ʼಯುವಿʼ ವಿರುದ್ಧ ಜಾತಿನಿಂದನೆ ಪ್ರಕರಣ ದಾಖಲು

ದಲಿತರ ವಿರುದ್ಧ ಜಾತಿ ನಿಂದನೆ ಮಾಡಿದ ಕ್ರಿಕೆಟಿಗ ಯುವರಾಜ್‌ ಸಿಂಗ್‌ ವಿರುದ್ಧ ಹರಿಯಾಣ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ.
ಕಳೆದ ವರ್ಷ ಜೂನ್‌ನಲ್ಲಿ ಹನ್ಸಿ ಮೂಲದ ನ್ಯಾಯವಾದಿ ರಜತ್‌ ಕಲ್ಸನ್‌ ಹಿಸ್ಸಾರ್‌ ಜಿಲ್ಲೆಯ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಸಾಮಾಜಿಕ ಜಾಲತಾಣ ಆಯೋಜಿಸಿದ ಕಾರ್ಯಕ್ರಮವೊಂದರಲ್ಲಿ ಇನ್ನೊಬ್ಬ ಆಟಗಾರನನ್ನು ಉಲ್ಲೇಖಿಸುವಾಗ ಈ ಹೇಳಿಕೆ ನೀಡಿದ್ದರು ಎಂದು ಕಲ್ಸನ್‌ ಆರೋಪಿಸಿದ್ದರು.
ಲಕ್ಷಾಂತರ ಜನರು ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ನೋಡಿರುವುದರಿಂದ ಯುವರಾಜ ಸಿಂಗ್‌ ಹೇಳಿಕೆಯಿಂದ ದಲಿತರ ಮನಸಿಗೆ ನೋವಾಗಿದೆ ಎಂದು ದೂರಿದ್ದಲ್ಲದೇ ಯುವರಾಜ್‌ ಸಿಂಗ್‌ನನ್ನು ಬಂಧಿಸುವಂತೆ ಕಲ್ಸನ್‌ ಒತ್ತಾಯಿಸಿದ್ದರು.

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಶಿರಸಿ: ಕಸ್ತೂರಿರಂಗನ್ ವರದಿಯಿಂದ ಉತ್ತರ ಕನ್ನಡ ಜಿಲ್ಲೆಯ 567 ಹಳ್ಳಿಗಳನ್ನು ಕೈಬಿಡಲು ಒತ್ತಾಯಿಸಿ ಸಹಸ್ರಾರು ಆಕ್ಷೇಪಣಾ ಪತ್ರ ಸಲ್ಲಿಕೆ

ನಿಮ್ಮ ಕಾಮೆಂಟ್ ಬರೆಯಿರಿ

advertisement