ಪ್ರಧಾನಿಯಿಂದ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಇನ್‌ಸ್ಟಿಟ್ಯೂಟ್‌ ಆಫ್ ಮೆಡಿಕಲ್ ಸೈನ್ಸಸ್- ರಿಸರ್ಚ್ ನಾಳೆ ಉದ್ಘಾಟನೆ

ನವದೆಹಲಿ: ಸದ್ಯದಲ್ಲಿಯೇ ವಿಧಾನಸಭಾ ಚುನಾವಣೆ ಘೋಷಣೆಯಾಗುವ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳಕ್ಕೆ ಕೊಡುಗೆಗಳ ಮೇಲೆ ಕೊಡುಗೆ ನೀಡುತ್ತಿರುವ ಕೇಂದ್ರ ಸರ್ಕಾರದ ಪ್ರಮುಖ ಪಕ್ಷವಾದ ಚುನಾವಣೆ ಗೆಲ್ಲಲು ಸಾಕಷ್ಟು ಪ್ರಯತ್ನ ನಡೆಸಿದೆ.
ಈ ನಡುವೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಇನ್ಸ್‍ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಮತ್ತು ರಿಸರ್ಚ್ ಹೆಸರಿನ ಐಐಟಿಯನ್ನು ವೀಡಿಯೋ ಕಾನ್ಫರೆನ್ಸ್ ಮೂಲಕ ಫೆ.23ರಂದು ಉದ್ಘಾಟಿಸಲಿದ್ದಾರೆ.
ಅಲ್ಲದೆ, ಪಶ್ಚಿಮ ಬಂಗಾಳದ ಖರಗ್‍ಪುರದ 66ನೇ ಐಐಟಿ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ ಎಂದು ಪಿಎಂ ಕಚೇರಿ ತಿಳಿಸಿದೆ. ಶಿಕ್ಷಣ ಸಚಿವಾಲಯದ ನೆರವಿ ನೊಂದಿಗೆ ಖರಗ್‍ಪುರದಲ್ಲಿ ಡಾ. ಶ್ಯಾಮಪ್ರಸಾದ್ ಮುಖರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಆರಂಭಿಸಲಾಗಿದೆ. ಪ್ರಧಾನಿ ಅವರು ಫೆ.23ರ ಮಧ್ಯಾಹ್ನ 12.30ಕ್ಕೆ ವೀಡಿಯೋ ಸಂವಾದದ ಮೂಲಕ ಈ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ವಿದ್ಯಾರ್ಥಿಗಳನ್ನು ಕುರಿತು 66ನೇ ಘಟಿಕೋತ್ಸವದಲ್ಲಿ ಮಾತನಾಡಲಿದ್ದಾರೆ ಎಂದು ಪಿಎಂಒ ಅಧಿಕಾರಿಗಳು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಪಶ್ಚಿಮ ಬಂಗಾಳದ ರಾಜ್ಯಪಾಲರು, ಕೇಂದ್ರ ಶಿಕ್ಷಣ ಸಚಿವರು ಹಾಗೂ ಕೇಂದ್ರ ಶಿಕ್ಷಣ ರಾಜ್ಯ ಸಚಿವರು ಪಾಲ್ಗೊಳ್ಳಲಿದ್ದಾರೆ. ಆಸ್ಪತ್ರೆಯು ತಂತ್ರಜ್ಞಾನ ಮತ್ತು ಹೆಲ್ತ್‍ಕೇರ್‌ ಸಮ್ಮಿಳಿತವಾಗಿದೆ. ಲನವಾಗಿದೆ.

ಪ್ರಮುಖ ಸುದ್ದಿ :-   ಮನಕಲಕುವ ಘಟನೆ....: ತಾಯಿಯ ಶವದ ಜೊತೆ 1 ವರ್ಷದಿಂದ ವಾಸಿಸುತ್ತಿದ್ದ ಅಕ್ಕ-ತಂಗಿ...!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement