ರಾಜ್ಯಸಭೆಯಲ್ಲಿಯೇ ಸಂಸದ ಸ್ಥಾನಕ್ಕೆ ರಾಜೀನಾಮೆ ಪ್ರಕಟಿಸಿದ ದಿನೇಶ ತ್ರಿವೇದಿ

ನವ ದೆಹಲಿ: ಕೇಂದ್ರ ರೈಲ್ವೆ ಮಾಜಿ ಸಚಿವ ಮತ್ತು ರಾಜ್ಯಸಭಾ ಹಿರಿಯ ಸಂಸದ ದಿನೇಶ್ ತ್ರಿವೇದಿ ರಾಜ್ಯಸಭೆಗೆ ರಾಜೀನಾಮೆ ನೀಡುವುದಾಗಿ ಪ್ರಕಟಿಸಿದ್ದಾರೆ. ಅವರು ಈ ನಿರ್ಧಾರವನ್ನು ರಾಜ್ಯಸಭೆಯಲ್ಲಿಯೇ ಪ್ರಕಟಿಸಿದರು.
ಬಂಗಾಳದ ಮೇರು ನಾಯಕರಾದ ಸುವೇಂದು ಅಧಿಕಾರಿ, ಸಚಿವ ರಾಜೀವ್‌ ಬ್ಯಾನರ್ಜಿ ಮತ್ತು ಕೆಲವು ತೃಣಮೂಲ ಕಾಂಗ್ರೆಸ್ ಶಾಸಕರು ಪಶ್ಚಿಮ ಬಂಗಾಳದಲ್ಲಿ ಆಡಳಿತ ಪಕ್ಷ ತೃಣ ಮೂಲ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ ವಾರಗಳ ನಂತರ ದಿನೇಶ ತ್ರಿವೇದಿ ರಾಜೀನಾಮೆಯ ಘೋಷಣೆ ಬಂದಿದೆ. ಪಶ್ಚಿಮ ಬಂಗಾಳ ಚುನಾವಣೆ ಏಪ್ರಿಲ್-ಮೇ ತಿಂಗಳಲ್ಲಿ ನಿರೀಕ್ಷಿಸಲಾಗಿದೆ.
ರಾಜ್ಯಸಭೆಯಲ್ಲಿ ಮಾತನಾಡಿದ ತ್ರಿವೇದಿ, ,”ಮಾತೃಭೂಮಿ ಸರ್ವೋಚ್ಚ” ಎಂದು ಹೇಳಿದರು, ತಮ್ಮ ಆಂತರಿಕ ಧ್ವನಿ ಮತ್ತು ಪಶ್ಚಿಮ ಬಂಗಾಳದ “ಹಿಂಸಾಚಾರ” ಮತ್ತು “ಪರಿಸ್ಥಿತಿ” ಯ ಬಗ್ಗೆ ಮಾತನಾಡಲು ತಮ್ಮ ಅಸಮರ್ಥತೆ ಉಲ್ಲೇಖಿಸಿ “ಇಲ್ಲಿ ಕುಳಿತು ಮೌನವಾಗಿರಲು ಯಾವುದೇ ಅರ್ಥವಿಲ್ಲ” ಎಂದು ಹೇಳಿದರು.
ಇಲ್ಲಿ ಕುಳಿತುಕೊಂಡು ನಾನು ಏನು ಮಾಡಬೇಕು ಎಂದು ನನಗೆ ವಿಚಿತ್ರವೆನಿಸುತ್ತದೆ. ನಾನು ಪಾರ್ಟಿಯಲ್ಲಿದ್ದೇನೆ. ಪಕ್ಷಕ್ಕೆ ಶಿಸ್ತುಗಳಿವೆ. ಆದರೆ ಈಗ ನನಗೆ ಉಸಿರುಗಟ್ಟಿದೆ. ನನ್ನನ್ನು ಇಲ್ಲಿಗೆ ಕಳುಹಿಸಿದ್ದಕ್ಕಾಗಿ ನನ್ನ ಪಕ್ಷಕ್ಕೆ ನಾನು ಆಭಾರಿಯಾಗಿದ್ದೇನೆ. ಸ್ವಾಮಿ ವಿವೇಕಾನಂದರು, ‘ಏಳಿ ಎಚ್ಚರಗೊಳ್ಳಿ’ ಎಂದು ಹೇಳಿದ್ದರು. ನಾನು ಇಲ್ಲಿ ಕುಳಿತು ಏನನ್ನೂ ಮಾಡಲು ಸಾಧ್ಯವಾಗದಿದ್ದರೆ, ನಾನು ರಾಜೀನಾಮೆ ನೀಡಿ ಬಂಗಾಳಕ್ಕೆ ಹಿಂತಿರುಗುವುದು ಉತ್ತಮ, ”ಎಂದರು.

advertisement
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
ಅಡ್ಮಿಶನ್ ಗಾಗಿ ಇಂದೇ ಕರೆ ಮಾಡಿ
9535127775 / 9901837775 / 6364528715 / 08362775155 / https://icsmpucollege.com/
ಓದಿರಿ :-   ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು: ಇತ್ತೀಚಿನ ರಾಜಕೀಯ ಬೆಳವಣಿಗೆ ಬಗ್ಗೆ ಎಂಎನ್‌ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಜೊತೆ ಮಾತನಾಡಿದ ಏಕನಾಥ್ ಶಿಂಧೆ

ಸದನಕ್ಕೆ ರಾಜೀನಾಮೆ ನೀಡಲು ಸರಿಯಾದ ಪ್ರಕ್ರಿಯೆ ಇದೆ ಎಂದು ಹೇಳಿದ ರಾಜ್ಯಸಭಾ ಉಪಾಧ್ಯಕ್ಷ ಹರಿವನಶ್ ನಾರಾಯಣ್ ಸಿಂಗ್ ಹೇಳಿದ್ದಾರೆ ಅದರಂತೆ ರಾಜೀನಾಮೆ ಸಲ್ಲಿಸುವಂತೆ ಹೇಳಿದರು.

 

 

advertisement

ಕ್ಷಣ ಕ್ಷಣದ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

/ 5. ಒಟ್ಟು ವೋಟುಗಳು

advertisement

ನಿಮ್ಮ ಕಾಮೆಂಟ್ ಬರೆಯಿರಿ