ಉತ್ತರಾಖಂಡದಲ್ಲಿ ಹಿಮಬಂಡೆ ಕುಸಿದು ಉಂಟಾದ ಪ್ರವಾಹದಲ್ಲಿ ಮೃತರ ಸಂಖ್ಯೆ ೬೭ಕ್ಕೇರಿದೆ.
ಭಾನುವಾರ ೨ ಶವಗಳನ್ನು ಹೊರತೆಗೆಯಲಾಗಿದ್ದು, ೧೫ನೇ ದಿನವೂ ಶೋಧ ಕಾರ್ಯ ಮುಂದುವರೆದಿದೆ. ಇನ್ನೂ ೧೩೭ ಜನರು ಕಾಣೆಯಾಗಿದ್ದಾರೆ. ತಪೋವನ ಬ್ಯಾರೇಜ್ ಬಳಿಯ ಡೆಸಿಲ್ಟಿಂಗ್ ಟ್ಯಾಂಕ್‌ನಿಂದ ಮೂರು ಶವಗಳನ್ನು ಹೊರತೆಗೆಯಲಾಗಿದೆ. ಫೆಬ್ರವರಿ ೭ರಂದು ಹಿಮಬಂಡೆ ಕುಸಿದು ಪ್ರವಾಹ ಉಂಟಾಗಿತ್ತು. ಇದರಿಂದ ೧೩.೨ ಮೆಗಾವ್ಯಾಟ್ ರಿಷಿಗಂಗಾ ಹೈಡಲ್ ಯೋಜನೆಯ ಕಾಮಗಾರಿ ಸಂಪೂರ್ಣ ಹಾಳಾಗಿದೆ. ಅಲ್ಲದೇ ತಪೋವನ-ವಿಷ್ಣುಗಡ ಹೈಡಲ್ ಯೋಜನೆ ಕಾಮಗಾರಿ ಹಾನಿಗೊಳಗಾಗಿದೆ. ಬ್ಯಾರೇಜ್‌ನಿಂದ ಸುರಂಗಕ್ಕೆ ಹರಿಯುತ್ತಿರುವ ನೀರು ರಕ್ಷಣಾ ಕಾರ್ಯಕ್ಕೆ ತಡೆಯೊಡ್ಡಿದೆ.
ನಿಮ್ಮ ಕಾಮೆಂಟ್ ಬರೆಯಿರಿ