ಚುನಾವಣೆ ನಂತರ ಮಮತಾರಿಂದ ರಾಮ ಜಪ

ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ಮುಗಿದಾಗ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ಜೈ ಶ್ರೀರಾಮ ಎಂದು ಜಪ ಮಾಡಲಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದರು.
ಅವರು ಕೂಚ್‌ಬೆಹಾರ್‌ನಲ್ಲಿ ಪರಿವರ್ತನ್‌ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು. ಜೈ ಶ್ರೀರಾಮ ಪಠಣವು ಮಮತಾಗೆ ಮಾಡಿದ ಅವಮಾನವೇ ಎಂದು ಪ್ರಶ್ನಿಸಿದ ಶಾ, ಅನೇಕರು ರಾಮ ಜಪದಿಂದ ಹೆಮ್ಮೆ ಪಡುತ್ತಾರೆ. ಆದರೆ ಮತಗಳಿಗಾಗಿ ಒಂದು ಸಮುದಾಯವನ್ನು ಸಮಾಧಾನಪಡಿಸಬೇಕಿರುವುದರಿಂದ ಮಮತಾಗೆ ರಾಮ ನಾಮದಿಂದ ಬೇಸರವಾಗುತ್ತದೆ ಎನ್ನುವ ಮೂಲಕ ನೇತಾಜಿಯ ಜನ್ಮ ವಾರ್ಷಿಕೋತ್ಸವದ ಆಚರಣೆಯ ಸಂದರ್ಭದಲ್ಲಿ ಮಮತಾ ಅವರು ‘ಜೈ ಶ್ರೀ ರಾಮ್’ ಘೋಷಣೆಗಳನ್ನು ಕೇಳಿದ ನಂತರ ವೇದಿಕೆಯಿಂದ ಕೆಳಗಿಳಿದ ಘಟನೆಯನ್ನು ಶಾ ಉಲ್ಲೇಖಿಸಿದರು.
ಇಲ್ಲಿ ಜೈ ಶ್ರೀರಾಮ ಹೇಳದಿದ್ದರೆ ಪಾಕಿಸ್ತಾನದಲ್ಲಿ ಹೇಳಬೇಕೇ? ಎಂದ ಅವರು, ಕೇವಲ ಮುಖ್ಯಮಂತ್ರಿಯನ್ನು, ಶಾಸಕರು. ಸಚಿವರನ್ನು ಬದಲಿಸುವುದು ನಮ್ಮ ಯಾತ್ರೆಯ ಉದ್ದೇಶವಲ್ಲ, ಪಶ್ಚಿಮ ಬಂಗಾಳದ ಸ್ಥಿತಿಯನ್ನು ಬದಲಿಸಬೇಕಿದೆ. ಮೋದಿಯವರ ವಿಕಾಸ ರಾಜಕಾರಣ ಹಾಗೂ ಮಮತಾ ಅವರ ವಿನಾಶ ರಾಜಕಾರಣವನ್ನು ಅಮಿತ್‌ ಶಾ ವಿವರಿಸಿದರು.
2017 ರಲ್ಲಿ ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಶೂನ್ಯ ಸಂಪಾದನೆ ಮಾಡಲಿದೆ ಎಂದು ಹೇಳಿದ್ದರು. ಆದರೆ ನಂತರ ಜನರು ಬಿಜೆಪಿಗೆ 18 ಸ್ಥಾನಗಳನ್ನು ನೀಡಿದರು. ಈಗ ಮಮತಾ ಚುನಾವಣೆಗೆ ಸ್ಪರ್ಧಿಸಲು ಕ್ಷೇತ್ರಕ್ಕಾಗಿ ಹುಡುಕಾಟ ನಡೆಸಿದ್ದಾರೆ.
ಪಶ್ಚಿಮ ಬಂಗಾಳಕ್ಕೆ ಕೇಂದ್ರದ ಬಜೆಟ್ ಹಂಚಿಕೆ ಮತ್ತು ಉತ್ತರ ಬಂಗಾಳವನ್ನು ಪ್ರಮುಖ ಪ್ರವಾಸಿ ಕೇಂದ್ರವನ್ನಾಗಿ ಪರಿವರ್ತಿಸುವ ಭವಿಷ್ಯದ ಯೋಜನೆ ಕುರಿತು ಮಾತನಾಡಿದ ಅಮಿತ್ ಶಾ, ಬಂಗಾಳದ ಜನರು ದುರ್ಗಾ ದೇವಿಯನ್ನು ಪೂಜಿಸುತ್ತಾರೆ. ಆದರೆ ಪೂಜೆಗಾಗಿ ನ್ಯಾಯಾಲಯಕ್ಕೆ ಹೋಗಬೇಕಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ರಾಜ್ಯವನ್ನು ರಾಮ್ ನವಮಿ ಮತ್ತು ದುರ್ಗಾ ಪೂಜೆಯ ಭೂಮಿಯನ್ನಾಗಿ ಮಾಡಲಾಗುವುದು.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ: ಮತದಾನಕ್ಕೂ ಮುನ್ನವೇ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿ...!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement