ಇಸ್ರೋ ಸೌಲಭ್ಯ ಬಳಕೆಗೆ ಖಾಸಗಿ ಸಂಸ್ಥೆಗಳಿಗೆ ಅವಕಾಶ…!

ಬೆಂಗಳೂರು: ಭಾರತದ ಬಾಹ್ಯಾಕಾಶ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಈಗ ತನ್ನ ಉಪಗ್ರಹ ಕೇಂದ್ರವನ್ನು ಖಾಸಗಿ ಸಂಸ್ಥೆಗಳಿಗೆ ತೆರೆದಿದೆ.
ಈಗಾಗಲೇ ಖಾಸಗಿ ಕಂಪನಿಗಳ ಎರಡು ಉಪಗ್ರಹಗಳನ್ನು ಹಾಗೂ ಅಕಾಡೆಮಿಯ ಒಂದು ಉಪಗ್ರಹವನ್ನು ಯುಆರ್ ರಾವ್ ಉಪಗ್ರಹ ಕೇಂದ್ರದಲ್ಲಿ (ಯುಆರ್‍ಎಸ್‍ಸಿ) ಪರೀಕ್ಷಿಸಲಾಗಿದೆ.
ಮುಂದಿನ ಕೆಲವು ತಿಂಗಳಲ್ಲಿ ಎರಡು ಖಾಸಗಿ ಕಂಪನಿಗಳು ತಮ್ಮ ಎಂಜಿನ್‍ಗಳನ್ನು ಶ್ರೀಹರಿಕೋಟಾ ಬಾಹ್ಯಾಕಾಶ ನಿಲ್ದಾಣ ಮತ್ತು ತಿರುವನಂತಪುರಂ ರಾಕೆಟ್ ಕೇಂದ್ರದಲ್ಲಿ ಪರೀಕ್ಷಿಸಲಿವೆ. ಮ್ಯಾಪಿಂಗ್ ಸೇವೆಗಳನ್ನು ನೀಡುವ ಖಾಸಗಿ ಸಂಸ್ಥೆಗೆ ಇಸ್ರೋ ಶೀಘ್ರದಲ್ಲೇ ತನ್ನ ಉಪಗ್ರಹ ಚಿತ್ರಗಳನ್ನು ನೀಡಲಿದೆ. ಬೆಂಗಳೂರು ಮೂಲದ ಸಿಝಿಜಿ ಸ್ಪೇಸ್ ಟೆಕ್ನಾಲಜೀಸ್‍ ಹಾಗೂ ತಮಿಳುನಾಡು ಮೂಲದ ಸ್ಪೇಸ್ ಕಿಡ್ಜ್ ಇಂಡಿಯಾ ಉಪಗ್ರಹಗಳು ಪರೀಕ್ಷೆಗೆ ಒಳಪಟ್ಟಿವೆ ಎನ್ನಲಾಗಿದೆ.
ಈ ಬಗ್ಗೆ ಇಸ್ರೋ ಅಧ್ಯಕ್ಷ ಕೆ. ಸಿವನ್ ಅಮುಂದಿನ ದಿನಗಳಲ್ಲಿ ಹೆಚ್ಚಿನ ಖಾಸಗಿ ಕಂಪನಿಗಳು ನಮ್ಮ ಸೌಲಭ್ಯಗಳನ್ನು ಬಳಸಿಕೊಳ್ಳಲು ಅವಕಾಶ ಕಲ್ಪಿಸಲಾಗುವುದು. ಮುಖ್ಯವಾಗಿ ಸ್ಟಾರ್ಟ್ ಅಪ್‍ಗಳಿಗೆ ಇಸ್ರೋ ಆಸರೆಯಾಗಲಿದೆ. ಜಾಗತಿಕ ಬಾಹ್ಯಾಕಾಶ ಚಟುವಟಿಕೆಗಳ ಕೇಂದ್ರವಾಗಲು ತಾಂತ್ರಿಕ ಆವಿಷ್ಕಾರಗಳನ್ನು ನಾವು ಎದುರು ನೋಡುತ್ತೇವೆ ಎಂದು ಟ್ವೀಟ್‍ನಲ್ಲಿ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   14 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ದಿನಾಂಕ ಬದಲು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement