ಸಿದ್ದರಾಮಯ್ಯ ಕರ್ನಾಟಕದ ಟ್ರಂಪ್‌: ವಿಶ್ವನಾಥ ಲೇವಡಿ

ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕರ್ನಾಟಕದ ಟ್ರಂಪ್ ಎಂದು ಬಿಜೆಪಿ ಮುಖಂಡ ಹೆಚ್. ವಿಶ್ವನಾಥ್ ಲೇವಡಿ ಮಾಡಿದ್ದಾರೆ.
ಸಿದ್ದರಾಮಯ್ಯ ತಮ್ಮ ಸೋಲನ್ನು ಒಪ್ಪಿಕೊಳ್ಳುವುದೂ ಇಲ್ಲ, ಅವರಿಗೆ ಗೆಲ್ಲುವುದಕ್ಕೂ ಆಗುವುದಿಲ್ಲ. ಇದು ಒಂದು ರೀತಿಯಲ್ಲಿ ಟ್ರಂಪಾಯಣದ ಕತೆ ಎಂದು ವ್ಯಂಗ್ಯವಾಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋತರೆ ರಾಹು-ಕೇತುಗಳು ಸೋಲಿಸಿದರು ಎಂಬುದಾಗಿ ಹೇಳುತ್ತಾರೆ. ತಮ್ಮನ್ನು ಬಿಟ್ಟ್ಟರೆ ಬೇರೆಯವರು ರಾಜಕಾರಣದಲ್ಲಿ ಇರಬಾರದು ಎಂಬ ಮನಸ್ಥಿತಿ ಅವರದ್ದು. ಹೀಗಾಗಿ ಒಂದರ್ಥದಲ್ಲಿ ಅವರು ಕರ್ನಾಟಕದ ಟ್ರಂಪ್ ಇದ್ದಂತೆ ಎಂದು ಟಿಕಿಸಿದರು.
ಸಿದ್ದರಾಮಯ್ಯ ಮಿಠಾಯಿ ಕಂಡ ಮಗುವಿನಂತಿದ್ದಾರೆ. ಅವರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ನೋಡಿದ ಕೂಡಲೇ ಸಿಎಂ ಮಿಠಾಯಿ ನೆನಪಾಗುತ್ತದೆ. ಅದನ್ನು ಒಮ್ಮೆ ಪಡೆಯಬೇಕೆಂಬ ಚಡಪಡಿಕೆ ಅವರಿಗಿದೆ. ಹೀಗಾಗಿ, ಪದೇ ಪದೇ ನಾಯಕತ್ವ ಬದಲಾವಣೆ ಬಗ್ಗೆ ಹೇಳಿಕೆ ನೀಡುತ್ತಾರೆ. ಅದು ನಮ್ಮ ಪಕ್ಷದ ಆಂತರಿಕ ವಿಚಾರ. ಈಗ ಅದನ್ನು ಬಿಟ್ಟು ಅಹಿಂದ ಬಗ್ಗೆ ಮಾತನಾಡುತ್ತಿದ್ದಾರೆ.ಇದು ಸಿದ್ದರಾಮಯ್ಯ ಹಾಗೂ ಮಹದೇವಪ್ಪ ಅವರ ಸ್ವಾರ್ಥ ಹೋರಾಟ ಎಂದರು.
ಕುರುಬ ಸಮಾಜದ ಎಸ್‌ಟಿ ಹೋರಾಟ ಸಿದ್ದರಾಮಯ್ಯ ಅವರಿಲ್ಲದೆ ಸಫಲವಾಗಿದೆ. ಲಕ್ಷಾಂತರ ಜನರು ಭಾಗವಹಿಸಿದ್ದರು. ಸಿದ್ದರಾಮಯ್ಯ ಅವರಲ್ಲಿ ನಾನು ಎನ್ನೋ ಅಹಂ ಇತ್ತು. ಈಗ ಸಮುದಾಯ ನನ್ನ ಜೊತೆ ಇಲ್ಲ ಎನ್ನುವ ಭಯ ಅವರನ್ನು ಕಾಡುತ್ತಿದೆ ಎಂದು ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನಾಯಕತ್ವ ಪ್ರಬಲವಾಗುತ್ತಿದ್ದು, ಪಕ್ಷ ಹಾಗೂ ಸಮುದಾಯದಲ್ಲಿ ಸಿದ್ದರಾಮಯ್ಯ ಏಕಾಂಗಿಯಾಗುತ್ತಿದ್ದಾರೆ. ನಾನು ಹಾಗೂ ಸಿದ್ದರಾಮಯ್ಯ ಮೈಸೂರಿನಲ್ಲೇ ಓದಿದ್ದು, ಅವರು ಯಾವುದೇ ವಿದ್ಯಾರ್ಥಿ ಹೋರಾಟದಲ್ಲೂ ಇರಲಿಲ್ಲ ಏಂದರು.
ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಸಂಸ್ಕೃತಿ ಗೊತ್ತಿಲ್ಲ. ಅಚಾನಕ್ ಆಗಿ ನಾವು ಕರೆದುಕೊಂಡು ಬಂದಿದ್ದಕ್ಕೆ ಮುಖ್ಯಮಂತ್ರಿಯಾದರು. ಆದರೆ ಅವರು ಬೇರೆಯವರ ಯಾರ ಯಶಸ್ಸನ್ನು ಸಹಿಸುವುದಿಲ್ಲ. ತಮ್ಮ ಸಮುದಾಯದ ಸ್ವಾಮೀಜಿಯವರ ಹೋರಾಟ ಸಹಿಸುತ್ತಿಲ್ಲ. ಸ್ವಾರ್ಥ ಬಿಟ್ಟರೆ ಏನೂ ಗೊತ್ತಿಲ್ಲ ಎಂದರು.

ಪ್ರಮುಖ ಸುದ್ದಿ :-   ಸುಳ್ಳು ಚುನಾವಣಾ ಅಫಿಡವಿಟ್‌ ಪ್ರಕರಣ : ಬಿಜೆಪಿ ಶಾಸಕ ಗರುಡಾಚಾರಗೆ ವಿಧಿಸಿದ್ದ ಜೈಲು ಶಿಕ್ಷೆ ರದ್ದುಮಾಡಿದ ಹೈಕೋರ್ಟ್

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement