ಪಶ್ಚಿಮ ಬಂಗಾಳ: ಬಿಜೆಪಿ ಧ್ವಜ ಹಿಡಿದ ನಟ ಯಶ್‌ ದಾಸಗುಪ್ತಾ

ಪಶ್ಚಿಮ ಬಂಗಾಳದ ಚಿತ್ರನಟ ಯಶ್‌ ದಾಸಗುಪ್ತಾ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ಬಿಜೆಪಿ ಮುಖಂಡರಾದ ಕೈಲಾಶ್‌ ವಿಜಯವರ್ಗಿಯ, ಸ್ವಪನ್‌ ದಾಸಗುಪ್ತ ಸಮ್ಮುಖದಲ್ಲಿ ಕಮಲ ಪಡೆ ಸೇರಿದರು.
35 ವರ್ಷದ ಯಶ್‌, ಬಂದಿನಿ ಮತ್ತು ಅದಾಲತ್ ಸೇರಿದಂತೆ ಹಲವಾರು ಹಿಂದಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಅಲ್ಲದೇ ಅವರು ಗ್ಯಾಂಗ್‌ಸ್ಟರ್, ಫಿದಾ, ಮತ್ತು ಎಸ್‌ಒಎಸ್ ಕೋಲ್ಕತಾ ಸೇರಿದಂತೆ ಹಲವಾರು ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಏಪ್ರಿಲ್‌-ಮೇ ತಿಂಗಳಲ್ಲಿ ನಡೆಯುವ ವಿಧಾನಸಭಾ ಚುನಾವಣೆಗೆ ಮುನ್ನ ದಾಸಗುಪ್ತಾ ಸೇರ್ಪಡೆಯಿಂದ ಕಮಲ ಪಡೆ ಸಂತಸಗೊಂಡಿದೆ. ಚುನಾವಣೆಯಲ್ಲಿ ಟಿಎಂಸಿ ಹಾಗೂ ಬಿಜೆಪಿ ಮಧ್ಯೆ ನೇರಾ ನೇರ ಪೈಪೋಟಿ ನಡೆಯುವ ಸಾಧ್ಯತೆಯಿದೆ ಎಂದು ರಾಜಕೀಯ ವಿಶ್ಲೇಷಕರು ಅಂದಾಜು ಮಾಡಿದ್ದಾರೆ.

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಮಮತಾ ಬ್ಯಾನರ್ಜಿ ಸರ್ಕಾರ ಉರುಳುವವರೆಗೂ ತಲೆ ಕೂದಲು ಬೆಳೆಸೋದಿಲ್ಲ ಎಂದು ತಲೆ ಬೋಳಿಸಿಕೊಂಡಿದ್ದ ಕಾಂಗ್ರೆಸ್‌ ನಾಯಕ ಬಿಜೆಪಿಗೆ...!

ನಿಮ್ಮ ಕಾಮೆಂಟ್ ಬರೆಯಿರಿ

advertisement