ಐಎಂಎ ಹಗರಣದಲ್ಲಿ ನನ್ನ ಪಾತ್ರ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಹಗರಣ ಬೆಳಕಿಗೆ ಬಂದಿತ್ತು. ನಾನು ಸಿಸಿಬಿ ತನಿಖೆಗೆ ಆದೇಶಿಸಿದ್ದೆ. ಆ ವೇಳೆಗೆ ಹಗರಣದ ರೂವಾರಿ ದುಬೈಗೆ ಪರಾರಿಯಾಗಿದ್ದ. ಅಧಿಕಾರಿಗಳು ಅವನನ್ನು ಬಂಧಿಸಿ ತಂದರು. ನಾನೇ ತನಿಖೆಗೆ ಆದೇಶ ನೀಡಿದ ಮೇಲೆ ಹಗರಣದಲ್ಲಿ ನನ್ನ ಪಾತ್ರ ಎಲ್ಲಿರುತ್ತದೆ ಎಂದರು. ಜನರ ಹಣವನ್ನು ಲೂಟಿ ಮಾಡಿದ ಯಾವುದೇ ವ್ಯಕ್ತಿಗೆ ನಾನು ಈವರೆಗೆ ರಕ್ಷಣೆ ನೀಡಿಲ್ಲ ಎಂದು ಹೇಳಿದರು.
ನಿಮ್ಮ ಕಾಮೆಂಟ್ ಬರೆಯಿರಿ