ಹಿಂದಿನ ಸರಕಾರಗಳು ಯೋಧರನ್ನು, ನಾಯಕರನ್ನು ಕಡೆಗಣಿಸಿದ್ದವು: ಪ್ರಧಾನಿ ಮೋದಿ

ಹಿಂದಿನ ಸರಕಾರಗಳು ಮಾಡಿದ ತಪ್ಪನ್ನು ಸರಿಪಡಿಸಲು ಮುಂದಾಗಿರುವ ನಮ್ಮ ಸರಕಾರ ಅರ್ಹ ಯೋಧರು ಹಾಗೂ ನಾಯಕರಿಗೆ ಗೌರವ ನೀಡುವ ಕಾರ್ಯ ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಅವರು ಉತ್ತರ ಪ್ರದೇಶದ ಬಹ್ರೇಚ್‌ನಲ್ಲಿ ವೀರ ಯೋಧ ಸೋಹೆಲ್ದೇವ್‌ ಅವರ ಮೂರ್ತಿ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಹಿಂದಿನ ಸರಕಾರಗಳು ಅರ್ಹ ನಾಯಕರಾದ ನೇತಾಜಿ ಸುಭಾಷ್ ಚಂದ್ರ ಭೋಸ್, ಸರ್ದಾರ್ ವಲ್ಲಭಭಾಯಿ ಪಟೇಲ್ ಮತ್ತು ಬಿ. ಆರ್. ಅಂಬೇಡ್ಕರ್ ಅವರನ್ನು ಕಡೆಗಣಿಸದ್ದವು ಎಂದು ಆರೋಪಿಸಿದರು. ಅರ್ಹ ನಾಯಕರಿಗೆ ಅರ್ಹವಾದ ಹೆಮ್ಮೆಯ ಸ್ಥಾನವನ್ನು ನೀಡದಿರುವುದು ದುರದೃಷ್ಟಕರ ಎಂದು ಮೋದಿ ಹೇಳಿದರು.
ಯೋಧ ರಾಜ ಸುಹೆಲ್ದೇವ್ ಅವರ 4.20 ಮೀಟರ್ ಎತ್ತರದ ಕುದುರೆ ಸವಾರಿ ಪ್ರತಿಮೆಯ ನಿರ್ಮಾಣದೊಂದಿಗೆ ಕೆಫೆಟೇರಿಯಾ, ಅತಿಥಿ ಗೃಹ ಮತ್ತು ಮಕ್ಕಳ ಉದ್ಯಾನವನ ಸೇರಿದಂತೆ ವಿವಿಧ ಪ್ರವಾಸಿ ಸೌಲಭ್ಯಗಳ ಅಭಿವೃದ್ಧಿ ಮಾಡುವ ಉದ್ದೇಶವಿದೆ. ಅಲ್ಲದೇ ಇದೇ ಸಂದರ್ಭದಲ್ಲಿ ಬಹ್ರೇಚ್‌ನಲ್ಲಿ ಸುಹೆಲ್ದೇವ್ ಅವರ ಹೆಸರಿನ ವೈದ್ಯಕೀಯ ಕಾಲೇಜನ್ನು ಮೋದಿ ಉದ್ಘಾಟಿಸಿದರು.
ಹಿಂದೆ ಬಹ್ರೇಚ್‌ನ ಚಿಟ್ಟೋರಾ ಸರೋವರದ ದಂಡೆಯಲ್ಲಿ ನಡೆದ ಯುದ್ಧದಲ್ಲಿ ರಾಜ್‌ಭರ್ ಸಮುದಾಯದ ಐಕಾನ್ ಆಗಿದ್ದ ಕಿಂಗ್ ಸುಹೆಲ್ದೇವ್ ಘಜ್ನವಿಡ್ ಜನರಲ್ ಘಾಜಿ ಸೈಯ್ಯದ್ ಸಲಾರ್ ಮಸೂದ್ ಅವರನ್ನು ಸೋಲಿಸಿ ಕೊಂದಿದ್ದ.
2019 ರ ಲೋಕಸಭಾ ಚುನಾವಣೆಗೆ ಮುನ್ನ, ಪ್ರಧಾನಿ ಸುಹೇಲ್ದೇವ್ ಅವರ ನೆನಪಿಗಾಗಿ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದ್ದರು ಮತ್ತು ಪೂರ್ವಾಂಚಲ್ (ಯುಪಿ) ಯ ಗಾಜಿಪುರ ಮತ್ತು ದೆಹಲಿಯ ಆನಂದ್ ವಿಹಾರ್ ನಡುವೆ ವಾರಕ್ಕೆ ಮೂರು ಬಾರಿ ಚಲಿಸುವ ಸೂಪರ್ ಫಾಸ್ಟ್ ರೈಲು ‘ಸುಹೆಲ್ದೇವ್ ಎಕ್ಸ್‌ಪ್ರೆಸ್’ ರೈಲಿಗೆ ಹಸಿರು ನಿಶಾನೆ ತೋರಿದ್ದರು.

ಪ್ರಮುಖ ಸುದ್ದಿ :-   2 ಕ್ಷೇತ್ರಗಳಲ್ಲಿ ಒಂದೇ ಪಕ್ಷದ ತಲಾ ಇಬ್ಬರು ಅಭ್ಯರ್ಥಿಗಳಿಂದ ನಾಮಪತ್ರ ;ತಾವೇ ಅಧಿಕೃತ ಅಭ್ಯರ್ಥಿಗಳೆಂದು ಹಕ್ಕು ಮಂಡನೆ...!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement