ದೇಗುಲ ಮಂಡಳಿಯಲ್ಲಿ ಮಹಿಳೆಯರಿಗೆ ಇನ್ನೂ ದೊರಕದ ಸೂಕ್ತ ಪ್ರಾತಿನಿಧ್ಯ

ಕಳೆದ ವರ್ಷ ಒಂದು ಮಹತ್ವದ ಕ್ರಮದಲ್ಲಿ, 45 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ, ಸಪ್ತಶ್ರಂಗ್ ಗಡ್ ಟ್ರಸ್ಟ್ ಮಹಾರಾಷ್ಟ್ರದ ಶ್ರೀ ಸಪ್ತಶ್ರಂಗ್ ನಿವಾಸಿನಿ ದೇವಿ ದೇವಸ್ಥಾನದ ಮಂಡಳಿಯಲ್ಲಿ ಮಹಿಳಾ ಟ್ರಸ್ಟಿಯನ್ನು ನೇಮಿಸಿತು. ಐದು ವರ್ಷಗಳ ಹಿಂದೆ ಶನಿ ಶಿಂಗ್ನಾಪುರ ದೇವಾಲಯದ ಟ್ರಸ್ಟ್ ಬೋರ್ಡ್ ತನ್ನ ಮೊದಲ ಮಹಿಳಾ ಅಧ್ಯಕ್ಷರನ್ನು ನೇಮಿಸಿತು. ಆದರೆ ಭಾರತದ ಬಹುಪಾಲು ದೇವಾಲಯಗಳ ವ್ಯವಸ್ಥಾಪಕ ಮಂಡಳಿಗಳಲ್ಲಿ ಮಹಿಳೆಯರಿಗೆ ಸೂಕ್ತ ಪ್ರಾತಿನಿಧ್ಯವಿಲ್ಲ. ಅಯೋಧ್ಯ ದೇವಾಲಯದ ಎಲ್ಲಾ 15 ಟ್ರಸ್ಟಿಗಳು ಪುರುಷರಾಗಿರುವುದು ತೀರ ಇತ್ತೀಚಿನ ಉದಾಹರಣೆ. ಟ್ರಸ್ಟಿಗಳ ಸಂಯೋಜನೆ ಮತ್ತು ನೇಮಕಾತಿಯನ್ನು ಸಾಮಾನ್ಯವಾಗಿ ಆಯಾ ರಾಜ್ಯ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಚಾರಿಟಬಲ್ ದತ್ತಿ (ಎಚ್‌ಆರ್ ಮತ್ತು ಸಿಇ) ಶಾಸನದಡಿಯಲ್ಲಿ ನಿಯಂತ್ರಿಸಲಾಗುತ್ತದೆ. ಕೇರಳ, ತಮಿಳುನಾಡು ಮತ್ತು ಕರ್ನಾಟಕದಂತಹ ರಾಜ್ಯಗಳು ಟ್ರಸ್ಟಿಗಳ ಮಂಡಳಿಯಲ್ಲಿ ಮಹಿಳೆಯರಿಗೆ ಮೀಸಲಾತಿ ಕಡ್ಡಾಯಗೊಳಿಸುವ ಕಾನೂನುಗಳನ್ನು ಹೊಂದಿವೆ. ಆಂಧ್ರಪ್ರದೇಶವು ಇತ್ತೀಚಿನ ಇದನ್ನು ಜಾರಿ ಮಾಡಿದೆ. (2019 ರಲ್ಲಿ) ಅಲ್ಲಿ ದೇವಾಲಯ ಸಮಿತಿಗಳಲ್ಲಿ ಮಹಿಳೆಯರಿಗೆ ಶೇಕಡಾ 50ರಷ್ಟು ಮೀಸಲಾತಿ ನೀಡಲಾಗಿದೆ.
ಪುದುಚೇರಿ ಮತ್ತು ಒಡಿಶಾದಂತಹ ಅನೇಕ ರಾಜ್ಯಗಳ ಕಾನೂನುಗಳು ದೇವಾಲಯ ಸಮಿತಿಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಸೂಚಿಸುವುದಿಲ್ಲ. ಬೋರ್ಡ್ ಆಫ್ ಟ್ರಸ್ಟಿಗಳಲ್ಲಿ ತಮಿಳುನಾಡು ಮಹಿಳೆಯರಿಗೆ ಮೀಸಲಾತಿ ನೀಡಿದ್ದರೂ, ರಾಜ್ಯಮಟ್ಟದ ಸಲಹಾ ಸಮಿತಿಯ ಸಂದರ್ಭದಲ್ಲಿ ಅದು ಅಂತಹ ನಿಬಂಧನೆಗೆ ಒಳಪಡುವುದಿಲ್ಲ. ದೇವಾಲಯ ಆಡಳಿತದ ವಿಷಯಗಳಲ್ಲಿ ರಾಜ್ಯ ಸರ್ಕಾರಕ್ಕೆ ಸಲಹೆ ಮತ್ತು ಮಾರ್ಗದರ್ಶನ ನೀಡಲು ತಮಿಳುನಾಡು ಹಿಂದೂ ಧಾರ್ಮಿಕ ಮತ್ತು ದತ್ತಿ ಕಾಯ್ದೆ 1959ರ ಅಡಿಯಲ್ಲಿ ಈ ಸಮಿತಿಯನ್ನು ರಚಿಸಲಾಗಿದೆ. ನಿರ್ಧಾರ ತೆಗೆದುಕೊಳ್ಳುವ ಉನ್ನತ ಮಟ್ಟದಲ್ಲಿ ಮಹಿಳೆಯರ ಅನುಪಸ್ಥಿತಿಯು ನಿರಾಶಾದಾಯಕವಾಗಿದೆ.
ಎಚ್‌ಆರ್‌ ಆ್ಯಂಡ್‌ಇ ಶಾಸನದ ಹೊರತಾಗಿ, ದೇವಾಲಯಗಳನ್ನು ಪ್ರತ್ಯೇಕ ದೇವಾಲಯ ಕಾಯ್ದೆಗಳಡಿ ನಿರ್ವಹಿಸಲಾಗುತ್ತದೆ. ಒಡಿಶಾದ ಪುರಿ ಜಗನ್ನಾಥ ದೇವಾಲಯವು ಶ್ರೀ ಜಗನ್ನಾಥ ಪುರಿ ಕಾಯ್ದೆ 1955 ಎಂಬ ವಿಶೇಷ ಕಾನೂನನ್ನು ಹೊಂದಿದೆ, ಇದು ದೇವಾಲಯದ ಮೇಲ್ವಿಚಾರಣೆ, ನಿಯಂತ್ರಣ ಮತ್ತು ನಿರ್ವಹಣೆಯನ್ನು ಸೂಚಿಸುತ್ತದೆ. ಈ ಕಾರ್ಯಗಳನ್ನು ಶ್ರೀ ಜಗನ್ನಾಥ ದೇವಾಲಯ ವ್ಯವಸ್ಥಾಪನಾ ಸಮಿತಿಯು ನಿರ್ವಹಿಸುತ್ತದೆ, ಆದರೆ ಈ ಕಾಯ್ದೆಯು ಸಮಿತಿಯಲ್ಲಿ ಮಹಿಳೆಯರ ಬಗ್ಗೆ ನಿಬಂಧನೆ ಒಳಗೊಂಡಿಲ್ಲ. ಮಹಾರಾಷ್ಟ್ರದ ಸಿದ್ಧಿ ವಿನಾಯಕ ಗಣಪತಿ ದೇವಸ್ಥಾನ ಮತ್ತು ಜಮ್ಮು ಮತ್ತು ಕಾಶ್ಮೀರದ ವೈಷ್ಣೋ ದೇವಿ ದೇಗುಲವನ್ನು ನಿಯಂತ್ರಿಸುವ ಕಾನೂನುಗಳಲ್ಲಿಯೂ ಸಹ ಸಮಿತಿಯಲ್ಲಿ ಮಹಿಳಯರು ಇರುವ ಬಗ್ಗೆ ನಿಬಂಧನೆಗಳಿಲ್ಲ.
ಮುಸ್ಲಿಮರಲ್ಲಿ, ವಕ್ಫ್ ಕಾಯ್ದೆ 1995 ರ ಕಾಯ್ದೆಯ ಸೆಕ್ಷನ್ 14 ರ ಅಡಿಯಲ್ಲಿ ಮಹಿಳಾ ಪ್ರಾತಿನಿಧ್ಯ ಕಡ್ಡಾಯಗೊಳಿಸಲಾಗಿದೆ. ಅಂತೆಯೇ, ಸಿಖ್ ಗುರುದ್ವಾರ ಕಾಯ್ದೆ 1925 ರ ಅಡಿಯಲ್ಲಿ ಶಿರೋಮಣಿ ಗುರುದ್ವಾರ ಪ್ರಬಂಧಕ್ ಸಮಿತಿಯು ನಿರ್ವಹಿಸುವ ಸುವರ್ಣ ದೇವಾಲಯವು ಮಹಿಳೆಯರಿಗೆ ಮತದಾನದ ಹಕ್ಕು ಮತ್ತು ಸಮಿತಿಗೆ ಚುನಾವಣಾ ಹಕ್ಕನ್ನು ಒದಗಿಸುತ್ತದೆ.
ಆದರೆ ವಾಸ್ತವ ಬೇರೆಯೇ ಇದೆ. ದಕ್ಷಿಣ ರಾಜ್ಯಗಳು ಅದರಲ್ಲಿಯೂ ಕೇರಳವನ್ನು ಹೊರತುಪಡಿಸಿ, ಉಳಿದ ರಾಜ್ಯಗಳ ದೇವಾಲಯದ ಆಡಳಿತದಲ್ಲಿ ಮಹಿಳೆಯರ ಪ್ರಮಾಣ ತೀರಾ ಕಡಿಮೆ. ಇದು ಹಿಂದೂ ದೇವಾಲಯಗಳಿಗೆ ಮಾತ್ರ ಸೀಮಿತವಾಗಿಲ್ಲ. ಮಸೀದಿಗಳು ಮತ್ತು ಗುರುದ್ವಾರಗಳ ಆಡಳಿತದಲ್ಲಿಯೂ ಮಹಿಳೆಯರ ಸ್ಥಾನ ಉತ್ತೇಜನಕಾರಿಯಾಗಿಲ್ಲ.
ವೇದಗಳು ಮುಟ್ಟಿನ ರಕ್ತವನ್ನು ‘ಜೀವ ನೀಡುವವರು’ ಎಂದು ಪೂಜಿಸಿದರೆ, ಧಾರ್ಮಿಕ ಸ್ಥಳಗಳು ಮಹಿಳೆಯರ ಜೀವಶಾಸ್ತ್ರವನ್ನು ಅನೇಕ ವೇಳೆ ಬಳಸಿಕೊಳ್ಳುತ್ತವೆ. ಪ್ರತಿ ವರ್ಷ ಒಡಿಶಾದಲ್ಲಿ ಆಚರಿಸಲಾಗುವ ‘ರಾಜಾ ಪರ್ಬಾ’ ಹಬ್ಬವು ಮಹಿಳೆಯ ಮುಟ್ಟಿನ ಚಕ್ರವನ್ನು ಸಮನಾಗಿ ಪರಿಗಣಿಸುವ ಮಾತೃ ಭೂಮಿಯ ಮುಟ್ಟನ್ನು ಆಚರಿಸುತ್ತದೆ. ಮೂರು ದಿನಗಳ ಹಬ್ಬದಲ್ಲಿ ಮಾತೃ ಭೂಮಿ ಮುಟ್ಟಾಗುತ್ತದೆ ಎಂದು ನಂಬಲಾಗಿದೆ. ಅವಳ ಮುಟ್ಟಿನ ದಿನಗಳಲ್ಲಿ ಭೂಮಿಯ ಮೇಲಿನ ಗೌರವದ ಸಂಕೇತವಾಗಿ, ಎಲ್ಲಾ ಕೃಷಿ ಕೆಲಸಗಳು ಸ್ಥಗಿತಗೊಳ್ಳುತ್ತವೆ. ಅಂತೆಯೇ, ಅಂಬುಬಾಚಿ ಮೇಳವು ಅಸ್ಸಾಂನ ಗುವಾಹಟಿಯ ಕಾಮಾಕ್ಯ ದೇವಸ್ಥಾನದಲ್ಲಿ ನಡೆಯುವ ವಾರ್ಷಿಕ ಜಾತ್ರೆ. ಇದು ಕಾಮಾಖ್ಯ ದೇವಿಯ ಮುಟ್ಟಿನ ಕೋರ್ಸ್ ಅನ್ನು ಆಚರಿಸುತ್ತದೆ.ಆದರೆ ದೇವಸ್ಥಾನಗಳಲ್ಲಿ ಮಾತ್ರ ಮಹಿಳೆಯರ ಪ್ರಾತಿನಿಧ್ಯ ಕಡಿಮೆ. ಇದು ದೇವಸ್ಥಾನಗಳಿಗೆ ಮಾತ್ರ ಸೀಮಿತವಾಗಿಲ್ಲ, ಮಸೀದಿಗಳು, ಚರ್ಚ್‌ಗಳು ಹಾಗೂ ಗುರುದ್ವಾರಗಳು ಇದರಿಂದ ಹೊರತಾಗಿಲ್ಲ.

ಪ್ರಮುಖ ಸುದ್ದಿ :-   ರಾಜ್‌ ಕುಂದ್ರಾಗೆ ಸೇರಿದ ₹97 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿದ ಇ.ಡಿ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement