ಸ್ವಾತಂತ್ರ್ಯಾನಂತರ ಗಲ್ಲಿಗೇರುತ್ತಿರುವ ಮೊದಲ ಮಹಿಳೆ ಶಬನಮ್‌!

ಮಥುರಾ: ಗೆಳೆಯ ಸಲೀಮ್‌ನೊಂದಿಗೆ ಸೇರಿ ತನ್ನ ಕುಟುಂಬದ ಏಳು ಸದಸ್ಯರನ್ನು ಕೊಲೆಗೈದಿದ್ದ ಶಬನಮ್‌ಗೆ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿರುವುದರಿಂದ ಸ್ವಾತಂತ್ರ್ಯಾನಂತರ ಗಲ್ಲಿಗೇರುತ್ತಿರುವ ಮೊದಲ ಮಹಿಳೆ ಇವರಾಗಿದ್ದಾರೆ.
ಶಬನಮ್‌ಗೆ ಗಲ್ಲು ಶಿಕ್ಷೆ ನೀಡಲು ಮಥುರಾ ಜೈಲಿನಲ್ಲಿ ಸಿದ್ಧತೆ ನಡೆದಿದೆ. ಡೆತ್‌ ವಾರಂಟ್‌ಗಾಗಿ ಕಾಯುತ್ತಿದ್ದೇವೆ ಎಂದು ಜೈಲು ಅಧಿಕಾರಿ ತಿಳಿಸಿದ್ದಾರೆ.
೨೦೦೮ರ ಎಪ್ರಿಲ್‌ ೧೪ರಂದು ಶಬನಮ್‌ ಸಖ ಸಲೀಮ್‌ನೊಂದಿಗೆ ತಂದೆ ಶೌಕತ್‌, ತಾಯಿ ಹಾಶ್ಮಿ, ಸೋದರ ಅನೀಸ್‌, ರಶೀದ್‌, ಸೋದರಿ ರಬಿಯಾ, ಅತ್ತಿಗೆ ಅಂಜುಮ್‌ ಅವರ ಹತ್ಯೆ ಮಾಡಿದ್ದರು.
ಅಮ್ರೋಹಾ ನ್ಯಾಯಾಲಯದಲ್ಲಿ ಎರಡೂವರೆ ವರ್ಷಗಳಿಗೂ ಹೆಚ್ಚು ಕಾಲ ಪ್ರಕರಣದ ವಿಚಾರಣೆ ನಡೆಯಿತು. ಆಕೆಯ ಕುಟುಂಬದ ಏಳು ಮಂದಿಯನ್ನು ಕೊಲೆ ಮಾಡಿದ ಪ್ರಕರಣದಲ್ಲಿ ನ್ಯಾಯಾಲಯವು ಇಬ್ಬರನ್ನೂ ತಪ್ಪಿತಸ್ಥರೆಂದು ಪರಿಗಣಿಸಿ ೨೦೧೦ ಜುಲೈ ೧೫ರಂದು ಮರಣದಂಡನೆ ವಿಧಿಸಿತು.
ಮಥುರಾ ಜೈಲಿನಲ್ಲಿ ಶಬನಮ್ ಮತ್ತು ಸಲೀಮ್‌ನನ್ನು ಗಲ್ಲಿಗೇರಿಸಲು ಮೀರತ್‌ ಮೂಲದ ಹ್ಯಾಂಗ್‌ಮನ್ ಪವನ್ ಜಲ್ಲಾದ್‌ ಸಿದ್ಧರಾಗಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement