ಕೊರೊನಿಲ್ ಆಯುರ್ವೇದ ಔಷಧಿ ವೈಜ್ಞಾನಿಕ ಸಂಶೋಧನಾ ಪ್ರಬಂಧ ಬಿಡುಗಡೆ

ಕೊರೊನಾ ವೈರಸ್ ಕಾಯಿಲೆ (ಕೋವಿಡ್ -19)   ವಿರುದ್ಧದ “ಮೊದಲ ಸಾಕ್ಷ್ಯ ಆಧಾರಿತ ಆಯುರ್ವೇದ ಔಷಧದ ಕುರಿತು ಯೋಗ ಗುರು ರಾಮದೇವ್ ಅವರ ಹರಿದ್ವಾರ ಮೂಲದ ಪತಂಜಲಿ ಸಂಶೋಧನಾ ಸಂಸ್ಥೆ ಶುಕ್ರವಾರ ಸಂಶೋಧನಾ ಪ್ರಬಂಧ ಬಿಡುಗಡೆ ಮಾಡಿದೆ.
ರಾಮದೇವ್ ಅವರ ಪತಂಜಲಿ ಕಳೆದ ವರ್ಷ ಕೋವಿಡ್ -19 ವಿರುದ್ಧ ತನ್ನ ಕೊರೊನಿಲ್  ಔಷಧಿಯನ್ನು ಹೊರತಂದಿದ್ದರು.
ವೈಜ್ಞಾನಿಕ ಸಂಶೋಧನಾ ಪ್ರಬಂಧ ಬಿಡುಗಡೆ ಮಾಡಿದ ರಾಮದೇವ್, ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ)  ಪ್ರಮಾಣೀಕರಣಕ್ಕೆ ಒತ್ತು ನೀಡಲಾಗುವುದು ಮತ್ತು ಈ ಸಂಶೋಧನಾ ಪ್ರಬಂಧವು ಈ ಹಿಂದೆ ಔಷಧದ ವೈಜ್ಞಾನಿಕ ಪ್ರಸ್ತುತತೆ ಪ್ರಶ್ನಿಸಿದವರನ್ನು ತೃಪ್ತಿಪಡಿಸಲಿದೆ ಎಂದರು.
ಈ ಸಂದರ್ಭದಲ್ಲಿ ಕೇಂದ್ರ ಆರೋಗ್ಯ ಸಚಿವ ಹರ್ಷ್ ವರ್ಧನ್ ಮತ್ತು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಉಪಸ್ಥಿತರಿದ್ದರು.
ದೇಶದಲ್ಲಿ 1,56,000ಕ್ಕೂ ಹೆಚ್ಚು ಜೀವಗಳನ್ನು ಬಲಿ ತೆಗೆದುಕೊಂಡ ಮಾರಣಾಂತಿಕ ವೈರಸ್ ಅನ್ನು ಎದುರಿಸುವಲ್ಲಿ ಅದರ ಪರಿಣಾಮಕಾರಿತ್ವವನ್ನು ನಿರ್ಧರಿಸಬಲ್ಲ ವೈಜ್ಞಾನಿಕ ಪುರಾವೆಗಳು ಮತ್ತು ಪ್ರಯೋಗಗಳ ಕೊರತೆಯಿಂದಾಗಿ ಪತಂಜಲಿಯ ಕೊರೊನಿಲ್ ಈ ಹಿಂದೆ ಪರಿಶೀಲನೆಗೆ ಒಳಪಟ್ಟಿತ್ತು. ಕೊರೊನಿಲ್ ಅನ್ನು ಮೊದಲು ಕೊರೊನಾ ವೈರಸ್ ಸೋಂಕಿನ ಪರಿಹಾರವೆಂದು ಪ್ರಚಾರ ಮಾಡಲಾಗಿತ್ತು. ಆದರೆ ನಂತರ ಅದರ ಪ್ರಯೋಗ ದತ್ತಾಂಶ ಮತ್ತು ಸಂಯೋಜನೆಯ ವಿವಾದದ ಮಧ್ಯೆ “ಇಮ್ಯುನಿಟಿ ಬೂಸ್ಟರ್” ಎಂದು ಪರವಾನಗಿ ಪಡೆಯಲಾಯಿತು.
ವೈಜ್ಞಾನಿಕ ಪುರಾವೆಗಳನ್ನು ಒದಗಿಸುವ ಮೂಲಕ ಭಾರತದ ಪ್ರಾಚೀನ ವೈದ್ಯಕೀಯ ವಿಜ್ಞಾನಕ್ಕೆ ಜಾಗತಿಕವಾಗಿ ಮಾನ್ಯತೆ ನೀಡುವುದು ಮತ್ತು ಆರೋಗ್ಯ ರಕ್ಷಣೆಯಲ್ಲಿ ಆತ್ಮನಿರ್ಭರ ಭಾರತ್ ುದ್ದೇಶವನ್ನು ಈಡೇರಿಸುವುದು ಈ ಸಂಸ್ಥೆಯ ಉದ್ದೇಶವಾಗಿದೆ ಎಂದು ಬಅಬಾ ರಾಮದೇವ್‌ ಈ ಸಂದರ್ಭದಲ್ಲಿ ಹೇಳಿದರು.
ಆಧುನಿಕ ಔಷಧವು ದೇಶದಲ್ಲಿ ಅತಿ ಹೆಚ್ಚು ಚೇತರಿಕೆ ದರ ಮತ್ತು ಕಡಿಮೆ ಸಾವಿನ ಪ್ರಮಾಣಕ್ಕೆ ನೆರವಾಗಿದ್ದರೆ, ಆಯುರ್ವೇದ ಔಷಧಿಗಳು ಮತ್ತು ಭಾರತದ ಜನರ ಯೋಗ ಜೀವನಶೈಲಿಗೂ ಈ ಬಗ್ಗೆ ಮನ್ನಣೆ ನೀಡಬೇಕು ಎಂದು ಅವರು ಪ್ರತಿಪಾದಿಸಿದರು.
“ಪತಂಜಲಿ ರಿಸರ್ಚ್ ಇನ್ಸ್ಟಿಟ್ಯೂಟ್ನ ವೈಜ್ಞಾನಿಕ ಸಂಶೋಧನೆ ಮತ್ತು ಮೊದಲ ಸಾಕ್ಷ್ಯ ಆಧಾರಿತ ಕೊರೊನಾ ಔಷಧದ ಯಶಸ್ಸು ವಿಶ್ವದ 158 ದೇಶಗಳಿಗೆ ಪ್ರಯೋಜನ ನೀಡುತ್ತದೆ” ಎಂದು ಕಂಪನಿಯ ಡೈರಿ ಆರ್ಮ್ ಸಹ ಟ್ವೀಟ್ ಮಾಡಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಯುರ್ವೇದದ ಮಹತ್ವವನ್ನು ಎತ್ತಿ ಹಿಡಿಯಲು ಆಧುನಿಕ ವೈಜ್ಞಾನಿಕ ಸಾಧನಗಳನ್ನು ಬಳಸುವ ಅಗತ್ಯವನ್ನು ಕೇಂದ್ರ ಆರೋಗ್ಯ ಸಚಿವರು ಒತ್ತಿ ಹೇಳಿದರು.
ಸರ್ಕಾರವು ಆಯುರ್ವೇದಕ್ಕಾಗಿ ಭಾರತದಲ್ಲಿ ಜಾಗತಿಕ ಕೇಂದ್ರವನ್ನು ಸ್ಥಾಪಿಸಲು ಬಯಸಿದೆ ಎಂದು ಸಚಿವರು ಹೇಳಿದರು.
ಆಯುರ್ವೇದವು ಕೋವಿಡ್ ಪೂರ್ವದಲ್ಲಿ ರಾಷ್ಟ್ರೀಯ ಆರ್ಥಿಕತೆಗೆ 30,000 ಕೋಟಿ ರೂ.ಗಳ ಕೊಡುಗೆ ನೀಡಿದ್ದು, ಶೇ.15- 20 ಬೆಳವಣಿಗೆ ಹೊಂದಿತ್ತು. ಸಾಂಕ್ರಾಮಿಕ ರೋಗವು ಜಗತ್ತನ್ನು ಅಪ್ಪಳಿಸಿದ ನಂತರ ಆಯುರ್ವೇದದ ಆರ್ಥಿಕತೆಯ ಬೆಳವಣಿಗೆಯ ದರವು 50-90ರಷ್ಟು ಹೆಚ್ಚಾಗಿದೆ, ಎಫ್‌ಡಿಐಯಿಂದಲೂ ಹೆಚ್ಚಿನ ಆಸಕ್ತಿ ಇದೆ ಎಂದರು.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ : 1ನೇ ಹಂತದಲ್ಲಿ 62.37%ರಷ್ಟು ಮತದಾನ ; 2019ರ ಮತದಾನದ ಪ್ರಮಾಣಕ್ಕಿಂತ ಕಡಿಮೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement