ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ (ಪೋಕ್ಸೊ) ಕಾಯ್ದೆಯಡಿ ಲೈಂಗಿಕ ದೌರ್ಜನ್ಯ ಪ್ರಕರಣಗಳ ಕುರಿತು ವಿವಾದಾತ್ಮಕ ತೀರ್ಪು ನೀಡಿದ ನ್ಯಾಯಮೂರ್ತಿ ಪುಷ್ಪಾ ಗಣದೇವಾಲಾ ಬಾಂಬೆ ಉಚ್ಚ ನ್ಯಾಯಾಲಯದ ಹೆಚ್ಚುವರಿ ನ್ಯಾಯಾಧೀಶರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ನಾಗ್ಪುರ ನ್ಯಾಯಪೀಠದ ಹಿರಿಯ ನ್ಯಾಯಮೂರ್ತಿ ನಿತಿನ್ ಜಮರ್ ಪ್ರಮಾಣ ವಚನ ಬೋಧಿಸಿದರು. ಈ ಹಿಂದೆ, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಗಣದೇವಾಲಾ ಅವರನ್ನು ಹೈಕೋರ್ಟ್‌ನ ಖಾಯಂ ನ್ಯಾಯಾಧೀಶರನ್ನಾಗಿ ನೇಮಿಸುವ ಶಿಫಾರಸನ್ನು ಹಿಂತೆಗೆದುಕೊಂಡಿತ್ತು. ಜನವರಿ 19 ರಂದು, ನ್ಯಾಯಾಧೀಶರು ಲೈಂಗಿಕ ದೌರ್ಜನ್ಯ ಆರೋಪ ಹೊಂದಿದ ಖುಲಾಸೆಗೊಳಿಸಿದ್ದರು. ನ್ಯಾಯಮೂರ್ತಿಗಳು ಕಠಿಣ ಪುರಾವೆ ಮತ್ತು ಗಂಭೀರ ಆರೋಪಗಳ ಅಗತ್ಯವಿದೆ ಎಂದು ಹೇಳಿ ಶಿಕ್ಷೆ ಪ್ರಮಾಣವನ್ನು ಕಡಿಮೆ ಮಾಡಿದ್ದರು. ಆದರೆ ಜನವರಿ 27 ರಂದು ಸರ್ವೋಚ್ಚ ನ್ಯಾಯಾಲಯ ಈ ಆದೇಶವನ್ನು ತಡೆಹಿಡಿದಿದೆ.
ನಿಮ್ಮ ಕಾಮೆಂಟ್ ಬರೆಯಿರಿ