ಸುಭಾಸಚಂದ್ರ ಬೋಸ್ ಮರೆಸಲು ವ್ಯವಸ್ಥಿತ ಯತ್ನ: ಅಮಿತ್‌ ಶಾ

ನೇತಾಜಿ ಸುಭಾಸಚಂದ್ರ ಬೋಸ್‌ ಅವರನ್ನು ಮರೆಯುವಂತೆ ವ್ಯವಸ್ಥಿತ ಯತ್ನ ನಡೆಯಿತು, ಆದರೆ ಅವರ ಧೈರ್ಯ, ದೇಶಭಕ್ತಿ ಹಾಗೂ ನಿಸ್ವಾರ್ಥ ಸೇವೆಯಿಂದಾಗಿ ಅವರ ಹೆಸರು ಶಾಶ್ವತವಾಗಿರುತ್ತದೆ, ಭವಿಷ್ಯದ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದರು.
ಬಂಗಾಳಿ ಕ್ರಾಂತಿಕಾರಿಗಳಿಗೆ ಗೌರವ ಸಲ್ಲಿಸುವ ಶೌರ್ಯಾಂಜಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರರಿಂದ ನಾವು ಸ್ಫೂರ್ತಿ ಪಡೆಯಬೇಕು ಎಂದು ಯುವಕರಿಗೆ ಕಿವಿಮಾತು ಹೇಳಿದರು.
ನೇತಾಜಿ ಸುಭಾಸ್ ಚಂದ್ರ ಬೋಸ್ ಅವರನ್ನು ಮರೆಸಲು ಪ್ರಯತ್ನಗಳು ನಡೆದವು. ಆದರೆ ಅದು ಸಾಧ್ಯವಾಗಲಿಲ್ಲ ಎಂದರು.
ನೇತಾಜಿಯನ್ನು ಈಗಲೂ ಜನರು ಪ್ರೀತಿಸುತ್ತಾರೆ ಮತ್ತು ಗೌರವಿಸುತ್ತಾರೆ. ಅವರ ಅದಮ್ಯ ಮನೋಭಾವ ಜನರಿಗೆ ಸ್ಫೂರ್ತಿ ನೀಡುತ್ತದೆ ಎಂದ ಶಾ, ಯುವಕರು ಸುಭಾಸಚಂದ್ರ ಅವರ ಜೀವನ ಮತ್ತು ಹೋರಾಟವನ್ನು ಓದಿ ತಿಳಿದುಕೊಳ್ಳಬೇಕೆಂದರು.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement