ಚೆನ್ನೈ: ಸ್ವದೇಶಿ ನಿರ್ಮಿತ ಅರ್ಜುನ ಯುದ್ಧ ಟ್ಯಾಂಕರ್ (ಎಂಕೆ-೧ಎ) ಅನ್ನು ಪ್ರಧಾನಿ ನರೇಂದ್ರ ಮೋದಿ ಭಾರತೀಯ ಸೇನೆಗೆ ಹಸ್ತಾಂತರಿಸಿದರು.
ಚೆನ್ನೈನಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಿ ಮೋದಿ ಅವರು ಸ್ವದೇಶಿ ನಿರ್ಮಿತ ಅರ್ಜುನ ಯುದ್ಧ ಟ್ಯಾಂಕರ್‌ನ ಭೂಸೇನೆಯ ಮುಖ್ಯಸ್ಥ ಜರ್ನಲ್ ಎಂ.ಎಂ ನರ್‌ವಾಣೆ ಅವರಿಗೆ ನೀಡಿದರು.
ಈ ಅರ್ಜುನ ಯುದ್ಧ ಟ್ಯಾಂಕರ್‌ನ್ನು ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿದ್ದು, ಸಿವಿಆರ್‌ಡಿಇ, ಡಿಆರ್‌ಡಿಓ ಸೇರಿದಂತೆ ೧೫ ಸಂಸ್ಥೆಗಳು ಈ ಟ್ಯಾಂಕ್ ಅಭಿವೃದ್ಧಿಯಲ್ಲಿ ಕೆಲಸ ಮಾಡಿವೆ.ಈ ಅರ್ಜುನ ಯುದ್ಧ ಟ್ಯಾಂಕರ್‌ನ್ನು ಭಾರತ ಗಡಿಯಲ್ಲಿ ಭದ್ರತೆಗಾಗಿ ನಿಯೋಜಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಇದೇ ಸಂದರ್ಭದಲ್ಲಿ ಹೇಳಿದರು.
ತಮಿಳುನಾಡಿನ ರಾಜ್ಯಪಾಲ ಬನ್ವಾರ್‌ಲಾಲ್ ಪುರೋಹಿತ್, ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ, ಉಪಮುಖ್ಯಮಂತ್ರಿ ಪನ್ನೀರ್‌ಸೆಲ್ವಂ ಮೊದಲಾದವರು ಇದ್ದರು.
ನಿಮ್ಮ ಕಾಮೆಂಟ್ ಬರೆಯಿರಿ