ಬಿಜೆಪಿ ಅಧಿಕಾರಕ್ಕೆ ಬಂದ್ರೆ ಸಿಎಂ ಆಗಲು ಸಿದ್ಧ: ಮೆಟ್ರೋಮ್ಯಾನ್‌ ಶ್ರೀಧರನ್‌

ಕೇರಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ತಾನು ಮುಖ್ಯಮಂತ್ರಿ ಹುದ್ದೆಗೇರಲು ಆಸಕ್ತಿ ಹೊಂದಿದ್ದಾಗಿ ಮೆಟ್ರೋಮ್ಯಾನ್‌ ಇ. ಶ್ರೀಧರನ್‌ ಹೇಳಿದ್ದಾರೆ.
ಬಿಜೆಪಿ ಸೇರಲು ಉತ್ಸುಕತೆ ಹೊಂದಿರುವುದಾಗಿ ಹೇಳಿಕೆ ನೀಡಿದ ಮರುದಿನವೇ ಸಿಎಂ ಹುದ್ದೆ ವಹಿಸಿಕೊಳ್ಳಲು ಮುಕ್ತನಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ಕೇರಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿದರೆ ರಾಜ್ಯವನ್ನು ಸಾಲದ ಬಲೆಯಿಂದ ಹೊರಗೆ ತರುವುದು ಮತ್ತು ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಗಮನ ಹರಿಸಲಾಗುವುದು ಎಂದು ಇನ್ನಷ್ಟೇ ಪಕ್ಷಕ್ಕೆ ಸೇರಿಕೊಳ್ಳಲಿರುವ ಶ್ರೀಧರನ್‌ ಹೇಳಿದ್ದಾರೆ.
ರಾಜ್ಯಪಾಲನಾಗಲು ಆಸಕ್ತಿ ಹೊಂದಿಲ್ಲ. ಯಾವುದೇ ಅಧಿಕಾರವಿಲ್ಲದ ಸಾಂವಿಧಾನಿಕ ಸ್ಥಾನದಿಂದ ರಾಜ್ಯಕ್ಕೆ ಯಾವುದೇ ಕೊಡುಗೆ ನೀಡುವುದು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದರು.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement