ಪಡೆಯುವುದು ಕಷ್ಟ ಎಂದು ಮೈಸೂರು ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ಸುನಂದಾ ತಿಳಿಸಿದ್ದಾರೆ.
ಮಕ್ಕಳು ವರ್ಗಕ್ಕೆ ಹಾಜರಾಗುವುದು ಐಚ್ಛಿಕ. ಮನೆಯಲ್ಲಿಯೇ ಇರಲು ಬಯಸುವ ಮಕ್ಕಳಿಗೆ ಆಹಾರ ಧಾನ್ಯವನ್ನು ಅವರ ಮನೆಗೆ ತಲುಪಿಸಲಾಗುವುದು. ಅಂಗನವಾಡಿ ಪುನರಾರಂಭಿಸುವ ಕುರಿತು ಅಧಿಕಾರಿಗಳ ಸಭೆ ಕರೆಯಲಾಗಿದ್ದು, ಸಭೆಯಲ್ಲಿ ಅಂಗನವಾಡಿ ಆರಂಭದ ದಿನಾಂಕ ನಿಗದಿಪಡಿಸಲಾಗುವುದು ಎಂದು ಮೈಸೂರು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎ.ಪರಮೇಶ ತಿಳಿಸಿದರು.

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಇಂದಿನ ಪ್ರಮುಖ ಸುದ್ದಿ :-   ಚೆನ್ನೈ ಬಂದರಿನಲ್ಲಿ ದೇಶಕ್ಕೆ ಅಕ್ರಮವಾಗಿ ತರುತ್ತಿದ್ದ 114 ಮೆಟ್ರಿಕ್ ಟನ್ ಅಡಿಕೆ ವಶಪಡಿಸಿಕೊಂಡ ಡಿಆರ್‌ಐ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

/ 5. ಒಟ್ಟು ವೋಟುಗಳು

ನಿಮ್ಮ ಕಾಮೆಂಟ್ ಬರೆಯಿರಿ

advertisement