ಸಿರಿವಂತರಿಂದ ಸಿರಿವಂತರಿಗಾಗಿ ಸಿರಿವಂತರು ಮಂಡಿಸಿದ ಬಜೆಟ್‌

ನವದೆಹಲಿ: ಇತ್ತೀಚಿಗೆ ಮಂಡಿಸಲಾದ ಆಯವ್ಯಯ ಕುರಿತು ನಿರಾಸೆ ವ್ಯಕ್ತಪಡಿಸಿದ ಮಾಜಿ ವಿತ್ತ ಸಚಿವ ಪಿ.ಚಿದಂಬರಂ, ಪ್ರಸ್ತುತ ಬಜೆಟ್‌ ಸಿರಿವಂತರಿಂದ ಸಿರಿವಂತರಿಗಾಗಿ ಸಿರಿವಂತರು ಮಂಡಿಸಿದ್ದಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಅವರು ರಾಜ್ಯಸಭೆಯಲ್ಲಿ ಬಜೆಟ್‌ ಕುರಿತ ಚರ್ಚೆಯಲ್ಲಿ ಮಾತನಾಡಿ, ಪ್ರಸ್ತುತ ಬಜೆಟ್‌ ಆರ್ಥಿಕತೆಯನ್ನು ಸ್ಪರ್ಧಾತ್ಮಕವಾಗಿ ನಿರ್ವಹಣೆ ಮಾಡುವಲ್ಲಿ ವಿಫಲವಾಗಿದೆ ಎಂದು ದೂಷಿಸಿದರು. ಬಜೆಟ್‌ನಲ್ಲಿ ಬಡವರಿಗಾಗಿ ಏನೂ ಇಲ್ಲ. ಬಡವರು ಬಡತನದಲ್ಲಿಯೇ ಜೀವನ ನಡೆಸಬೇಕಾಗುತ್ತದೆ. ಈ ಆಯವ್ಯಯ ದೇಶದ ಶೇ.೭೩ರಷ್ಟು ಶ್ರೀಮಂತಿಕೆಯನ್ನು ಹೊಂದಿದ ದೇಶದ ಶೇ.೧ರಷ್ಟು ಜನರಿಗಾಗಿದೆ ಎಂದು ತಿಳಿಸಿದರು.
ಆರ್ಥಿಕ ಹಿಂಜರಿತದ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪವಿಲ್ಲ. ಕೊರೊನಾ ಸೋಂಕಿಗಿಂತ ಮುಂಚಿನ ೨ ವರ್ಷ ಆರ್ಥಿಕ ಹಿಂಜರಿತ ಇತ್ತು ಎಂಬುದು ನೈಜ ಸಂಗತಿ. ಮೂರು ವರ್ಷಗಳ ವಿತ್ತೀಯ ನಿರ್ವಹಣೆ ವೈಫಲ್ಯದಿಂದಾಗಿ ನಾವು ೨೦೧೭-೧೮ರಲ್ಲಿ ಎಲ್ಲಿದ್ದೆವೋ ೨೦೨೦-೨೧ರಲ್ಲಿ ಕೂಡ ಅಲ್ಲಿಯೇ ಇದ್ದೇವೆ ಸರಕಾರ ಶೇ. ೧೪.೮ ಜಿಡಿಪಿ ಪ್ರಗತಿ ಸಾಧಿಸುವುದಾಗಿ ಹೇಳಿತ್ತು, ಆದರೆ ಈಗ ಶೇ.೧೧ರಷ್ಟು ಸಾಧನೆ ಮಾಡುವುದಾಗಿ ಹೇಳುತ್ತಿದೆ ಎಂದರು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement