ಮೂರಂಕಿಗೇರಿದ ಪೆಟ್ರೋಲ್‌ ಬೆಲೆ: ರಾಜಸ್ಥಾನದಲ್ಲಿ ಪ್ರತಿ ಲೀಟರ್‌ಗೆ ೧೦೦ರೂ.

ಮುಂಬೈ:ರಾಜಸ್ಥಾನದಲ್ಲಿ ಪೆಟ್ರೋಲ್‌ ಬೆಲೆ ೧೦೦ ರೂ.ಗೆ ಏರಿಕೆ ಕಂಡಿದ್ದರೆ ಉಳಿದೆಡೆ ಮೂರಂಕಿ ತಲುಪುವ ಧಾವಂತದಲ್ಲಿದೆ.

ಗಂಗನಗರ ಜಿಲ್ಲೆಯಲ್ಲಿ ಪೆಟ್ರೋಲ್‌ ಪ್ರತಿ ಲೀಟರ್‌ಗೆ ೧೦೦ರೂ.ನಂತೆ ಮಾರಾಟವಾಗುತ್ತಿದೆ. ಮುಂಬೈನಲ್ಲಿ ಶನಿವಾರ ಪೆಟ್ರೋಲ್ ಬೆಲೆ ಸಾರ್ವಕಾಲಿಕ ಗರಿಷ್ಠ ರೂ. ೯೭ ಕ್ಕೆ ತಲುಪಿದ್ದರೆ, ಡೀಸೆಲ್ ದೇಶದ ಆರ್ಥಿಕ ರಾಜಧಾನಿಯಲ್ಲಿ ರೂ. ೮೮.೦೬ ಕ್ಕೆ ಮಾರಾಟವಾಗುತ್ತಿದೆ. ಕಳೆದ ೧೨ ದಿನಗಳಿಂದ ನಗರದಲ್ಲಿ ಇಂಧನ ಬೆಲೆ ಏರಿಕೆಯಾಗುತ್ತಿದೆ.
2018 ರಲ್ಲಿ ಪೆಟ್ರೋಲ್ ಬೆಲೆ ಗರಿಷ್ಠ ರೂ. ೯೦ರ ಗಡಿ ದಾಟಿ ಪ್ರತಿ ಲೀಟರ್‌ಗೆ ರೂ. ೯೧.೩೪ ಕ್ಕೆ ಮಾರಾಟವಾಗಿತ್ತು. ಕೇಂದ್ರ ತೆರಿಗೆಯನ್ನು ತಗ್ಗಿಸುವ ಮೂಲಕ ಡೀಸೆಲ್ ಬೆಲೆಯನ್ನು ಕೂಡಲೇ ಕಡಿತಗೊಳಿಸಬೇಕೆಂದು ಕರೆ ನೀಡಿದರು. “ಕೇಂದ್ರ ಸರ್ಕಾರವು ಮೌಲ್ಯವರ್ಧಿತ ತೆರಿಗೆಯನ್ನು ಕಡಿತಗೊಳಿಸಲು ಮತ್ತು ದೇಶಾದ್ಯಂತ ಡೀಸೆಲ್ ಬೆಲೆಯಲ್ಲಿ ಏಕರೂಪತೆಯನ್ನು ತರಲು ರಾಜ್ಯಗಳಿಗೆ ಸಲಹೆ ನೀಡಬೇಕು ಎಂದು ಅಖಿಲ ಭಾರತ ಮೋಟರ್‌ ಸಾರಿಗೆ ಕಾಂಗ್ರೆಸ್‌ ಅಧ್ಯಕ್ಷ ಬಾಲ್‌ ಮಲ್ಕಿತ್‌ ಸಿಂಗ್‌ ತಿಳಿಸಿದ್ದಾರೆ. ಫೆಬ್ರವರಿ 16 ರಿಂದ ತಮ್ಮ ಬೇಡಿಕೆಗಳ ಅನುಷ್ಠಾನಕ್ಕಾಗಿ ಅವರು ಕೇಂದ್ರಕ್ಕೆ 14 ದಿನಗಳ ಕಾಲಾವಕಾಶ ನೀಡಿದ್ದಾರೆ. ಬೇಡಿಕೆಗಳನ್ನು ಈಡೇರಿಸದಿದ್ದರೆ, ದೇಶಾದ್ಯಂತ ರಸ್ತೆ ಸಾರಿಗೆ ಸೇವೆಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಿದ್ದಾರೆ.

ಪ್ರಮುಖ ಸುದ್ದಿ :-   ಅತ್ಯಧಿಕ ಅಪಾಯದ ಮಟ್ಟ 6ರ ವಿರುದ್ಧ ರಕ್ಷಣೆಗಾಗಿ ದೇಶದ ಅತ್ಯಂತ ಹಗುರ ಬುಲೆಟ್ ಪ್ರೂಫ್ ಜಾಕೆಟ್‌ ಅಭಿವೃದ್ಧಿಪಡಿಸಿದ ಡಿ ಆರ್‌ ಡಿ ಒ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement