ಹುಬ್ಬಳ್ಳಿಗೆ ಬರಲಿವೆ ಮಲೇಶಿಯಾ ಸೈಕಲ್‌ಗಳು

posted in: ರಾಜ್ಯ | 0

ಸ್ಮಾರ್ಟ್‌ ಸಿಟಿ ಯೋಜನೆಯಡಿ ಬೈಸಿಕಲ್‌ ಪೂರೈಸಲು ಚೀನಾ ಕಂಪನಿಯೊಂದಿಗಿನ ಟೆಂಡರ್‌ ರದ್ದುಗೊಂಡ ಹಿನ್ನೆಲೆಯಲ್ಲಿ ಮಲೇಶಿಯಾ ಸೈಕಲ್‌ಗಳು ಹುಬ್ಬಳ್ಳಿಗೆ ಬರಲಿವೆ.
ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದ 340 ಸೈಕಲ್‌ಗಳು ಕೌಲಾಲಂಪುರದಿಂದ ಹಡಗು ಏರಿದ್ದು, ಮುಂದಿನ ತಿಂಗಳ ಆರಂಭದಲ್ಲಿ ಹುಬ್ಬಳ್ಳಿ ರಸ್ತೆಯಲ್ಲಿ ಮಲೇಶಿಯಾ ಸೈಕಲ್‌ಗಳು ಸಂಚರಿಸಲಿವೆ. ಪರಿಸರ ಸ್ನೇಹಿ ಸಾರಿಗೆಗೆ ಉತ್ತೇಜನ ನೀಡುವ ಉದ್ದೇಶದಿಂದ ಸ್ಮಾರ್ಟ್‌ ಸಿಟಿ ಯೋಜನೆಯಡಿ ಸೈಕಲ್‌ ಸವಾರಿಗೆ ಆದ್ಯತೆ ನೀಡಲಾಗುತ್ತಿದೆ. ಮಾಲಿನ್ಯಕ್ಕೆ ಕಾರಣವಾಗುವ ಸ್ಕೂಟರ್‌, ಬೈಕ್‌ಗಳ ಬದಲಿಗೆ ಸೈಕಲ್‌ ಬಳಸಲು ಪ್ರೇರೇಪಿಸುವುದು ಯೋಜನೆ ಉದ್ದೇಶವಾಗಿದೆ. ನಗರದ ಹಲವು ಬಡಾವಣೆಗಳಲ್ಲಿ ಸೈಕಲ್‌ಗಾಗಿ ಪ್ರತ್ಯೇಕ ಪಥ ನಿರ್ಮಿಸಲಾಗಿದೆ.
ಮಲೇಶಿಯಾದಿಂದ ಬರುವ ಸೈಕಲ್‌ಗಳು ಹಗುರವಾಗಿದ್ದು, ಇದರಲ್ಲಿ ಆರ್‌ಎಫ್‌ಐಡಿ ಚಿಪ್‌ ಅಳವಡಿಸಲಾಗಿದೆ. ಇದರಿಂದ ಸೈಕಲ್‌ ಎಲ್ಲಿದೆ ಎಂಬುದನ್ನು ಪತ್ತೆ ಮಾಡಲು ಸಹಾಯಕವಾಗುತ್ತದೆ. ಆಧಾರ ಕಾರ್ಡ್‌ ಹಾಗೂ ಮೊಬೈಲ್‌ ಸಂಖ್ಯೆ ನೀಡಿ ಸೈಕಲ್‌ ಪಡೆಯಬಹುದು. ಸೈಕಲ್‌ ಬಳಕೆ ಶುಲ್ಕವನ್ನು ಆನ್‌ಲೈನ್‌ನಲ್ಲಿ ಪಾವತಿಸಬೇಕಾಗುತ್ತದೆ.

advertisement

ಕ್ಷಣ ಕ್ಷಣದ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
ಅಡ್ಮಿಶನ್ ಗಾಗಿ ಇಂದೇ ಕರೆ ಮಾಡಿ
9535127775 / 9901837775 / 6364528715 / 08362775155 / https://icsmpucollege.com/

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

/ 5. ಒಟ್ಟು ವೋಟುಗಳು

ಓದಿರಿ :-   ಭಾರಿ ಮಳೆ ಹಿನ್ನೆಲೆ : ನಾಳೆಯೂ ದಕ್ಷಿಣ ಕನ್ನಡದ ಶಾಲಾ-ಕಾಲೇಜುಗಳಿಗೆ ರಜೆ
advertisement

ನಿಮ್ಮ ಕಾಮೆಂಟ್ ಬರೆಯಿರಿ