ಆನ್‌ಲೈನ್ ಜೂಜು ನಿಯಂತ್ರಣದಲ್ಲಿ ಕರ್ನಾಟಕ ರಾಜ್ಯ ಸಚಿವ ಸಂಪುಟ ತೆಗೆದುಕೊಳ್ಳುವ ನಿರ್ಧಾರವನ್ನು ದಾಖಲಿಸುವಂತೆ ರಾಜ್ಯ ಸರಕಾರಕ್ಕೆ ಉಚ್ಚ ನ್ಯಾಯಾಲಯ ನಿರ್ದೇಶನ ನೀಡಿದೆ.
ಆನ್‌ಲೈನ್ ಬೆಟ್ಟಿಂಗ್ ವಿಷಯವನ್ನು ಸಂಪುಟದ ಮುಂದೆ ಇಡಲಾಗಿದೆ. ಈ ದಿಸೆಯಲ್ಲಿ ಶೀಘ್ರವೇ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ ಎಂದು ಸರಕಾರದ ಪರ ವಕೀಲರು ನ್ಯಾಯಪೀಠಕ್ಕೆ ತಿಳಿಸಿದ್ದಾರೆ.
ಸೂಕ್ತ ನಿಯಮಾವಳಿ ರೂಪಿಸುವವರೆಗೆ ಆನ್‌ಲೈನ್ ಜೂಜು ರದ್ದುಗೊಳಿಸಬೇಕೆಂದು ಡಿ.ಆರ್.ಶಾರದಾ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆಯಲ್ಲಿ ತಮ್ಮನ್ನೂ ಪ್ರತಿವಾದಿಯಾಗಿ ಪರಿಗಣಿಸಬೇಕೆಂದು ಮುಂಬೈ ಮೂಲದ ಆನ್‌ಲೈನ್ ರಮ್ಮಿ ಫೌಂಡೇಶನ್ ಮಧ್ಯಂತರ ಅರ್ಜಿ ಸಲ್ಲಿಸಿದೆ.
ಆನ್‌ಲೈನ್ ರಮ್ಮಿ ಆಟವನ್ನು ಪ್ರೋತ್ಸಾಹಿಸುವುದು ಫೆಡರೇಶನ್ ಉದ್ದೇಶವಾಗಿದೆ. ಆಟಗಾರರ ಆಸಕ್ತಿಯನ್ನು ರಕ್ಷಿಸುವ ಕೆಲಸವನ್ನು ಫೆಡರೇಶನ್ ಮಾಡುತ್ತಿದೆ ಎಂದು ಟಿಒಆರ್‌ಎಫ್ ಪರ ವಕೀಲ ಮುಕುಲ್ ರೋಹಟಗಿ ತಿಳಿಸಿದರು.
ರಮ್ಮಿ ಒಂದು ಕೌಶಲ ಆಟವೇ ಹೊರತು ಜೂಜಲ್ಲ. ಇದಕ್ಕೆ ಪರವಾನಗಿ ನೀಡಿದರೆ ಶುಲ್ಕದಿಂದಲೇ ಮುಂದಿನ ೫ ವರ್ಷಗಳಲ್ಲಿ ಸರಕಾರ ೧೦೦೦ ಕೋಟಿ ರೂ. ವರಮಾನ ನಿರೀಕ್ಷಿಸಬಹುದು ಎಂದು ವಿವರಿಸಿದರು.
ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು
ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189
ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ | |
ಟೆಲಿಗ್ರಾಮ್ ಚಾನೆಲ್ ಸೇರಿ | |
ಫೇಸ್ ಬುಕ್ ಫಾಲೋ ಮಾಡಿ | |
ಗೂಗಲ್ ನ್ಯೂಸ್ ನಲ್ಲಿ ಸೇರಿ | |
ಟ್ವಿಟರ್ ನಲ್ಲಿ ಫಾಲೋ ಮಾಡಿ |
ನಿಮ್ಮ ಕಾಮೆಂಟ್ ಬರೆಯಿರಿ