ಮುಂಬೈ: ಮಹಾರಾಷ್ಟ್ರ ರಾಜ್ಯಪಾಲ ಭಗತ್‌ಸಿಂಗ್ ಕೋಶ್ಯಾರಿ ಬಿಜೆಪಿ ದಾರಿಯಲ್ಲಿ ಸಾಗುತ್ತಿದ್ದು, ಸಂವಿಧಾನ ಎತ್ತಿಹಿಡಿಯಬೇಕಾದರೆ ಕೇಂದ್ರ ಸರಕಾರ ಕೂಡಲೇ ರಾಜ್ಯಪಾಲರನ್ನು ವಾಪಸ್ ಕರೆಸಿಕೊಳ್ಳಬೇಕೆಂದು ಮಹಾರಾಷ್ಟ್ರ ಆಡಳಿತ ನಡೆಸುತ್ತಿರುವ ಶಿವಸೇನೆ ಆಗ್ರಹಿಸಿದೆ.
ಮಹಾವಿಕಾಸ್ ಅಘಾಡಿ ಸರಕಾರ ಸ್ಥಿರ ಮತ್ತು ದೃಢವಾಗಿದೆ. ರಾಜ್ಯ ಸರಕಾರವನ್ನು ಗುರಿಯಾಗಿಸಲು ಕೇಂದ್ರವು ರಾಜ್ಯಪಾಲರ ಹೆಗಲು ಬಳಸುವುದಕ್ಕೆ ನಾವು ಅವಕಾಶ ಕೊಡುವುದಿಲ್ಲ. ರಾಜ್ಯಪಾಲ ಭಗತ್‌ಸಿಂಗ್ ಕೋಶ್ಯಾರಿ ಮತ್ತೆ ಸುದ್ದಿಯಲ್ಲಿದ್ದಾರೆ. ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರದ ಮಾಜಿ ಸಚಿವರಾಗಿದ್ದ ಕೋಶ್ಯಾರಿ ಸದಾ ಸುದ್ದಿಯಲ್ಲಿರಲು ಬಯಸುತ್ತಾರೆ ಎಂದು ಶಿವಸೇನಾದ ಮುಖವಾಣಿ “ಸಾಮನಾʼ ಪತ್ರಿಕೆಯ ಸಂಪಾದಕೀಯದಲ್ಲಿ ಪ್ರಕಟವಾಗಿದೆ.
ಕೋಶ್ಯಾರಿ ಅವರು ಸದಾ ವಿವಾದದಲ್ಲಿರಲು ಬಯಸುತ್ತಾರೆ. ರಾಜಭವನದ ಅಧಿಕಾರಿಗಳ ಸಂವಹನ ಕೊರತೆಯಿಂದಾಗಿ ಸರಕಾರಿ ವಿಮಾನದಲ್ಲಿ ಅವರು ಡೆಹ್ರಾಡೂನ್‌ಗೆ ತೆರಳಲು ಸಾಧ್ಯವಾಗದೇ ಅವರು ಖಾಸಗಿ ವಿಮಾನದಲ್ಲಿ ಪ್ರಯಾಣಿಸಬೇಕಾಯಿತು. ಇದನ್ನೇ ಪ್ರತಿಪಕ್ಷ ಬಿಜೆಪಿ ವಿವಾದ ಮಾಡಲು ಬಯಸುತ್ತಿದೆ. ಇದು ರಾಜ್ಯಪಾಲರ ಖಾಸಗಿ ಪ್ರವಾಸವಾಗಿತ್ತು ಮತ್ತು ಕಾನೂನಿನ ಪ್ರಕಾರ ರಾಜ್ಯಪಾಲರು ಮಾತ್ರವಲ್ಲ, ಮುಖ್ಯಮಂತ್ರಿಯೂ ಸಹ ಅಂತಹ ಉದ್ದೇಶಗಳಿಗಾಗಿ ಸರಕಾರದ ವಿಮಾನವನ್ನು ಬಳಸುವುದಿಲ್ಲ. ಮುಖ್ಯಮಂತ್ರಿಗಳ ಕಚೇರಿ (ಸಿಎಮ್‌ಒ) ಕಾನೂನಿಗೆ ಅನುಸಾರವಾಗಿ ಕಾರ್ಯನಿರ್ವಹಿಸಿದೆ ಎಂದು ಅದು ಹೇಳಿದೆ.
ರಾಜ್ಯಪಾಲರು ಗೌಮವಾನ್ವಿತ ವ್ಯಕ್ತಿ. ತಮ್ಮ ಸ್ಥಾನದ ಘನತೆ ಕಾಪಾಡಿಕೊಳ್ಳುವುದು ಅವರ ಜವಾಬ್ದಾರಿ. ಬಿಜೆಪಿಯ ತಾಳಕ್ಕೆ ತಕ್ಕಂತೆ ಕುಣಿಯಲು ಅವರನ್ನು ಒತ್ತಾಯಿಸಲಾಗುತ್ತಿದೆ ಎಂದು ಸಂಪಾದಕೀಯ ತಿಳಿಸಿದೆ.
ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು
ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189
ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ | |
ಟೆಲಿಗ್ರಾಮ್ ಚಾನೆಲ್ ಸೇರಿ | |
ಫೇಸ್ ಬುಕ್ ಫಾಲೋ ಮಾಡಿ | |
ಗೂಗಲ್ ನ್ಯೂಸ್ ನಲ್ಲಿ ಸೇರಿ | |
ಟ್ವಿಟರ್ ನಲ್ಲಿ ಫಾಲೋ ಮಾಡಿ |
ನಿಮ್ಮ ಕಾಮೆಂಟ್ ಬರೆಯಿರಿ