ಬೆಂಗಳೂರು: ಫೆಬ್ರವರಿ ೧೪ರಂದು ಪ್ರೇಮಿಗಳ ದಿನಾಚರಣೆ ಮಾಡುವ ಬದಲು ಮಾತಾ-ಪಿತಾ ಪೂಜಾದಿನವನ್ನಾಗಿ ಆಚರಿಸುವುದಾಗಿ ಶ್ರೀರಾಮ ಸೇನಾ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ ತಿಳಿಸಿದ್ದಾರೆ.
ಶ್ರೀರಾಮ ಸೇನೆ ಕಾರ್ಯಕರ್ತರು ನಗರ ಪ್ರದೇಶಗಳಲ್ಲಿ ವಿವಿಧೆಡೆ ನಿಯೋಜನೆಗೊಳ್ಳಲಿದ್ದು, ಪ್ರೇಮಿಗಳ ದಿನಾಚರಣೆ ಮಾಡುವವರ ಮೇಲೆ ನಿಗಾವಹಿಸಲಿದ್ದಾರೆ. ಯುವಕರಿಗೆ ತಂದೆ-ತಾಯಿ ಪೂಜಿಸುವಂತೆ ಸಲಹೆ ನೀಡಲಿದ್ದಾರೆ.
ನಾವು ೫೦-೬೦ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು, ಪ್ರೇಮಿಗಳ ದಿನಾಚರಣೆ ಹೆಸರಿನಲ್ಲಿ ಅಸಹ್ಯ ಚಟುವಟಿಕೆಗಳು ನಡೆಯದಂತೆ ನೋಡಿಕೊಳ್ಳಲಾಗುವುದು. ನಮ್ಮ ಸಂಘಟನೆ ಕಾರ್ಯಕರ್ತರು ಪೊಲೀಸರೊಂದಿಗೆ ಒಟ್ಟಾಗಿ ಕೆಲಸ ಮಾಡಲಿದ್ದಾರೆ ಎಂದರು.
ಪಾಶ್ಚಿಮಾತ್ಯ ಸಂಸ್ಕೃತಿ ಯುವಕರನ್ನು ಆಕರ್ಷಿಸುತ್ತಿದೆ. ಇದು ನಮ್ಮ ಭವ್ಯ ಪರಂಪರೆಯ ಮೇಲೆ ಪ್ರತಿಕೂಲ ಪರಿಣಾಮ ಉಂಟು ಮಾಡುತ್ತದೆ ಎಂದು ತಿಳಿಸಿದರು.
ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ | |
ಟೆಲಿಗ್ರಾಮ್ ಚಾನೆಲ್ ಸೇರಿ | |
ಫೇಸ್ ಬುಕ್ ಫಾಲೋ ಮಾಡಿ | |
ಗೂಗಲ್ ನ್ಯೂಸ್ ನಲ್ಲಿ ಸೇರಿ | |
ಟ್ವಿಟರ್ ನಲ್ಲಿ ಫಾಲೋ ಮಾಡಿ |
ನಿಮ್ಮ ಕಾಮೆಂಟ್ ಬರೆಯಿರಿ