ʼಯುವಿʼ ವಿರುದ್ಧ ಜಾತಿನಿಂದನೆ ಪ್ರಕರಣ ದಾಖಲು

ದಲಿತರ ವಿರುದ್ಧ ಜಾತಿ ನಿಂದನೆ ಮಾಡಿದ ಕ್ರಿಕೆಟಿಗ ಯುವರಾಜ್‌ ಸಿಂಗ್‌ ವಿರುದ್ಧ ಹರಿಯಾಣ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ.
ಕಳೆದ ವರ್ಷ ಜೂನ್‌ನಲ್ಲಿ ಹನ್ಸಿ ಮೂಲದ ನ್ಯಾಯವಾದಿ ರಜತ್‌ ಕಲ್ಸನ್‌ ಹಿಸ್ಸಾರ್‌ ಜಿಲ್ಲೆಯ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಸಾಮಾಜಿಕ ಜಾಲತಾಣ ಆಯೋಜಿಸಿದ ಕಾರ್ಯಕ್ರಮವೊಂದರಲ್ಲಿ ಇನ್ನೊಬ್ಬ ಆಟಗಾರನನ್ನು ಉಲ್ಲೇಖಿಸುವಾಗ ಈ ಹೇಳಿಕೆ ನೀಡಿದ್ದರು ಎಂದು ಕಲ್ಸನ್‌ ಆರೋಪಿಸಿದ್ದರು.
ಲಕ್ಷಾಂತರ ಜನರು ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ನೋಡಿರುವುದರಿಂದ ಯುವರಾಜ ಸಿಂಗ್‌ ಹೇಳಿಕೆಯಿಂದ ದಲಿತರ ಮನಸಿಗೆ ನೋವಾಗಿದೆ ಎಂದು ದೂರಿದ್ದಲ್ಲದೇ ಯುವರಾಜ್‌ ಸಿಂಗ್‌ನನ್ನು ಬಂಧಿಸುವಂತೆ ಕಲ್ಸನ್‌ ಒತ್ತಾಯಿಸಿದ್ದರು.

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಖಲಿಸ್ತಾನಿ ಭಯೋತ್ಪಾದಕ ನಿಜ್ಜರ್ ಸ್ಮರಣಾರ್ಥ ಕೆನಡಾ ಸಂಸತ್ತಿನಲ್ಲಿ ಮೌನಾಚರಣೆ ; 'ಕನಿಷ್ಕ ವಿಮಾನ ಸ್ಫೋಟʼ ಘಟನೆ ಸ್ಮರಣೆ ಮೂಲಕ ಭಾರತದ ಪ್ರತ್ಯುತ್ತರ...!

ನಿಮ್ಮ ಕಾಮೆಂಟ್ ಬರೆಯಿರಿ

advertisement