ಮುಂಬೈ: ಸ್ಥಳೀಯ ರೈಲು ಸೇವೆ ಆರಂಭಗೊಂಡ ನಂತರ ಮೂಂಬೈನಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವುದು ಕಂಡು ಬಂದಿದೆ.
ಇತ್ತೀಚಿಗೆ ನಗರದಲ್ಲಿ ಧಿಡೀರನೇ ಕೊವಿಡ್-೧೯ ಪ್ರಕರಣಗಳ ಸಂಖ್ಯೆ ಹೆಚ್ಚಳಗೊಂಡಿರುವುದಕ್ಕೆ ಸ್ಥಳಿಯ ರೈಲು ಸೇವೆ ಆರಂಭಿಸಿರುವುದೇ ಕಾರಣ ಎಂದು ವೈದ್ಯಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಫೆ.೧೦ರಂದು ನಗರದಲ್ಲಿ ೫೫೮ ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ ೫೩೬೯ಕ್ಕೇರಿದೆ. ಫೆ.೯ರಂದು ೩೭೫ ಹೊಸ ಪ್ರಕರಣಗಳು ದಾಖಲಾಗಿವೆ.
ಫೆಬ್ರವರಿ 1 ರಿಂದ ಮುಂಬೈ ಸ್ಥಳೀಯ ರೈಲು ಸೇವೆಗಳನ್ನು ನಿರ್ಬಂಧಿತ ಸಮಯದೊಂದಿಗೆ ಸಾರ್ವಜನಿಕರಿಗೆ ಮತ್ತೆ ಆರಂಭಿಸಲಾಗಿದೆ. ಸುಮಾರು 3.4 ಮಿಲಿಯನ್ ಪ್ರಯಾಣಿಕರು ಉಪನಗರ ಸ್ಥಳೀಯ ರೈಲು ಜಾಲದಿಂದ ಮೊದಲ ದಿನ ಪ್ರಯಾಣಿಸಿದ್ದರು. ರೈಲ್ವೆ ನಿಲ್ದಾಣಗಳ ಹೊರಗಿನ ಉದ್ದದ ಸಾಲುಗಳ ಚಿತ್ರಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು ಮತ್ತು ಸರತಿ ಸಾಲುಗಳಲ್ಲಿ ಮತ್ತು ಪ್ಲಾಟ್‌ಫಾರ್ಮ್‌ಗಳಲ್ಲಿ ಯಾವುದೇ ಸಾಮಾಜಿಕ ದೂರವನ್ನು ಕಾಪಾಡಿಕೊಳ್ಳದಿರುವುದು ಕಂಡು ಬಂದಿತ್ತು.
ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವುದಕ್ಕೆ ಸ್ಥಳೀಯ ರೈಲು ಸೇವೆ ಕಾರಣ ಎಂಬುದನ್ನು ಕಡೆಗಣಿಸಲಾಗುವುದಿಲ್ಲ. ಸಾಮಾಜಿಕ ಅಂತರವಿಲ್ಲದೇ ಜನರು ಪ್ರಯಾಣ ಮಾಡಿದರೆ ಸೋಂಕು ಹರಡುವ ಪ್ರಮಾಣ ಹೆಚ್ಚಾಗಿರುತ್ತದೆ ಎಂದು ಜಾಸ್ಲೋಕ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಸಾಂಕ್ರಾಮಿಕ ರೋಗಗಳ ನಿರ್ದೇಶಕ ವೈದ್ಯ ಓಂ ಶ್ರೀವಾಸ್ತವ ಹೇಳುತ್ತಾರೆ.
ನಿಮ್ಮ ಕಾಮೆಂಟ್ ಬರೆಯಿರಿ