ಕೆನಡಾಕ್ಕೆ ಭಾರತದಿಂದ ೫ ಲಕ್ಷ ಕೊರೊನಾ ಲಸಿಕೆ ಪೂರೈಕೆ

ನವದೆಹಲಿ: ಪ್ರಧಾನಿ ಜಸ್ಟಿನ್‌ ಟ್ರುಡೊ ಅವರ ಕೋರಿಕೆ ಮೇರೆಗೆ ಫೆಬ್ರವರಿಯಲ್ಲಿ ೫ ಲಕ್ಷ ಕೊರೊನಾ ಲಸಿಕೆಗಳನ್ನು ಕೆನಡಾಕ್ಕೆ ಪೂರೈಸಲು ಭಾರತ ಒಪ್ಪಿಕೊಂಡಿದೆ.
ಕೆನಡಾ ಮಾತ್ರವಲ್ಲದೇ ಕೋವಿಡ್ ಲಸಿಕೆಯನ್ನು ಬಾಂಗ್ಲಾದೇಶ, ನೇಪಾಳ, ಭೂತಾನ್ ಮತ್ತು ಇತರ ನೆರೆಯ ರಾಷ್ಟ್ರಗಳಿಗೆ ಪೂರೈಸಲು ಮೋದಿ ಸರ್ಕಾರ ನಿರ್ಧರಿಸಿದೆ. ಸರಬರಾಜು ಕೋವಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಗಳ ಮಿಶ್ರಣವಾಗಿರುತ್ತದೆ.
ಫೆಬ್ರವರಿ 10 ರಂದು ಪಿಎಂ ಟ್ರುಡೊ ಪಿಎಂ ಮೋದಿಯವರನ್ನು ಕೋರಿದ ನಂತರ ಕೆನಡಾಕ್ಕೆ ಲಸಿಕೆ ಸರಬರಾಜಿಗೆ ಒಪ್ಪಿಗೆ ಸೂಚಿಸಲಾಯಿತು. ಕೆನಡಾದ ಪ್ರಧಾನಿ ಪಿಎಂ ಮೋದಿಯವರೊಂದಿಗೆ ಲಸಿಕೆ ಸರಬರಾಜು ಕುರಿತು ಕೋರುವುದರೊಂದಿಗೆ ಟೊರಂಟೊ ಮತ್ತು ವ್ಯಾಂಕೋವರ್‌ನಲ್ಲಿ ಪ್ರತ್ಯೇಕತಾವಾದಿಗಳನ್ನು ಗುರಿಯಾಗಿಸಿಕೊಂಡಿದ್ದ ಭಾರತೀಯ ರಾಜತಾಂತ್ರಿಕರ ಸುರಕ್ಷತೆ ಬಗ್ಗೆ ಕೆನಡಾ ಪ್ರಧಾನಿ ಭವರಸೆ ನೀಡಿದರು. ಕೆನಡಾದಲ್ಲಿರುವ ಪಂಜಾಬಿಗಳಲ್ಲಿ ಹಲವರು ಪ್ರತ್ಯೇಕ ಖಲಿಸ್ಥಾನಕ್ಕಾಗಿ ಆಗ್ರಹಿಸುತ್ತಿದ್ದಾರೆ.

ಕ್ಷಣ ಕ್ಷಣದ ಸುದ್ದಿಗಳು ಮತ್ತು ಮಾಹಿತಿಗಾಗಿ
ಟೆಲಿಗ್ರಾಮ್ ಚಾನೆಲ್ ಸೇರಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

advertisement

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

/ 5. ಒಟ್ಟು ವೋಟುಗಳು

ಓದಿರಿ :-   ಭಾರತದ 14ನೇ ಉಪರಾಷ್ಟ್ರಪತಿಯಾಗಿ ಜಗದೀಪ್ ಧನಕರ್ ಪ್ರಮಾಣವಚನ

ನಿಮ್ಮ ಕಾಮೆಂಟ್ ಬರೆಯಿರಿ

advertisement