ಕೆಂಪು ಕೋಟೆ ಗಲಭೆ: ಮೋಸ್ಟ್‌ ವಾಂಟೆಡ್‌ ಆರೋಪಿ ಬಂಧನ

ನವದೆಹಲಿ: ಗಣರಾಜ್ಯೋತ್ಸವದಂದು ದೆಹಲಿ ಕೆಂಪು ಕೋಟೆಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಮುನಿಂದರ್‌ ಸಿಂಗ್‌ ಬಂಧಿತ ಆರೋಪಿ. ಕೆಂಪುಕೋಟೆಯಲ್ಲಿ ಎರಡೂ ಕೈಗಳಲ್ಲಿ ಖಡ್ಗ ಹಿಡಿದು ಹಿಂಸೆಗೆ ಪ್ರಚೋದಿಸಿದ ಮುನಿಂದರ್‌ ಮೋಸ್ಟ್‌ ವಾಂಟೆಡ್‌ ಆರೋಪಿಯಾಗಿದ್ದ.
ಪ್ರಚೋದನೆಯಿಂದಲೇ ಪೊಲೀಸರ ಮೇಲೆ ಮಾರಣಾಂತಿಕ ದಾಳಿ ನಡೆಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ದೆಹಲಿ ಸ್ವರೂಪನಗರದ ಮನೆಯಿಂದ ಆತನ ಎರಡು ಖಡ್ಗಗಳನ್ನು ವಶಪಡಿಸಿಕೊಳ್ಳಲಾಗಿದೆ.
ವೃತ್ತಿಯಲ್ಲಿ ಎ.ಸಿ ಮೆಕ್ಯಾನಿಕ್‌ ಆಗಿರುವ ಈತ, ತನ್ನ ಮನೆಯ ಸಮೀಪ ಖಡ್ಗ ಬಳಕೆ ತರಬೇತಿಯನ್ನೂ ನೀಡುತ್ತಿದ್ದ. ರೈತರ ಪ್ರತಿಭಟನೆ ವೇಳೆ ನಿಯಮಿತವಾಗಿ ಸಿಂಗು ಗಡಿಗೆ ಭೇಟಿ ನೀಡುತ್ತಿದ್ದ ಈತ, ಅಲ್ಲಿಯ ಭಾಷಣಗಳನ್ನು ಕೇಳಿ ಪ್ರಭಾವಿತನಾಗಿದ್ದ. ಅಲ್ಲದೇ ಹಿಂಸಾಚಾರದಲ್ಲಿ ಭಾಗಿಯಾಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನೆ ಬಳಿಕ ತಲೆ ಮರೆಸಿಕೊಂಡಿದ್ದ ಈತನನ್ನು ಸಿಸಿಟಿವಿ ಹಾಗೂ ವಿಡಿಯೋಗಳ ಆಧಾರದಲ್ಲಿ ಪತ್ತೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ 2024: ಮೊದಲ ಹಂತದ ಮತದಾನಕ್ಕೆ ಮುನ್ನವೇ 2019ರ ಚುನಾವಣೆಗಿಂತ ಹೆಚ್ಚು ಮೌಲ್ಯದ ಸ್ವತ್ತು ವಶಕ್ಕೆ ಪಡೆದ ಚುನಾವಣಾ ಆಯೋಗ; ಎಷ್ಟು ಗೊತ್ತಾ..?

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement