ಜೈ ಶ್ರೀರಾಮ ಜಪ ಆಕ್ಷೇಪಿಸುವವರನ್ನ ದೇಶ ಎಂದಿಗೂ ಸ್ವೀಕರಿಸಲ್ಲ

ಕೋಲ್ಕತಾ: ಜೈ ಶ್ರೀರಾಮ್ ಜಪವನ್ನು ಆಕ್ಷೇಪಿಸುವವರನ್ನು ದೇಶದಲ್ಲಿ ಎಂದಿಗೂ ಸ್ವೀಕರಿಸಲಾಗುವುದಿಲ್ಲ ಎಂದು ಮಾಜಿ ತೃಣಮೂಲ ಸಂಸದ ದಿನೇಶ್ ತ್ರಿವೇದಿ ಹೇಳಿದ್ದಾರೆ.
ಕಳೆದ ಆರು ವರ್ಷಗಳಿಂದ ಅವರು ಎದುರಿಸಿದ ಹಲವಾರು “ಅವಮಾನ”ಗಳಿಂದಾಗಿ ತೃಣಮೂಲ ಕಾಂಗ್ರೆಸ್ ತೊರೆಯಬೇಕಾಯಿತು ಎಂದು ಸಚಿವರು ದಿ ಪ್ರಿಂಟ್ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ಭ್ರಷ್ಟಾಚಾರ ಮತ್ತು ಹಿಂಸಾಚಾರಕ್ಕೆ ನನ್ನ ಆಕ್ಷೇಪಣೆ ಕೇಳುವ ಬದಲು, ನಾನು ಅವಮಾನವನ್ನು ಎದುರಿಸಬೇಕಾಯಿತು” ಎಂದು ಅವರು ಹೇಳಿದರು.
ಫೆಬ್ರವರಿ 12 ರಂದು ರಾಜ್ಯಸಭೆಯಲ್ಲಿ ಮಾತನಾಡುತ್ತಿದ್ದ ವೇಳೆ ತ್ರಿವೇದಿ ಪಶ್ಚಿಮ ಬಂಗಾಳದ ಆಡಳಿತ ಪಕ್ಷವಾದ ಟಿಎಂಸಿಯನ್ನು ತೊರೆದರು.ಜೈ ಶ್ರೀ ರಾಮ್ ಎಂದು ಜಪಿಸಿದ ಜನರನ್ನು ಖಂಡಿಸುವಂತೆ” ಕೇಳಿಕೊಳ್ಳುವುದು ಸೇರಿದಂತೆ ಹಲವಾರು ಸಂದರ್ಭಗಳಲ್ಲಿ ಪಕ್ಷವು ಅವರನ್ನುತನ್ನನ್ನು ಮುಜುಗರಕ್ಕೀಡುಮಾಡಿದೆ ಎಂದು ಅವರು ಹೇಳಿದ್ದಾರೆ..
ಶ್ರೀರಾಮ್ ಭಾರತೀಯ ಸಂಸ್ಕೃತಿಯನ್ನು ಪ್ರತಿನಿಧಿಸುತ್ತಾನೆ.”ನಾವು ಜೈ ಶ್ರೀರಾಮ್ ಎಂದು ಹೇಳಿದಾಗ, ನಾವು ಮರ್ಯಾದ ಪುರುಷೋತ್ತಮ್ ರಾಮನನ್ನು ಗೌರವಿಸುತ್ತೇವೆ. ಅದಕ್ಕೆ ಆಕ್ಷೇಪಣೆ ಇರುವ ಯಾರನ್ನೂ ಭಾರತ ಒಪ್ಪುವುದಿಲ್ಲ. ”ಜೈ ಶ್ರೀ ರಾಮ್ ಎಂದಿಗೂ ರಾಜಕೀಯ ಘೋಷಣೆ” ಆಗಿಲ್ಲ. ಆದರೆ ಪಶ್ಚಿಮ ಬಂಗಾಳದಲ್ಲಿ “ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಮತ-ಬ್ಯಾಂಕ್ ರಾಜಕೀಯದ ವಿರುದ್ಧ ಜನರ ಅಸಮಾಧಾನದ ಅಭಿವ್ಯಕ್ತಿಯಾಗಿದೆ” ಎಂದು ಅಭಿಪ್ರಾಯಪಟ್ಟರು.
ಕೋಲ್ಕತ್ತಾದ ವಿಕ್ಟೋರಿಯಾ ಸ್ಮಾರಕದಲ್ಲಿ ನೇತಾಜಿ ಸುಭಾಸ್ ಚಂದ್ರ ಬೋಸ್ ಅವರ 125 ನೇ ಜನ್ಮದಿನಾಚರಣೆಯನ್ನು ಆಚರಿಸಲು ಜನವರಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಮತಾ ಬ್ಯಾನರ್ಜಿ ಮಾತನಾಡುವಾಗ ಜೈ ಶ್ರೀ ರಾಮ್ ಎಂದು ಪ್ರೇಕ್ಷಕರು ಕೂಗಿದ್ದು ಅವರನ್ನು ಕೆರಳಿಸಿತ್ತು. ಇದನ್ನು “ರಾಜಕೀಯ ಘೋಷಣೆ” ಎಂದು ಕರೆದ ಮುಖ್ಯಮಂತ್ರಿ, ಸರ್ಕಾರದ ಕಾರ್ಯಕ್ರಮಗಳು ಸ್ವಲ್ಪ ಘನತೆ ಹೊಂದಿರಬೇಕು ಎಂದು ಹೇಳಿ ಭಾಷಣ ಮಾಡಲು ನಿರಾಕರಿಸಿದರು. ತೃಣಮೂಲ ಕಾಂಗ್ರೆಸ್ ಮುಖಂಡರು ಘೋಷಣೆ ಕೂಗುವುದನ್ನು ಖಂಡಿಸಿದರು ಮತ್ತು ಇದನ್ನು ಮುಖ್ಯಮಂತ್ರಿಗೆ ಮಾಡಿದ ಅವಮಾನ ಎಂದು ಕರೆದರು.
ಇದಕ್ಕೆ ತೃಣಮೂಲ ಕಾಂಗ್ರೆಸ್ ಸಂಸ್ಥಾಪಕ-ಸದಸ್ಯರಾದ ತ್ರಿವೇದಿ ಬೇರೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಒಂದಷ್ಟು ಜನರು “ಜೈ ಶ್ರೀ ರಾಮ್ ಎಂದು ಕೂಗುತ್ತ ಆಡಳಿತದ ವಿರುದ್ಧ ತಮ್ಮ ಆತಂಕ, ಹತಾಶೆ ಮತ್ತು ಅಸಮಾಧಾನವನ್ನು ಹೊರಹಾಕುತ್ತಿದ್ದಾರೆ” ಎಂದು ಅಭಿಪ್ರಾಯಪಟ್ಟಿದ್ದಾರೆ.

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಇಂದಿನ ಪ್ರಮುಖ ಸುದ್ದಿ :-   ದೆಹಲಿ ಮದ್ಯ ಪ್ರಕರಣ : ಗೋವಾ ಚುನಾವಣಾ ಪ್ರಚಾರಕ್ಕೆ ಹಗರಣದ ಹಣ ಬಳಸಿಕೊಂಡ ಎಎಪಿ-ಇ.ಡಿ.ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

/ 5. ಒಟ್ಟು ವೋಟುಗಳು

ನಿಮ್ಮ ಕಾಮೆಂಟ್ ಬರೆಯಿರಿ

advertisement