ಉತ್ತರಾಖಂಡ ಪ್ರವಾಹ: ಮೃತ ಸಂಖ್ಯೆ ೫೩ಕ್ಕೆ ಏರಿಕೆ

ಉತ್ತರಾಖಂಡದಲ್ಲಿ ಹಿಮ ಬಂಡೆ ಕುಸಿದು ಉಂಟಾದ ಪ್ರವಾಹ ದುರ್ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ ೫೩ಕ್ಕೆ ಏರಿಕೆಯಾಗಿದೆ.
ಸೋಮವಾರ ಅವಶೇಷಗಳ ಅಡಿಯಿಂದ ಮೂರು ಶವಗಳನ್ನುಹೊರ ತೆಗೆಯಲಾಗಿದೆ. ಚಮೋಲಿ ಜಿಲ್ಲೆಯ ಆದಿತಿ ಸುರಂಗ ಹಾಗೂ ತಪೋವನ-ವಿಷ್ಣುಗಡ ಪ್ರದೇಶದಿಂದ ಶವಗಳನ್ನು ಹೊರತೆಗೆಯಲಾಗಿದೆ ಎಂದು ಜಿಲ್ಲಾಧಿಕಾರಿ ಸ್ವಾತಿ ಬದೋರಿಯಾ ತಿಳಿಸಿದ್ದಾರೆ.
ಫೆ.೭ರಂದು ಹಿಮ ಬಂಡೆ ಕುಸಿದು ಪ್ರವಾಹ ಉಂಟಾಗಿದ್ದು ಇದರಿಂದ ೧೫೧ ಜನರು ನಾಪತ್ತೆಯಾಗಿದ್ದಾರೆ ಎಂದು ಅಂದಾಜಿಸಲಾಗಿದೆ. ಪ್ರವಾಹದಲ್ಲಿ ಸಿಲುಕಿರುವ ಕಾರ್ಮಿಕರು ಬದುಕಿರುವ ಸಾಧ್ಯತೆ ಕ್ಷೀಣಿಸಿದೆ. ಆದರೂ ಕಾರ್ಯಾಚರಣೆ ಮುಂದುವರೆಸಲಾಗಿದೆ ಎಂದು ಬದೋರಿಯಾ ತಿಳಿಸಿದರು.

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಅಬಕಾರಿ ನೀತಿ ಹಗರಣ: ದೆಹಲಿ ಸಿಎಂ ಅರವಿಂದ ಕೇಜ್ರಿವಾಲಗೆ ಜಾಮೀನು

ನಿಮ್ಮ ಕಾಮೆಂಟ್ ಬರೆಯಿರಿ

advertisement