ವೀರಶೈವ-ಲಿಂಗಾಯತರನ್ನು ಒಬಿಸಿ ಸೇರ್ಪಡೆಗೆ ಒತ್ತಾಯ

ಬೆಂಗಳೂರು:ನಗರದಲ್ಲಿ ನಿವಾರ ಸಭೆ ಸೇರಿದ್ದ ವೀರಶೈವ- ಲಿಂಗಾಯಿತ ಸಮುದಾಯ ನೂರಾರು ಸ್ವಾಮೀಜಿಗಳು ವೀರಶೈವ ಲಿಂಗಾಯಿತ ಸಮುದಾಯವನ್ನು ಒಬಿಸಿ ಪಟ್ಟಿಗೆ ಸೇರಿಸುವಂತೆ ಕೇಂದ್ರಕ್ಕೆ ಪ್ರಬಲ ಹಕ್ಕೊತ್ತಾಯ ಮಂಡಿಸಿದರು.
ವೀರಶೈವ ಲಿಂಗಾಯತ ಸಮುದಾಯದ ಎಲ್ಲ ಒಳಪಂಗಡಗಳ ಒಬಿಸಿಗೆ ಸೇರಿಸುವ ಮನವಿ ಪತ್ರವನ್ನು ಮುಖ್ಯಮಂತ್ರಿಗಳಿಗೆ ತಲುಪಿಸುವಂತೆ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಪರಮಶಿವಯ್ಯ ಅವರಿಗೆ ಸ್ವಾಮೀಜಿಗಳು ಪತ್ರದ ಪ್ರತಿಯನ್ನು ಸಭೆಯಲ್ಲಿ ನೀಡಿದರು.
ಈ ಸಭೆಯ ನೇತೃತ್ವ ವಹಿಸಿದ್ದ ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಉಜ್ಜಯಿನಿಯ ಜಗದ್ಗುರು ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಬಾಲೆಹೊಸೂರು ದಿಂಗಾಲೇಶ್ವರ ಮಠದ ದಿಂಗಾಲೇಶ್ವರಸ್ವಾಮೀಜಿ, ಸಿಂಧಗಿ ಸಾರಂಗ ಮಠದ ಡಾ. ಪ್ರಭು ಸಾರಂಗ ಶಿವಾಚಾರ್ಯ ಸ್ವಾಮೀಜಿ, ಸರ್ಪಭೂಷಣ ಮಠದ ಮಲ್ಲಿಕಾರ್ಜುನದೇವರು, ವಿಭೂತಿಪುರಮಠದ ಮಹಂತಲಿಂಗ ಶಿವಾಚಾರ್ಯಸ್ವಾಮೀಜಿ, ಶಿವಗಂಗೆಯ ಮಲೇಶಾಂತಮುನಿಶಿವಾಚಾರ್ಯ ಸ್ವಾಮೀಜಿಗಳು ಸೇರಿದಂತೆ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಸೇರಿದಂತೆ ಎಲ್ಲ ಭಾಗದ ವೀರಶೈವ ಲಿಂಗಾಯತ ಮಠಾಧೀಪತಿಗಳು ಈ ಸಭೆಯಲ್ಲಿ ಪಾಲ್ಗೊಂಡು ಒಬಿಸಿ ಹಕ್ಕೊತ್ತಾಯದ ಧ್ವನಿಯಾದರು.
ವೀರಶೈವ ಲಿಂಗಾಯತ ಸಮುದಾಯವನ್ನು ಒಬಿಸಿಗೆ ಸೇರಿಸಬೇಕು ಎಂಬ ಬೇಡಿಕೆ ಹಲವು ದಶಕಗಳದ್ದು. ಈಗಲಾದರೂ ಈ ಬೇಡಿಕೆ ಈಡೇರಿಸಬೇಕು. ಸಾಂಕೇತಿಕವಾಗಿ ಇಂದು ಕೆಲ ಸ್ವಾಮೀಜಿಗಳಷ್ಟೇ ಸಭೆ ಸೇರಿ ಹಕ್ಕೋತ್ತಾಯ ಮಂಡಿಸಿದ್ದೇವೆ ಎಂದು ಸಭೆಯಲ್ಲಿ ಮಾತನಾಡಿದ ಹರಚರಗುರುಮೂರ್ತಿಗಳು ನೀಡಿದರು.
ಈ ಸಭೆಗೆ ವೀರಶೈವ ಲಿಂಗಾಯತ ಸಮುದಾಯದ ಎಲ್ಲ ಸ್ವಾಮೀಜಿಗಳು ಬೆಂಬಲ ನೀಡಿದ್ದಾರೆ. ಒಬಿಸಿ ಸೇರ್ಪಡೆ ವಿಚಾರದಲ್ಲಿ ಎಲ್ಲ ಸ್ವಾಮೀಜಿಗಳು ಒಂದಾಗಿದ್ದೇವೆ ಎಂದು ಸಭೆಯಲ್ಲಿ ಆರಂಭಿಕವಾಗಿ ಮಾತನಾಡಿದ ವಿಭೂತಿಪುರ ಮಠದ ಮಹಂತಲಿಂಗಶಿವಾಚಾರ್ಯಸ್ವಾಮೀಜಿ ಹೇಳಿದರು.
ಇಲ್ಲಿಯವರೆಗೂ ಜಾತಿ ಆಧಾರಿತ, ಸಮುದಾಯ ಆಧಾರಿತ ಹೋರಾಟಕ್ಕೆ ಮುಖಂಡರು ಮನವಿ ಮಾಡಿದ್ದಾರೆ. ಅದರಂತೆ ಒಬಿಸಿ ಪಟ್ಟಿಗೆ ವೀರಶೈವ ಲಿಂಗಾಯತರನ್ನು ಸೇರಿಸಬೇಕು ಎಂಬ ಬೇಡಿಕೆಯನ್ನು ಈಡೇರಿಸುವಂತೆ ಆಗ್ರಹಿಸಿ ಇಂದು ಗುರುವಿರಕ್ತ ಪರಂಪರೆಯ ಸ್ವಾಮೀಜಿಗಳ ಸಭೆ ನಡೆದಿದೆ. ಮುಖ್ಯಮಂತ್ರಿಗಳ ಮನೆಗೆ ತೆರಳಿ ಮನವಿ ಸಲ್ಲಿಸಬೇಕು ಎಂದು ಈ ಹಿಂದೆ ನಿರ್ಧರಿಸಲಾಗಿತ್ತು. ಆದರೆ ಎಲ್ಲ ಸ್ವಾಮೀಜಿಗಳು ಹೋಗಿ ಮನವಿ ಮಾಡುವುದು ಸರಿಯಲ್ಲ. ಹಾಗಾಗಿ ಲಿಂಗಾಯತ ವೀರಶೈವರ ಹಿತ ಕಾಪಾಡುವ ಉದ್ದೇಶದಿಂದ ಸ್ಥಾನಪನೆಯಾಗಿರವ ವೀರಶೈವ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿರುವ ಪರಮಶಿವಯ್ಯ ಅವರಿಗೆ ನೀಡಿ ಅದನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಲುವಂತೆ ಗುರುವಿರಕ್ತ ಸ್ವಾಮೀಜಿಗಳು ಅಪ್ಪಣೆ ಮಾಡಿದ್ದಾರೆ ಎಂದರು.
ದಿಂಗಾಲೇಶ್ವರಶ್ರೀಗಳ ಹೇಳಿಕೆ:
ಸಮಸ್ತ ವೀರಶೈವ ಲಿಂಗಾಯತರನ್ನು ಒಬಿಸಿಗೆ ಸೇರ್ಪಡೆ ಮಾಡುವವರೆಗೂ ನಾವು ಹೋರಾಟ ನಡೆಸಬೇಕಿದೆ. ಈ ಹಿಂದಿನಿಂದ ಯಾವುದೇ ಪರಿಸ್ಥಿತಿಯಲ್ಲೂ ಸಮುದಾಯ ಒಡೆಯದಂತೆ ನೋಡಿಕೊಂಡಿದ್ದೇವೆ. ಈಗ ಸಮುದಾಯಕ್ಕೆ ಏನು ಬೇಕು ಅದನ್ನು ಕೊಡಬೇಕಿದೆ. ಮುಖ್ಯಮಂತ್ರಿ ಯಡಿಯೂರಪ್ಪನವರು ತುರ್ತು ಸಂಪುಟ ಸಭೆ ಕರೆದು ವೀರಶೈವ ಲಿಂಗಾಯತರನ್ನು ಒಬಿಸಿಗೆ ಸೇರ್ಪಡೆ ಮಾಡಲು ನಿರ್ಧಾರ ಮಾಡಲು ಬಯಸಿದ್ದರು. ಆದರೆ ಹಿಂದೆ ಸರಿದರು. ಅವರು ಅಂದು ನಿರ್ಧಾರ ಕೈಗೊಂಡಿದ್ದರೆ ಪಂಚಮಸಾಲಿ ಜಗದ್ಗುರುಗಳು ಕಾಲಿಗೆ ಬೊಬ್ಬೆ ಬರುವ ಹಾಗೆ ಪಾದಯಾತ್ರೆ
ಒಡೆಯುವ ಹುನ್ನಾರ
.ಪಂಚಮಸಾಲಿಗಳು ನಮ್ಮವರೆ. ಅವರೇನು ಬೇರೆಯವರಲ್ಲ. ಎಲ್ಲರಿಗೂ ಅನುಕೂಲವಾಗುವ ಆಗುವ ರೀತಿಯಲ್ಲಿ ಸರ್ಕಾರ ತೀರ್ಮಾನ ಮಾಡಬೇಕು ಎಂದರು.
ಒಬಿಸಿ ಹೋರಾಟದ ಸ್ವಾಮೀಜಿಗಳ ಸಭೆಯಲ್ಲಿ ಸಿದ್ಧಗಂಗಾ ಶ್ರೀಗಳಾದ ಸಿದ್ಧಲಿಂಗಸ್ವಾಮೀಜಿಗಳು ಭಾಗಿಯಾಗಿರಲಿಲ್ಲ.
ಸಿದ್ಧಗಂಗಾ ಶ್ರೀಗಳ ನೇತೃತ್ವದಲ್ಲಿ ಸಭೆ ನಡೆಸುವ ತೀರ್ಮಾನ ಮಾಡಲಾಗಿತ್ತು. ಆದರೆ ಶ್ರೀಗಳಿಗೆ ಜಾತ್ರಾ ಕಾರ್ಯದ ಒತ್ತಡ ಇದ್ದ ಕಾರಣ ಸಭೆಯಲ್ಲಿ ಭಾಗಿಯಾಗಲು ಸಾಧ್ಯವಾಗಿರಲಿಲ್ಲ ಸಭೆಗೆ ಬೆಂಬಲ ಸೂಚಿಸಿ ಅವರು ಪತ್ರವನ್ನು ಕಳುಹಿಸಿದ್ದರು.

ಪ್ರಮುಖ ಸುದ್ದಿ :-   ಜೂನ್ 21ರಿಂದ 10 ದಿನ ಈ ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯುವ ಮುನ್ಸೂಚನೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement