ದಿನೇಶ ತ್ರಿವೇದಿ ಬಿಜೆಪಿಗೆ ಬಂದರೆ ಸ್ವಾಗತ

ಕೊಲ್ಕತ್ತಾ: ತೃಣಮೂಲ ಕಾಂಗ್ರೆಸ್(ಟಿಎಂಸಿ) ನಾಯಕ ದಿನೇಶ ತ್ರಿವೇದಿ ಶುಕ್ರವಾರ ರಾಜ್ಯಸಭೆಯಲ್ಲಿ ತಮ್ಮ ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದು, ಅವರು ಬಯಸಿದರೆ ತಮ್ಮ ಪಕ್ಷಕ್ಕೆ ಬರಬಹುದು ಎಂದು ಬಿಜೆಪಿ ಹೇಳಿದೆ.
ದಿನೇಶ್ ತ್ರಿವೇದಿ ರಾಜೀನಾಮೆ ಬಗ್ಗೆ ಸುದಿಗಾರರ ಜೊತೆ ಮಾತನಾಡಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯ , ದಿನೇಶ ತ್ರಿವೇದಿ ಅವರು ಇಷ್ಟವಿದ್ದರೆ ಬಿಜೆಪಿಗೆ ಸೇರಬಹುದು, ಅವರಿಗೆ ಸ್ವಾಗತವಿದೆ ಎಂದು ಹೇಳಿದ್ದಾರೆ.
ದಿನೇಶ್ ತ್ರಿವೇದಿ ಮಾತ್ರವಲ್ಲ, ಯಾರು ಪ್ರಾಮಾಣಿಕ ಕೆಲಸ ಮಾಡಲು ಬಯಸುತ್ತಾರೋ ಅವರು ತೃಣಮೂಲ ಕಾಂಗ್ರೆಸ್‌ನಲ್ಲಿ ಉಳಿಯಲು ಸಾಧ್ಯವಿಲ್ಲ. ತ್ರಿವೇದಿ ಬಿಜೆಪಿ ಸೇರಲು ಬಯಸಿದರೆ ನಾವು ಅವರನ್ನು ಸ್ವಾಗತಿಸುತ್ತೇವೆ” ಎಂದು ವಿಜಯವರ್ಗಿಯಾ ಎಎನ್‌ಐಗೆ ತಿಳಿಸಿದ್ದಾರೆ.
294 ಸದಸ್ಯ ಬಲ ಹೊಂದಿರುವ ಪಶ್ಚಿಮ ಬಂಗಾಳ ವಿಧಾನಸಭೆಗೆ ಕೆಲವೇ ತಿಂಗಳಲ್ಲಿ ಚುನಾವಣೆ ನಡೆಯಲಿದ್ದು, ಬಂಗಾಳದಲ್ಲಿ ಆಡಳಿತರೂಢ ಟಿಎಂಸಿ ನಾಯಕರ ಪಕ್ಷಾಂತರ ಪರ್ವ ಮುಂದುವರೆದಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

ಇಂದಿನ ಪ್ರಮುಖ ಸುದ್ದಿ :-   ಭಾರತ ಸಂಬಂಧ ಕೊನೆಗೊಳಿಸಿದರೆ ಕೆನಡಾಕ್ಕೇ ಆರ್ಥಿಕ ಹೊಡೆತ..? : ಕೆನಡಾದಲ್ಲಿ ಪಂಜಾಬ್ ವಿದ್ಯಾರ್ಥಿಗಳ ವಾರ್ಷಿಕ ಶೈಕ್ಷಣಿಕ ಹೂಡಿಕೆಯೇ 68,000 ಕೋಟಿ ರೂ...!

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement