ದೆಹಲಿ ಕೆಂಪುಕೋಟೆ ಹಿಂಸಾಚಾರ: ಮತ್ತಿಬ್ಬರ ಬಂಧನ

ನವ ದೆಹಲಿ: ಗಣರಾಜ್ಯೋತ್ಸವ ದಿನದಂದು ದೆಹಲಿಯ ಕೆಂಪು ಕೋಟೆ ಪ್ರದೇಶದಲ್ಲಿ ನಡೆಸಿದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಮಂಗಳವಾರ ಜಮ್ಮು ನಗರದಲ್ಲಿ ಒಬ್ಬ ರೈತ ಮುಖಂಡ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರು ಜಮ್ಮು ನಗರದ ಛಾತಾ ಪ್ರದೇಶದ ನಿವಾಸಿ ಜಮ್ಮು ಮತ್ತು ಕಾಶ್ಮೀರದ ಯುನೈಟೆಡ್ ಕಿಸಾನ್ ಫ್ರಂಟ್ ಅಧ್ಯಕ್ಷ ಮೊಹಿಂದರ್ ಸಿಂಗ್ (45) ಹಾಗೂ ಗೊಲೆ … Continued

ಕೆಂಪುಕೋಟೆ ಹಿಂಸಾಚಾರ: ಇಬ್ಬರು ಆರೋಪಿಗಳ ಬಂಧನ

ದೆಹಲಿಯ ಕೆಂಪುಕೋಟೆಯಲ್ಲಿ ಗಣರಾಜ್ಯೋತ್ಸವದಂದು ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ರೈತ ನಾಯಕ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ. ಜಮ್ಮು ನಗರದ ನಿವಾಸಿ ಜಮ್ಮು-ಕಾಶ್ಮೀರ ಸಂಯುಕ್ತ ಕಿಸಾನ್‌ ರಂಗದ ಅಧ್ಯಕ್ಷ ಮೊಹಿಂದರ್‌ ಸಿಂಗ್‌ ಹಾಗೂ ಮನದೀಪ್‌ ಸಿಂಗ್‌ ಬಂಧಿತರು. ಬಂಧಿತರಿಬ್ಬರೂ ದೆಹಲಿ ಹಿಂಸಾಚಾರದ ಮುಖ್ಯ ಸೂತ್ರಧಾರರು ಎಂದು ಪೊಲೀಸರು ತಿಳಿಸಿದ್ದಾರೆ. ದೆಹಲಿ ಅಪರಾಧ ವಿಭಾಗದ ಪೊಲೀಸರು ಜಮ್ಮು-ಕಾಶ್ಮೀರ … Continued

ಕೆಂಪು ಕೋಟೆ ಗಲಭೆ: ಮೋಸ್ಟ್‌ ವಾಂಟೆಡ್‌ ಆರೋಪಿ ಬಂಧನ

ನವದೆಹಲಿ: ಗಣರಾಜ್ಯೋತ್ಸವದಂದು ದೆಹಲಿ ಕೆಂಪು ಕೋಟೆಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಮುನಿಂದರ್‌ ಸಿಂಗ್‌ ಬಂಧಿತ ಆರೋಪಿ. ಕೆಂಪುಕೋಟೆಯಲ್ಲಿ ಎರಡೂ ಕೈಗಳಲ್ಲಿ ಖಡ್ಗ ಹಿಡಿದು ಹಿಂಸೆಗೆ ಪ್ರಚೋದಿಸಿದ ಮುನಿಂದರ್‌ ಮೋಸ್ಟ್‌ ವಾಂಟೆಡ್‌ ಆರೋಪಿಯಾಗಿದ್ದ. ಪ್ರಚೋದನೆಯಿಂದಲೇ ಪೊಲೀಸರ ಮೇಲೆ ಮಾರಣಾಂತಿಕ ದಾಳಿ ನಡೆಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ದೆಹಲಿ ಸ್ವರೂಪನಗರದ … Continued

ಕೆಂಪುಕೋಟೆ ಹಿಂಸಾಚಾರ:ಎಫ್ಐಆ‌ರ್‌ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಲು ಕೋರ್ಟ್‌ ಸೂಚನೆ

ದೆಹಲಿ: ದೆಹಲಿಯಲ್ಲಿ ಜನವರಿ ೨೬ರಂದು ನಡೆದ ಹಿಂಸಾಚಾರ ಘಟನೆಗಾಗಿ ಬಂಧಿತ ಆರೋಪಿಗಳು ಪೊಲೀಸ್‌ ಠಾಣೆಗೆ ಅಲೆದಾಡುವುದನ್ನು ತಪ್ಪಿಸಲು ಅಂದಿನ ಎಲ್ಲ ಎಫ್‌ಐಆರ್‌ಗಳನ್ನು ವೆಬ್‌ಸೈಟ್‌ಗೆ ಅಪ್‌ಲೋಡ್‌ ಮಾಡುವಂತೆ ದೆಹಲಿ ನ್ಯಾಯಾಲಯ ಆದೇಶಿಸಿದೆ. ಬಂದಿತರು ಕಚೇರಿಗೆ ಅಲೆದಾಡುವುದನ್ನು ತಪ್ಪಿಸಲು ನಂಗ್ಲೊಯಿ ಪೊಲೀಸ್‌ ಠಾಣೆ ಜನವರಿ ೨೬ರ ಹಿಂಸಾಚಾರದ ಕುರಿತ ಆರೋಪಿಗಳ ಎಫ್‌ಐಆರ್‌ ವೆಬ್‌ಸೈಟ್‌ಗೆ ಅಪ್‌ಲೋಡ್‌ ಮಾಡಬೇಕು. ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ … Continued

ಕೆಂಪುಕೋಟೆ ಹಿಂಸಾಚಾರ: ಜೆಪಿಸಿ ತನಿಖೆಗೆ ಕಾಂಗ್ರೆಸ್‌ ಒತ್ತಾಯ

ನವ ದೆಹಲಿ: ಗಣರಾಜ್ಯೋತ್ಸವದಂದು ರೈತರ ಟ್ರಾಕ್ಟರ್ ಪೆರೇಡ್ ಸಂದರ್ಭದಲ್ಲಿ ಕೆಂಪು ಕೋಟೆಯಲ್ಲಿ ನಡೆದ ಹಿಂಸಾಚಾರದ ಬಗ್ಗೆ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆ ನಡೆಸಬೇಕೆಂದು ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧರಿ ಸೋಮವಾರ ಒತ್ತಾಯಿಸಿದರು. ಹಾಗೂ ಸ್ಮಾರಕವನ್ನು ‘ಅಪವಿತ್ರಗೊಳಿಸಲು’ ಸರ್ಕಾರವು ಸುಸಂಘಟಿತ ಸಂಚು ಮಾಡಿದೆ ಎಂದು ಆರೋಪಿಸಿದರು. ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನೆ ಸಲ್ಲಿಸುವ ಚರ್ಚೆಯಲ್ಲಿ … Continued