ಗಣರಾಜ್ಯೋತ್ಸವದಂದು ರೈತನ ಸಾವು:ಎಸ್‌ಐಟಿ ತನಿಖೆಗೆ ಒತ್ತಾಯಿಸಿ ಕುಟುಂಬಸ್ಥರಿಂದ ಹೈಕೋರ್ಟಿಗೆ ಮೊರೆ

ಜನವರಿ ೨೬ರಂದು ನಡೆದ ರೈತರ ಟ್ರಾಕ್ಟರ್‌ ರ್ಯಾಲಿಯಲ್ಲಿ ಮೃತಪಟ್ಟ ರೈತನ ಕುಟುಂದವರು ವಿಶೇಷ ತನಿಖಾ ತಂಡದಿಂದ ತನಿಖೆಯಾಗಬೇಕೆಂದು ದೆಹಲಿ ಉಚ್ಚ ನ್ಯಾಯಾಲಯದ ಮೊರೆ ಹೋಗಿದ್ದಾರೆ.
೨೫ ವರ್ಷದ ನವೀತ್‌ ಸಿಂಗ್‌ ರ್ಯಾಲಿಯಲ್ಲಿ ನಡೆದ ಹಿಂಸಾಚಾರದಲ್ಲಿ ಮೃತಪಟ್ಟಿದ್ದಾರೆ. ದೆಹಲಿ ಪೊಲೀಸರ ಪ್ರಕಾರ ನವೀತ್‌ ಸಿಂಗ್‌ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಆದರೆ ಕಟುಂಬದ ಸದಸ್ಯರು ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ ಪೊಲೀಸರು ಗುಂಡು ಹಾರಿಸಿದ್ದಕ್ಕೆ ಟ್ರಾಕ್ಟರ್‌ ಚಾಲನೆ ಮಾಡುತ್ತಿದ್ದ ನವೀತ್‌ ಸಿಂಗ್‌ ನಿಯಂತ್ರಣ ಕಳೆದುಕೊಂಡಿದ್ದಕ್ಕೆ ಅಪಘಾತ ಸಂಭವಿಸಿದೆ ಎಂದು ದೂರಿದ್ದಾರೆ. ಅಲ್ಲದೇ ಟ್ರಾಕ್ಟರ್‌ ಪಲ್ಟಿಯಾದ ಸಂದರ್ಭದಲ್ಲಿ ದೆಹಲಿ ಪೊಲೀಸರು ವೈದ್ಯಕೀಯ ಚಿಕಿತ್ಸೆ ಕೊಡಿಸಲು ಮುಂದಾಗಲಿಲ್ಲ ಎಂದು ತಿಳಿಸಲಾಗಿದೆ.
ಅಲ್ಲದೇ ಸಮೀಪದ ಆಂಧ್ರ ಎಜುಕೇಶನ್‌ ಸೊಸೈಟಿ ಅಳವಡಿಸಿಕೊಂಡ ಸಿಸಿ ಟಿವಿ ಸಂಗ್ರಹದ ಡಿವಿಆರ್‌ಅನ್ನು ಪೊಲೀಸರು ತೆಗೆದು ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ನವ್ರೀತ್ ಸಾವಿನ ವರದಿಗೆ ಸಂಬಂಧಿಸಿದಂತೆ ಹಿರಿಯ ಪತ್ರಕರ್ತರ ವಿರುದ್ಧ ಎಫ್‌ಐಆರ್ ನೋಂದಣಿ ಮಾಡುವುದರಿಂದ ದೆಹಲಿ ಪೊಲೀಸರು ನ್ಯಾಯಯುತ ತನಿಖೆ ನಡೆಸುವ ಸಾಧ್ಯತೆ ಕಡಿಮೆ ಎಂದು ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ ತಿಳಿಸಲಾಗಿದೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ : 1ನೇ ಹಂತದಲ್ಲಿ 62.37%ರಷ್ಟು ಮತದಾನ ; 2019ರ ಮತದಾನದ ಪ್ರಮಾಣಕ್ಕಿಂತ ಕಡಿಮೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement